ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯಸಭೆ ಚುನಾವಣೆ; ಎಸ್‌ಪಿ ಬೆಂಬಲದೊಂದಿಗೆ ಕಪಿಲ್ ಸಿಬಲ್‌ ನಾಮಪತ್ರ

|
Google Oneindia Kannada News

ಲಕ್ನೋ, ಮೇ 25: ರಾಜ್ಯಸಭೆ ಚುನಾವಣೆಗೆ ಕಪಿಲ್ ಸಿಬಲ್ ಬುಧವಾರ ನಾಮಪತ್ರ ಸಲ್ಲಿಸಿದರು. ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಜೊತೆ ಅವರು ನಾಮಪತ್ರ ಸಲ್ಲಿಕೆ ಮಾಡಿದರು.

ನಾಮಪತ್ರ ಸಲ್ಲಿಕೆ ಮಾಡಿದ ಬಳಿಕ ಮಾತನಾಡಿ, "ಮೇ 16 ರಂದು ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದೇನೆ. ಇಲ್ಲಿ ಸ್ವತಂತ್ರ ಧ್ವನಿಯಾಗುವುದು ಮುಖ್ಯ, ವಿರೋಧ ಪಕ್ಷದಲ್ಲಿಯೇ ಇರುವಾಗ ನಾವು ಮೈತ್ರಿಯನ್ನು ರಚಿಸಲು ಬಯಸುತ್ತೇವೆ. ಆದ್ದರಿಂದ ನಾವು ಮೋದಿ ಸರ್ಕಾರವನ್ನು ವಿರೋಧಿಸಲು ಬಯಸುತ್ತೇವೆ" ಎಂದರು.

ವಿಸ್ಮಯಾ ವರದಕ್ಷಿಣೆ ಸಾವು: ಗಂಡ ಕಿರಣ್‌ಗೆ 10 ವರ್ಷದ ಜೈಲು ಶಿಕ್ಷೆ ವಿಸ್ಮಯಾ ವರದಕ್ಷಿಣೆ ಸಾವು: ಗಂಡ ಕಿರಣ್‌ಗೆ 10 ವರ್ಷದ ಜೈಲು ಶಿಕ್ಷೆ

ಕಪಿಲ್ ಸಿಬಲ್ ಹಿರಿಯ ವಕೀಲರಾಗಿ ಯಾದವ್ ಕುಟುಂಬದೊಂದಿಗೆ ನಿಕಟ ಸಂಬಂಧ ಹೊಂದಿದ್ದಾರೆ. ಅಖಿಲೇಶ್ ಯಾದವ್‌ಗೆ ಬೈಸಿಕಲ್ ಚಿಹ್ನೆಯನ್ನು ನೀಡಬೇಕು ಎಂದು ಸಿಬಲ್ ಜನವರಿ 2017 ರಲ್ಲಿ (ಯಾದವ್ ಕುಟುಂಬದ ಕಲಹದ ಸಂದರ್ಭದಲ್ಲಿ) ಚುನಾವಣಾ ಆಯೋಗದಲ್ಲಿ ವಾದ ಮಂಡಿಸಿದ್ದರು ಮತ್ತು ಅಂತಿಮವಾಗಿ ಅಖಿಲೇಶ್ ಚಿಹ್ನೆಯನ್ನು ಪಡೆದರು.

ನಿರೀಕ್ಷಣಾ ಜಾಮೀನು ಕೋರಿದ ಬಿಜೆಪಿ ಮಾಜಿ ಶಾಸಕ, ಪತ್ನಿ! ನಿರೀಕ್ಷಣಾ ಜಾಮೀನು ಕೋರಿದ ಬಿಜೆಪಿ ಮಾಜಿ ಶಾಸಕ, ಪತ್ನಿ!

