ಹೆಣ್ಣುಮಕ್ಕಳ ಶಿಕ್ಷಣದ ಬಗ್ಗೆ ನಮ್ಮ ದೇಶಕ್ಕೆ ನಿಮ್ಮ ಪಾಠದ ಅಗತ್ಯವಿಲ್ಲ: ಪಾಕ್‌ಗೆ ಓವೈಸಿ ತಿರುಗೇಟು

ಲಕ್ನೋ, ಫೆಬ್ರವರಿ 10: ಕರ್ನಾಟಕದಲ್ಲಿ ನಡೆಯುತ್ತಿರುವ ಹಿಜಾಬ್ ವಿವಾದದ ಕುರಿತು ಭಾರತಕ್ಕೆ ಪಾಕಿಸ್ತಾನ ಹೇಳಿದ ಪಾಠದ ವಿರುದ್ಧ ಅಸಾದುದ್ದೀನ್ ಓವೈಸಿ ಕಿಡಿ ಕಾರಿದ್ದಾರೆ.

ಮುಸ್ಲಿಂ ಹೆಣ್ಣುಮಕ್ಕಳ ಶಿಕ್ಷಣವನ್ನು ವಂಚಿತಗೊಳಿಸುವುದು ಮೂಲಭೂತ ಹಕ್ಕುಗಳ ಗಂಭೀರ ಉಲ್ಲಂಘನೆಯಾಗಿದೆ. ಈ ಮೂಲಭೂತ ಹಕ್ಕನ್ನು ನಿರಾಕರಿಸುವುದು ಮತ್ತು ಹಿಜಾಬ್ ಧರಿಸಿದ್ದಕ್ಕಾಗಿ ಅವರನ್ನು ಬೆದರಿಸುವುದು ಸಂಪೂರ್ಣವಾಗಿ ದಬ್ಬಾಳಿಕೆಯಾಗಿದೆ ಎಂದು ಪಾಕಿಸ್ತಾನ ವಿದೇಶಾಂಗ ಸಚಿವ ಶಾ ಮೊಹಮ್ಮದ್ ಖುರೇಷಿ ಅವರು ಹೇಳಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ ಓವೈಸಿ, ನಮ್ಮ ದೇಶದ ಹುಡುಗಿಯರು ಇಲ್ಲಿ ಓದುತ್ತಾರೆ ಮತ್ತು ಅವರ ಭದ್ರತೆಗೆ ನಾವು ಹೊಣೆಗಾರರಾಗಿರುತ್ತೇವೆ. ಹೆಣ್ಣು ಮಕ್ಕಳ ಶಿಕ್ಷಣದ ಬಗ್ಗೆ ನಮ್ಮ ದೇಶಕ್ಕೆ ಪಾಠ ಮಾಡುವುದು ಬೇಡ ಎಂದು ಓವೈಸಿ ಖಾರವಾಗಿಯೇ ಹೇಳಿದ್ದಾರೆ.

Go To Hell Our Daughters Will Study Here Only’: Owaisi Tears Into Pakistan

ಪಾಕಿಸ್ತಾನದಲ್ಲಿ ಮಹಿಳಾ ಶಿಕ್ಷಣ ಹೋರಾಟಗಾರ್ತಿ ಮತ್ತು ಸಾಮಾಜಿಕ ಕಾರ್ಯಕರ್ತೆ ಮಲಾಲಾ ಯೂಸುಫ್ ಜಾಯ್ ಮೇಲೆ ದಾಳಿ ನಡೆದಿದ್ದು, ತಮ್ಮ ದೇಶದ ಹೆಣ್ಣುಮಕ್ಕಳಿಗೆ ಭದ್ರತೆ ನೀಡಲು ವಿಫಲರಾಗಿರುವ ನೀವು ಈಗ ಭಾರತಕ್ಕೆ ಪಾಠ ಹೇಳುವುದು ಬೇಡ ಎಂದು ಓವೈಸಿ ತಿರುಗೇಟು ನೀಡಿದ್ದಾರೆ.

ಮಂಗಳವಾರ ಉತ್ತರ ಪ್ರದೇಶದಲ್ಲಿ ಮಾತನಾಡಿದ್ದ ಓವೈಸಿ, ಸಹೋದರಿಯರೇ ನಿಮ್ಮ ಹಿಜಾಬ್ ಹೋರಾಟ ಯಶಸ್ವಿಯಾಗಲಿ ಎಂದು ಹೇಳಿದ್ದರು.

