ರುಂಡವಿಲ್ಲದ ಯುವತಿ ದೇಹ ಪತ್ತೆ: ಪ್ರಕರಣ ಬೇಧಿಸಿದ ಪೊಲೀಸರು

ಲೋಹಿಯಾ, ಜೂನ್ 3: ರುಂಡವಿಲ್ಲದ ಯುವತಿಯ ದೇಹ ಪತ್ತೆಯಾಗಿದ್ದ ಪ್ರಕರಣವನ್ನು ಪೊಲೀಸರು ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 2019ರ ಜೂನ್ 14ರಂದು ಉತ್ತರ ಪ್ರದೇಶದ ಲೋಹಿಯಾ ಎಂಬ ಗ್ರಾಮದಲ್ಲಿ ರುಂಡವಿಲ್ಲದ ಮೃತದೇಹ ಪತ್ತೆಯಾಗಿತ್ತು. ಜೊತೆಗೆ ಕೈಗಳೂ ಕೂಡ ಇರಲಿಲ್ಲ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶಕೀಬ್ ಎಂಬ ವ್ಯಕ್ತಿ ಸೇರಿ ಕುಟುಂಬದ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಆಕೆಯ ಮೃತದೇಹ ಕಾಣಿಸಿ ಕೆಲವು ದಿನಗಳ ಬಳಿಕ ಆಕೆ ಬಿ.ಕಾಂ ವಿದ್ಯಾರ್ಥಿನಿ ಎಂಬುದು ತಿಳಿದುಬಂದಿತ್ತು. ಆದರೆ ಯಾರೂ ಯಾವ ಕಾರಣಗಳಿಗಾಗಿ ಆಕೆಯನ್ನು ಈ ರೀತಿ ಹತ್ಯೆ ಮಾಡಿದ್ದಾರೆ ಎಂಬುದು ತಿಳಿದುಬಂದಿರಲಿಲ್ಲ.

ಆಕೆಯ ಶವ ದೊರೆತ ಹಳ್ಳಿಯ ಮೊಬೈಲ್ ನಂಬರ್‌ಗಳನ್ನು ಪರಿಶೀಲಿಸಿದಾಗ ಆಕೆಯ ನಂಬರ್ ಉತ್ತರ ಪ್ರದೇಶದಲ್ಲಿ ನೋಂದಣಿಯಾಗಿಲ್ಲ ಬದಲಾಗಿ ಪಂಜಾಬ್‌ನ ಲೂಧಿಯಾನದಲ್ಲಿ ನೋಂದಣಿಯಾಗಿರುವುದಾಗಿ ತಿಳಿದುಬಂದಿತ್ತು.ಮೃತಯುವತಿ ಲೂಧಿಯಾನದವಳು, ಆಕೆ 2019ರ ಮೇ ತಿಂಗಳಿನಲ್ಲಿ ತನ್ನ ಮನೆಯಲ್ಲಿದ್ದ ಚಿನ್ನಾಭರಣಗಳನ್ನು ತೆಗೆದುಕೊಂಡು ಮನೆಯಿಂದ ಓಡಿ ಹೋಗಿದ್ದಳು. ಪೋಷಕರು ಪೊಲೀಸ್ ಠಾಣೆಗೆ ದೂರನ್ನು ಕೂಡ ನೀಡಿದ್ದರು.

Headless Body, UP Man Arrest Reveals Tale Of Love And Murder

ಶಾಕಿಬ್ ಅಮನ್ ಹೆಸರಿನಲ್ಲಿ 19 ವರ್ಷದ ಯುವತಿ ಜೊತೆ ಸ್ನೇಹ ಬೆಳೆಸಿದ್ದ, ಬಳಿಕ ಅದು ಪ್ರೀತಿಯಾಗಿ ಚಿಗುರೊಡೆದಿತ್ತು. ಆತ ಒಂದು ಅಂಗಡಿ ಇಟ್ಟುಕೊಂಡಿದ್ದ ಅಲ್ಲಿಯ ಅವರಿಗೆ ಲವ್ ಆಗಿತ್ತು.

ಆಕೆ ಮನೆಯಿಂದ ಓಡಿ ಬಂದ ಬಳಿಕ ಆತನ ಜೊತೆಯಲ್ಲಿ ಬಾಡಿಗೆ ಮನೆಯೊಂದರಲ್ಲಿ ನೆಲೆಸಿದ್ದಳು. ಬಳಿಕ ಆತ ಅಮನ್ ಅಲ್ಲ ಶಾಕಿಬ್ ಎಂದು ತಿಳಿದಿತ್ತು ಯಾಕೆ ತನೆಗೆ ಮೋಸ ಮಾಡಿದ್ದು ಎಂದು ಜಗಳವಾಡಿದ್ದಳು. ಬಳಿಕ ಈದ್ ದಿನ ಆಕೆಗೆ ನಿದ್ರೆ ಮಾತ್ರೆ ಬೆರೆಸಿರುವ ಕೂಲ್‌ಡ್ರಿಂಗ್ಸ್‌ ನೀಡಿದ್ದ. ಆಕೆಗೆ ಎಚ್ಚರ ತಪ್ಪಿಸಿ ಗದ್ದೆಗೆ ಕರೆದುಕೊಂಡು ಹೋಗಿ ಆಕೆ ಯಾರು ಎಂದು ಗುರುತು ಸಿಗಬಾರದೆಂದು ರುಂಡವನ್ನು ಕಡಿದು ಹಾಕಿದ್ದ. ಆಕೆಯ ಕೈನಲ್ಲಿ ಅಮನ್ ಹೆಸರಿನ ಹಚ್ಚೆ ಇದ್ದ ಕಾರಣ ಕೈಗಳನ್ನೂ ಕತ್ತರಿಸಿದ್ದ. ಇದೀಗ ಆರೋಪಿ ಶಕೀಬ್ ಸೇರಿ ಆರು ಮಂದಿಯನ್ನು ಬಂಧಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+