"ಕಪಿಲ್ ಸಿಬಲ್ ಸಮಾಜವಾದಿ ಪಕ್ಷದ ಬೆಂಬಲದೊಂದಿಗೆ ರಾಜ್ಯಸಭೆಗೆ ತಮ್ಮ ನಾಮ ನಿರ್ದೇಶನವನ್ನು ಸಲ್ಲಿಸಿದ್ದಾರೆ. ಅವರು ಪ್ರಖ್ಯಾತ ವಕೀಲರು ಮತ್ತು ರಾಜಕೀಯ ವೃತ್ತಿ ಜೀವನವನ್ನು ಹೊಂದಿದ್ದಾರೆ. ಲೋಕಸಭೆ, ರಾಜ್ಯಸಭೆಯಲ್ಲಿ ಪ್ರಮುಖ ವಿಷಯಗಳನ್ನು ಸಮರ್ಥವಾಗಿ ಮಂಡಿಸಿ ಚರ್ಚೆ ನಡೆಸಿದ್ದರು. ದೇಶವು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದೆ ಮತ್ತು ಅವರು ರಾಜ್ಯಸಭೆಯಲ್ಲಿ ಪರಿಣಾಮಕಾರಿಯಾಗಿ ಸಮಸ್ಯೆಗಳನ್ನು ಮಂಡಿಸುತ್ತಾರೆ" ಎಂದು ನಾನು ಭಾವಿಸುತ್ತೇನೆ ಎಂದು ಅಖಿಲೇಶ್ ಯಾದವ್ ಹೇಳಿದರು.

ಮೂರು ಅಭ್ಯರ್ಥಿಗಳ ಹೆಸರು ಅಂತಿಮ

ಮೂರು ಅಭ್ಯರ್ಥಿಗಳ ಹೆಸರು ಅಂತಿಮ

ಉತ್ತರ ಪ್ರದೇಶದಿಂದ 11 ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಮೂವರು ಅಭ್ಯರ್ಥಿಗಳನ್ನು ಅಂತಿಮಗೊಳಿಸಲು ಸಮಾಜವಾದಿ ಪಕ್ಷದಲ್ಲಿ ತೀವ್ರ ಚರ್ಚೆಗಳು ಪ್ರಾರಂಭವಾತ್ತು. ಈ ಸ್ಪರ್ಧೆಯಲ್ಲಿ ಕೇಂದ್ರದ ಮಾಜಿ ಸಚಿವ ಕಪಿಲ್ ಸಿಬಲ್ ಮುಂಚೂಣಿಯಲ್ಲಿದ್ದರೆ, ರಾಷ್ಟ್ರೀಯ ಲೋಕದಳ (ಆರ್‌ಎಲ್‌ಡಿ) ಮುಖ್ಯಸ್ಥ ಜಯಂತ್ ಚೌಧರಿ ಉಮೇದುವಾರಿಕೆ ಬಗ್ಗೆಯೂ ಚರ್ಚೆಗಳು ನಡೆಯುತ್ತಿವೆ. ಕನೌಜ್‌ನ ಮಾಜಿ ಸಂಸದೆ ಹಾಗೂ ಎಸ್‌ಪಿ ಮುಖ್ಯಸ್ಥ ಅಖಿಲೇಶ್‌ ಯಾದವ್‌ ಪತ್ನಿ ಡಿಂಪಲ್‌ ಯಾದವ್‌ ಹೆಸರನ್ನು ಪಕ್ಷದ ಕೆಲವು ನಾಯಕರು ಪ್ರಸ್ತಾಪಿಸಿದ್ದರು.