'ಪಾಕಿಸ್ತಾನದಲ್ಲಿ ಮಹಿಳಾ ಶಿಕ್ಷಣ ಹೋರಾಟಗಾರ್ತಿ ಮತ್ತು ಸಾಮಾಜಿಕ ಕಾರ್ಯಕರ್ತೆ ಮಲಾಲಾ ಯೂಸಫ್ ಝಾಯಿ ಮೇಲೆ ದಾಳಿ ನಡೆಸಲಾಯಿತು. ಅವರು ಪಾಕಿಸ್ತಾನವನ್ನೇ ತೊರೆಯಬೇಕಾಯಿತು.

ತಮ್ಮ ದೇಶದ ಹೆಣ್ಣುಮಕ್ಕಳಿಗೆ ಭದ್ರತೆ ನೀಡಲು ವಿಫಲರಾಗಿರುವ ನೀವು ಈಗ ಭಾರತಕ್ಕೆ ಪಾಠ ಹೇಳುವುದು ಬೇಡ. ಪಾಕಿಸ್ತಾನದ ಸಂವಿಧಾನವು ಮುಸ್ಲಿಮೇತರರಿಗೆ ಪ್ರಧಾನಿಯಾಗಲು ಅವಕಾಶ ನೀಡುವುದಿಲ್ಲ. ಪಾಕಿಸ್ತಾನಕ್ಕೆ ನನ್ನ ಸಲಹೆ ಏನೆಂದರೆ, ನೀವು ಈ ಕಡೆ ನೋಡಬೇಡಿ ನಿಮ್ಮ ಸ್ವಂತ ದೇಶವನ್ನು ನೋಡಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ.

ಉತ್ತರಪ್ರದೇಶದ ಚುನಾವಣಾ ಪ್ರಚಾರದಲ್ಲಿ ಮಾತನಾಡಿರುವ ಅವರು, 'ನಿಮ್ಮ ದೇಶದಲ್ಲಿಯೇ ನಿಮಗೆ ಅನೇಕ ಸಮಸ್ಯೆಗಳಿವೆ. ಆ ಸಮಸ್ಯೆಗಳ ಬಗ್ಗೆ ಮೊದಲು ಗಮನಹರಿಸಿ.
ಭಾರತ ನಮ್ಮ ದೇಶ ಮತ್ತು ಇದು ನಮ್ಮ ಆಂತರಿಕ ವಿಚಾರ.

ನಮ್ಮ ಸಮಸ್ಯೆಗಳಿಗೆ ನಿಮ್ಮ ಮೂಗು ತೂರಬೇಡಿ. ನಮ್ಮ ದೇಶದ ಹೆಣ್ಣುಮಕ್ಕಳು ಇಲ್ಲಿ ಚೆನ್ನಾಗಿಯೇ ಓದುತ್ತಾರೆಮತ್ತು ಅವರ ಭದ್ರತೆಗೆ ನಾವು ಹೊಣೆಗಾರರಾಗಿರುತ್ತೇವೆ. ಹೆಣ್ಣು ಮಕ್ಕಳ ಶಿಕ್ಷಣದ ಬಗ್ಗೆ ನಮ್ಮ ದೇಶಕ್ಕೆ ಪಾಠ ಮಾಡುವುದು ಬೇಡ' ಅಂತಾ ಪಾಕ್‌ಗೆ ಓವೈಸಿ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಮುಸ್ಲಿಂ ಹೆಣ್ಣುಮಕ್ಕಳ ಶಿಕ್ಷಣವನ್ನು ವಂಚಿತಗೊಳಿಸುವುದು ಮೂಲಭೂತ ಹಕ್ಕುಗಳ ಗಂಭೀರ ಉಲ್ಲಂಘನೆ. ಈ ಮೂಲಭೂತ ಹಕ್ಕನ್ನು ನಿರಾಕರಿಸುವುದು ಮತ್ತು ಹಿಜಾಬ್ ಧರಿಸಿದ್ದಕ್ಕಾಗಿ ಅವರನ್ನು ಬೆದರಿಸುವುದು ಸಂಪೂರ್ಣ ದಬ್ಬಾಳಿಕೆಯಾಗಿದೆ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮೊಹಮ್ಮದ್ ಖುರೇಷಿ ಅವರು ಹೇಳಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+