ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಕ್ನೋ ಪೊಲೀಸರಿಗೆ ಬೆಂಗಳೂರು ಪೊಲೀಸರ ಕ್ಯಾಪ್ ಮೇಲೆ ಕಣ್ಣು

|
Google Oneindia Kannada News

ಲಕ್ನೋ, ಮೇ 17: ಉತ್ತರ ಭಾರತ ಬಿಸಿಲ ಧಗೆಯಿಂದ ತತ್ತರಿಸಿ ಹೋಗಿದೆ. ಉತ್ತರ ಪ್ರದೇಶದ ರಾಜಧಾನಿ ಲಕ್ನೋ ಪೊಲೀಸರು ಬಿಸಿಲ ತಾಪಮಾನಕ್ಕೆ ಸುಸ್ತಾಗಿದ್ದಾರೆ.

ಜೊತೆಗೆ ಸಲ್ಲಿನ ಸಂಚಾರ ವಿಭಾಗದ ಪೊಲೀಸರಿಗೆ ವಿತರಣೆ ಮಾಡಲಾಗಿರುವ ಉಣ್ಣೆಯ ಕ್ಯಾಪ್‌ನಿಂದ ಪೊಲೀಸ್ ಕಾನ್‌ಸ್ಟೇಬಲ್ ಗಳು ಬೇಸ್ತು ಬಿದ್ದಿದ್ದಾರೆ.

ಈ ಬಿಸಿಲಿನ ಝಳ ಮತ್ತು ತಾಪದಿಂದ ರಕ್ಷಿಸಿಕೊಳ್ಳುವ ನಿಟ್ಟಿನಲ್ಲಿ ಲಕ್ನೋ ಪೊಲೀಸ್ ಅಧಿಕಾರಿಗಳು ಖಾಕಿ ಬಣ್ಣದ ಉಣ್ಣೆಯ ಕ್ಯಾಪ್‌ಗಳಿಗೆ ಗುಡ್‌ಬೈ ಹೇಳಿ ಬೆಂಗಳೂರು ಸಂಚಾರಿ ಪೊಲೀಸರು ಹಾಕಿಕೊಳ್ಳುವ ಕ್ಯಾಪ್‌ಗಳಿಗೆ ಮೊರೆ ಹೋಗಲು ನಿರ್ಧರಿಸಿದ್ದಾರೆ.

ಅಪರಾಧ ಪ್ರಕರಣ: ಮೈಸೂರಿನಲ್ಲಿ ಪೊಲೀಸ್ ಉನ್ನತಾಧಿಕಾರಿಗಳಿಂದ ವಿಶೇಷ ಸಭೆಅಪರಾಧ ಪ್ರಕರಣ: ಮೈಸೂರಿನಲ್ಲಿ ಪೊಲೀಸ್ ಉನ್ನತಾಧಿಕಾರಿಗಳಿಂದ ವಿಶೇಷ ಸಭೆ

ಅಲ್ಲದೆ ಪರೀಕ್ಷಾರ್ಥ ಬಳಕೆಗಾಗಿ ಲಕ್ನೋ ಪೊಲೀಸರು ಬೆಂಗಳೂರು ಅಂಗಡಿಯೊಂದರಿಂದ 50 ಕ್ಯಾಪ್‌ಗಳನ್ನು ತರಿಸಿಕೊಂಡು ಬಳಸುತ್ತಿದ್ದಾರೆ ಎನ್ನುವ ಮಾಹಿತಿಯೂ ಲಬ್ಯವಾಗಿದೆ.

Lucknow traffic police get Bengaluru counterparts caps on trial basis

ಯುಪಿ ರಾಜಧಾನಿ ಲಕ್ನೋನಲ್ಲಿ ಭಾರಿ ಬಿಸಿಲು ಮತ್ತು ಝಳವಿದೆ. ಹೀಗಾಗಿ ಉಣ್ಣೆಯಿಂದ ಮಾಡಲ್ಪಟ್ಟಿರುವ ಕ್ಯಾಪ್‌ಗಳಿಂದ ಕೆಂಗೆಟ್ಟು ಹೋಗಿದ್ದಾರೆ. ಹೀಗಾಗಿ ಬೆಂಗಳೂರು ಪೊಲೀಸರ ಮಾದರಿಯ ಕ್ಯಾಪ್‌ಗಳನ್ನು ಬಳಸಲು ನಿರ್ಧರಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

English summary
Considering the inconvenience faced by traffic cops in performing their duties wearing a woollen cap under the scorching summer sun, Lucknow traffic police have inducted 50 caps used by Bengaluru traffic cops on a trial basis.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X