ಮುಸ್ಲಿಂ ನಾಯಕರಿಂದ ತಾಯಾರಿ

ಮುಸ್ಲಿಂ ನಾಯಕರಿಂದ ತಾಯಾರಿ

ಸಮುದಾಯದಲ್ಲಿ ಪಕ್ಷದ ನಂಬಿಕೆಯನ್ನು ಪುನರುಚ್ಚರಿಸಲು ಮತ್ತು ಜನರನ್ನು ಮರೆಯುವುದಿಲ್ಲ ಎಂಬ ಸಂದೇಶವನ್ನು ರವಾನಿಸಲು ನಾಯಕತ್ವವು ರಾಜ್ಯಸಭೆಗೆ ಮುಸ್ಲಿಂ ಅಭ್ಯರ್ಥಿಯನ್ನು ಹೆಸರಿಸಬೇಕು ಎಂದು ಪಕ್ಷದ ಕೆಲವು ಮುಸ್ಲಿಂ ಮುಖಂಡರು ಅಭಿಪ್ರಾಯಪಟ್ಟಿದ್ದರು. ಅಂತೆಯೇ ಸಮಾಜವಾದಿ ಪಕ್ಷದ ಹಲವು ನಾಯಕರು ಮುಸ್ಲಿಂ ಅಭ್ಯರ್ಥಿಯನ್ನು ಹೆಸರಿಸಲು ಉತ್ಸುಕರಾಗಿದ್ದರು.

ಕಲಾಪದಲ್ಲಿ ಮಾಜಿ ಸಿಎಂ ಬ್ಯೂಸಿ

ಕಲಾಪದಲ್ಲಿ ಮಾಜಿ ಸಿಎಂ ಬ್ಯೂಸಿ

ಸುಹೇಲ್‌ದೇವ್ ಭಾರತೀಯ ಸಮಾಜ ಪಕ್ಷದ (ಎಸ್‌ಬಿಎಸ್‌ಪಿ) ಮುಖ್ಯಸ್ಥ ಓಂ ಪ್ರಕಾಶ್ ರಾಜ್‌ಭರ್ ಅಖಿಲೇಶ್ ಯಾದವ್ ಭೇಟಿ ಮಾಡಲು ಎದುರು ನೋಡುತ್ತಿದ್ದಾರೆ ಎನ್ನಲಾಗಿದೆ. ಆದರೆ, ಈಗ ನಡೆಯುತ್ತಿರುವ ವಿಧಾನಸಭೆ ಕಲಾಪದಲ್ಲಿ ಮಾಜಿ ಸಿಎಂ ಬ್ಯುಸಿಯಾಗಿರುವ ಕಾರಣ ಈವರೆಗೆ ಸಭೆ ನಡೆದಿರಲಿಲ್ಲ.

ಕಪಿಲ್‌ ರಾಜ್ಯಸಭೆಗೆ ಸಮರ್ಥರು, ಅರ್ಹರು: ಖಾನ್‌

ಕಪಿಲ್‌ ರಾಜ್ಯಸಭೆಗೆ ಸಮರ್ಥರು, ಅರ್ಹರು: ಖಾನ್‌

"ಕಪಿಲ್‌ ಸಿಬಲ್‌ ಈಗಾಗಲೇ ಎಸ್‌ಪಿಯ ಬೆಂಬಲಕ್ಕೆ ಬಂದಿದ್ದಾರೆ ಎಂಬುದು ಅರ್ಥವಾಗುವಂತಹದ್ದಾಗಿದೆ. ಎಸ್‌ಪಿ ಸಿಬಲ್ ಅವರನ್ನು ರಾಜ್ಯಸಭೆಗೆ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿಸಲು ಯೋಚಿಸುತ್ತಿದ್ದರೆ ನಾನು ಅತ್ಯಂತ ಸಂತೋಷ ಪಡುತ್ತೇನೆ. ಅವರು ಅದಕ್ಕೆ ಸಮರ್ಥರು ಮತ್ತು ಅದಕ್ಕೆ ಅರ್ಹರು, " ಎಂದು ಅಜಂ ಖಾನ್ ಮಂಗಳವಾರ ಹೇಳಿದ್ದರು.

English summary
Kapil Sibal on Wednesday filed the nomination for Rajya Sabha elections from Samajwadi Party in the presence of party chief Akhilesh Yadav.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X