ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುಪಿ: ಅಖಿಲೇಶ್ ಯಾದವ್ ವಿರುದ್ಧ ಬಿಜೆಪಿ ಟ್ವೀಟಾಸ್ತ್ರ

|
Google Oneindia Kannada News

ಲಕ್ನೋ, ಜನವರಿ 24: ಅಖಿಲೇಶ್ ಯಾದವ್ ಅವರ ಸಮಾಜವಾದಿ ಪಕ್ಷದಿಂದ ಉತ್ತರ ಪ್ರದೇಶ ಚುನಾವಣೆಯಲ್ಲಿ ಕಠಿಣ ಹೋರಾಟವನ್ನು ಎದುರಿಸುತ್ತಿರುವ ಬಿಜೆಪಿ, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಭ್ಯರ್ಥಿಗಳ ಪಟ್ಟಿಗಳ ವಿರುದ್ಧ ಹೊಸ ದಾಳಿಯನ್ನು ಮಾಡಿದೆ. ರಾಜ್ಯದ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಅವರು ಭಾನುವಾರ ಟ್ವೀಟ್ ಮಾಡಿದ್ದು, ಸಮಾಜವಾದಿ ಪಕ್ಷ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಏಕೆ ಬಹಿರಂಗಗೊಳಿಸುತ್ತಿಲ್ಲ. ಸಮಾಜವಾದಿ ಪಕ್ಷ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲು ಯಾಕೆ ಹೆದರುತ್ತಿದೆ ಎಂದು ಅಖಿಲೇಶ್ ಯಾದವ್ ಅವರನ್ನು ಕೇಳಿದ್ದಾರೆ.

ಸಮಾಜವಾದಿ ಪಕ್ಷದ ಮೂಲಗಳು ಹೇಳುವಂತೆ ಅಭ್ಯರ್ಥಿಗಳ ಪಟ್ಟಿಯನ್ನು ಬಹಿರಂಗಗೊಳಿಸಿದರೆ, ಬಿಜೆಪಿಯು ಅವುಗಳನ್ನು ಬಳಸಿಕೊಂಡು ಚುನಾವಣೆಯನ್ನು ಮತ್ತಷ್ಟು ಧ್ರುವೀಕರಣಗೊಳಿಸಲು ಪ್ರಯತ್ನಿಸುತ್ತದೆ. ಮುಸ್ಲಿಂ ಅಭ್ಯರ್ಥಿಗಳ ಹೆಸರನ್ನು ಹೈಲೈಟ್ ಮಾಡುವ ಮೂಲಕ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ದಾಖಲೆಗಳನ್ನು ಪ್ರಸಾರ ಮಾಡುತ್ತದೆ. ಎಸ್‌ಪಿ-ಆರ್‌ಎಲ್‌ಡಿ ಮೈತ್ರಿಕೂಟವು ಚುನಾವಣೆಯ 1 ನೇ ಹಂತದ ಮತದಾನದಲ್ಲಿ ಪಶ್ಚಿಮ ಯುಪಿ 58 ಸ್ಥಾನಗಳಿಗೆ 13 ಮುಸ್ಲಿಂ ಅಭ್ಯರ್ಥಿಗಳನ್ನು ಹೆಸರಿಸಿದೆ.

ಜನವರಿ 13 ರಂದು, ಸಮಾಜವಾದಿ ಪಕ್ಷವು ಮೈತ್ರಿಯಿಂದ 29 ಅಭ್ಯರ್ಥಿಗಳ ಹೆಸರುಗಳೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ಮತ್ತು ಪತ್ರಿಕೆಗಳಿಗೆ ಅಧಿಕೃತ ಪಟ್ಟಿಯನ್ನು ಬಿಡುಗಡೆ ಮಾಡಿತು. ಆದರೆ ಇದರ ಬಗ್ಗೆ ಹೆಚ್ಚಿನ ಟೀಕೆಗಳನ್ನು ಮಾಡಲಾಯಿತು. ಹೀಗಾಗಿ ಪಟ್ಟಿಗಳನ್ನು ಸಾರ್ವಜನಿಕವಾಗಿ ಪ್ರಕಟಿಸಿಲ್ಲ.

In UP, BJPs Latest Attack On Akhilesh Yadav Is Over Candidate Lists
ಅಲಿಘರ್‌ನ ಕೊಯಿಲ್ ವಿಧಾನಸಭಾ ಕ್ಷೇತ್ರದಿಂದ ಸಮಾಜವಾದಿ ಪಕ್ಷದ ಅಭ್ಯರ್ಥಿ ಅಜ್ಜು ಇಶಾಕ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಇದರಲ್ಲಿ ಮರೆ ಮಾಡಲು ಏನಿದೆ? ಎಂದು ಮರು ಪ್ರಶ್ನೆ ಕೇಳಿದ್ದಾರೆ. ಅಭ್ಯರ್ಥಿಯ ಹೆಸರುಗಳು ಹೇಗಾದರೂ ಸಾರ್ವಜನಿಕವಾಗುತ್ತವೆ. ಬಿಜೆಪಿಯವರೇ ತಮ್ಮ ಅಸಾಮರ್ಥ್ಯವನ್ನು ಮರೆಮಾಚಲು ಬಯಸುತ್ತಿದ್ದಾರೆ'' ಎಂದು ತಿರುಗೇಟು ನೀಡಿದರು.


