• search
  • Live TV
ಲಕ್ನೋ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅಂಚೆ ಚೀಟಿಗಳಲ್ಲಿ ಛೋಟಾ ರಾಜನ್, ಬಜರಂಗಿ ಮುನ್ನಾ ಫೋಟೊ!

|

ಲಕ್ನೋ, ಡಿಸೆಂಬರ್ 28: ಡಾನ್‌ಗಳು ಮತ್ತು ಗ್ಯಾಂಗ್‌ಸ್ಟರ್‌ಗಳ ಫೋಟೊಗಳನ್ನು 'ಮೋಸ್ಟ್ ವಾಂಟೆಡ್' ಕ್ರಿಮಿನಲ್‌ಗಳ ಪಟ್ಟಿಯಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ಮಾಧ್ಯಮಗಳಲ್ಲಿ ಕಂಡಿರುತ್ತೀರಿ. ಆದರೆ ಉತ್ತರ ಪ್ರದೇಶದ ಕಾನ್ಪುರದಲ್ಲಿನ ಅಂಚೆ ಕಚೇರಿ ಭೂಗತ ಪಾತಕಿಗಳ ಫೋಟೊಗಳನ್ನು ಒಳಗೊಂಡ ಅಂಚೆ ಚೀಟಿಗಳನ್ನು ಬಿಡುಗಡೆಮಾಡಿದ್ದು, ತೀವ್ರ ವಿವಾದಕ್ಕೆ ಕಾರಣವಾಗಿದೆ.

ಕಾನ್ಪುರದಲ್ಲಿ ಪೋಸ್ಟೇಜ್ ಸ್ಟ್ಯಾಂಪ್‌ಗಳಲ್ಲಿ ಭೂಗತಲೋಕದ ಡಾನ್ ಛೋಟಾ ರಾಜನ್ ಮತ್ತು ಮುನ್ನಾ ಬಜರಂಗಿಯ ಫೋಟೊಗಳನ್ನು ಮುದ್ರಿಸಲಾಗಿದೆ. ಜನರು ವೈಯಕ್ತಿಕ ಅಂಚೆ ಚೀಟಿಗಳನ್ನು ಪಡೆಯಲು ಅವಕಾಶ ನೀಡುವ ಭಾರತೀಯ ಅಂಚೆಯ 'ಮೈ ಸ್ಟ್ಯಾಂಪ್' ಯೋಜನೆಯಡಿಯಲ್ಲಿ ಇವುಗಳನ್ನು ಮುದ್ರಿಸಲಾಗಿದೆ.

ಒಂದು 'ಮೈ ಸ್ಟ್ಯಾಂಪ್' ಶೀಟ್‌ ಒಟ್ಟು 12 ಅಂಚೆ ಚೀಟಿಗಳನ್ನು ಒಳಗೊಂಡಿರಲಿದ್ದು, ಪ್ರತಿ ಅಂಚೆ ಚೀಟಿಯು 5 ರೂ ಮುಖಬೆಲೆ ಹೊಂದಿರುತ್ತದೆ. ಆದರೆ ಛೋಟಾ ರಾಜನ್ ಮತ್ತು ಮುನ್ನಾ ಬಜರಂಗಿಯಂತಹ ಡಾನ್‌ಗಳ ಫೋಟೊಗಳಿರುವ ಅಂಚೆ ಚೀಟಿ ಮುದ್ರಣವಾಗಿರುವುದು ಅಚ್ಚರಿ ಮೂಡಿಸಿದೆ. ಇದು ಕ್ಲರ್ಕ್ ಎಸಗಿದ ಪ್ರಮಾದ ಎಂದು ಪೋಸ್ಟ್ ಮಾಸ್ಟರ್ ಜನರಲ್ ವಿನೋದ್ ಕುಮಾರ್ ವರ್ಮಾ ಹೇಳಿದ್ದಾರೆ.

'ಮೈ ಸ್ಟ್ಯಾಂಪ್' ಯೋಜನೆಯಡಿ ವ್ಯಕ್ತಿಯು ತನ್ನ ಚಿತ್ರ ಅಂಚೆ ಚೀಟಿಯಲ್ಲಿ ಬರಬೇಕು ಎಂದಿದ್ದರೆ ಅದಕ್ಕೆ ಸೂಕ್ತ ದಾಖಲೆಗಳನ್ನು ಒದಗಿಸಬೇಕು. ಆ ವ್ಯಕ್ತಿ ಖುದ್ದು ಅಂಚೆ ಕಚೇರಿಗೆ ಬಂದು ದಾಖಲೆಗಳನ್ನು ಸಲ್ಲಿಸಬೇಕು. ಆ ವ್ಯಕ್ತಿಯ ಫೋಟೊವನ್ನು ವೆಬ್‌ಕ್ಯಾಮ್‌ನಲ್ಲಿ ತೆಗೆದುಕೊಳ್ಳಲಾಗುತ್ತದೆ. ಈ ಎಲ್ಲ ಪ್ರಕ್ರಿಯೆಗಳು ಪೂರ್ಣಗೊಂಡ ಬಳಿಕವಷ್ಟೇ ಅಂಚೆ ಚೀಟಿಯನ್ನು ವಿತರಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.

ಮಾಧ್ಯಮದೊಂದಿಗೆ ನಂಟು ಇರುವ ಯಾರೋ ಒಬ್ಬರು ಮುನ್ನ ಬಜರಂಗಿ (ಪ್ರೇಮ್ ಪ್ರಕಾಶ್) ಮತ್ತು ಛೋಟಾ ರಾಜನ್ (ಎಸ್ ರಾಜೇಂದ್ರ) ಹೆಸರಿನಲ್ಲಿ ಫಾರ್ಮ್‌ಗಳನ್ನು ಭರ್ತಿ ಮಾಡಿದ್ದರು. ಅವರ ಫೋಟೊಗಳನ್ನು ನೀಡಿದ ವ್ಯಕ್ತಿ, ತನ್ನ ಗುರುತಿನ ಚೀಟಿಯನ್ನು ತೋರಿಸಿದ್ದರು. ಅದರ ಬಗ್ಗೆ ಅಂಚೆ ನೌಕರ ಪ್ರಶ್ನಿಸಿದಾಗ, ತಮಗೆ ಅವರಿಬ್ಬರೂ ಪರಿಚಿತರು ಎಂದರು. ಅದರಿಂದ ತೃಪ್ತರಾದ ಪೋಸ್ಟ್‌ಮ್ಯಾನ್ ವಿಚಾರಣೆ ನಡೆಸದೆ ಅದನ್ನು ಮುದ್ರಣಕ್ಕೆ ಕಳುಹಿಸಿದ್ದರು ಎಂದು ವರ್ಮಾ ತಿಳಿಸಿದ್ದಾರೆ. ಕ್ಲರ್ಕ್‌ನನ್ನು ನಿರ್ಲಕ್ಷ್ಯದ ಆರೋಪದಲ್ಲಿ ಅಮಾನತು ಮಾಡಲಾಗಿದೆ.

English summary
Kanpur postal deprtment has printed gangsters Chhota Rajan, Munna Bajrangi on stamps.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X