ಜೊತೆಗ ಪಶ್ಚಿಮ ಉತ್ತರ ಪ್ರದೇಶದ ಹಾಪುರ್‌ನಲ್ಲಿರುವ ಸಮಾಜವಾದಿ ಪಕ್ಷದ ಜಿಲ್ಲಾಧ್ಯಕ್ಷ ದೇವೇಂದ್ರ ಜಾಖಡ್, "ನಮ್ಮ ಪಟ್ಟಿಗಳಿಗೂ ಬಿಜೆಪಿಗೂ ಏನು ಸಂಬಂಧ? ಬಿಜೆಪಿಯು ಚುನಾವಣೆಯನ್ನು ಧ್ರುವೀಕರಿಸಲು ಬಯಸುತ್ತದೆ ಆದರೆ ನಾವು ಅವರಿಗೆ ಹೆದರುವುದಿಲ್ಲ" ಎಂದು ಹೇಳಿದರು.

ಇನ್ನೂ ಇದೇ ವಿಚಾರವನ್ನು ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಕೂಡ ಪ್ರಸ್ತಾಪಿಸಿದ್ದಾರೆ. 'ಮಾಫಿಯಾ ಮತ್ತು ಗೂಂಡಾಗಳನ್ನು ಒಳಗೊಂಡಿರುವ ಕಾರಣ ಎಸ್‌ಪಿ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡುತ್ತಿಲ್ಲ ಎಂದು ಆರೋಪಿಸಿದರು. ಅಭ್ಯರ್ಥಿಗಳ ಹೆಸರುಗಳನ್ನು ವಾಟ್ಸಾಪ್ ಮೂಲಕ ಕಳುಹಿಸಲಾಗುತ್ತಿದೆ ಆದರೆ ಅಧಿಕೃತವಾಗಿ ಪಟ್ಟಿಯನ್ನು ಬಿಡುಗಡೆ ಮಾಡುತ್ತಿಲ್ಲ ಎಂದು ಮಾಧ್ಯಮಗಳಲ್ಲಿ ನನ್ನ ಸ್ನೇಹಿತರು ಹೇಳಿದ್ದಾರೆ. ಕೈರಾನಾ ಅಭ್ಯರ್ಥಿ ನಹಿದ್ ಹಸನ್ ಹೆಸರನ್ನು ಎಸ್ಪಿ ಬಿಡುಗಡೆ ಮಾಡಿದೆ. ಅವರು ಜೈಲು ಪಾಲಾಗಿರುವುದು ಎಲ್ಲರಿಗೂ ತಿಳಿದಿದೆ' ಎಂದು ಅವರು ಹೇಳಿದರು.


ಅಖಿಲೇಶ್ ಅವರಿಗೆ ಸಾಧ್ಯ ಆಗಿದ್ದರೆ ಯಾಕೂಬ್ ಮೆಮನ್ ಮತ್ತು ಕಸಬ್ ಅವರನ್ನು ತಮ್ಮ ಅಭ್ಯರ್ಥಿಗಳಾಗಿ ಹೆಸರಿಸುತ್ತಿದ್ದರು ಎಂದು ಪಾತ್ರಾ ಟೀಕಿಸಿದ್ದಾರೆ. ಯಾಕೂಬ್ ಮೆನನ್ ಅವರನ್ನು ಗಲ್ಲಿಗೇರಿಸದೇ ಇದ್ದಿದ್ದರೆ ಅವರೂ ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗುತ್ತಿದ್ದರು. ಕಸಬ್ ನನ್ನು ಗಲ್ಲಿಗೇರಿಸದೇ ಇದ್ದಿದ್ದರೆ ಆತ ಎಸ್‌ಪಿಯ ಸ್ಟಾರ್ ಪ್ರಚಾರಕನಾಗುತ್ತಿದ್ದ. ಜಿನ್ನಾ ಹೆಸರಲ್ಲಿ ಚುನಾವಣೆಗೆ ಇಳಿದಿದ್ದ ಅವರು ಈಗ ಪಾಕಿಸ್ತಾನ ತಲುಪಿದ್ದಾರೆ.ಯಾಕೂಬ್ ಮೆಮನ್ ಬದುಕಿದ್ದರೆ ಅಖಿಲೇಶ್ ಅವರಿಗೂ ಟಿಕೆಟ್ ನೀಡುತ್ತಿದ್ದರು ಎಂದು ವಾಗ್ದಾಳಿ ನಡೆಸಿದರು.

ಅಖಿಲೇಶ್ ಅವರಿಗೆ ನೈತಿಕತೆ ಇದ್ದರೆ ಅವರು ಎಂತಹವರನ್ನು ಕಣಕ್ಕಿಳಿಸಿದ್ದಾರೆ ಎಂಬುದು ಜಗತ್ತಿಗೆ ತಿಳಿಸಲಿ, ಅವರ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಲಿ ಎಂದರು. ಸಮೀಕ್ಷೆಗಳನ್ನು ನಿಷೇಧಿಸುವಂತೆ ಕೋರಿ ಚುನಾವಣಾ ಆಯೋಗಕ್ಕೆ ಎಸ್‌ಪಿ ಪತ್ರವನ್ನು ಉಲ್ಲೇಖಿಸಿದ ಸಂಬಿತ್ ಪಾತ್ರ, ಮಾರ್ಚ್ 10 ರಂದು ಮತ ಎಣಿಕೆಯ ಸಮಯದಲ್ಲಿ ಎಸ್‌ಪಿ ಇವಿಎಂಗಳನ್ನು ದೂಷಿಸುತ್ತಾರೆ ಎಂದು ವ್ಯಂಗ್ಯವಾಡಿದರು.

English summary
The BJP, which is facing a tough battle in the Uttar Pradesh election from Akhilesh Yadav's Samajwadi Party, has opened a new front against the former Uttar Pradesh Chief Minister - over candidate lists.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X