ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಬಲ್ ಇಂಜಿನ್ ಸರ್ಕಾದಿಂದ ನಿರುದ್ಯೋಗ, ಬೆಲೆ ಏರಿಕೆ ದ್ವಿಗುಣ: ಅಖಿಲೇಶ್

|
Google Oneindia Kannada News

ಲಕ್ನೋ ಮಾರ್ಚ್ 01: ಡಬಲ್ ಇಂಜಿನ್ ಸರ್ಕಾರ ರಾಜ್ಯದಲ್ಲಿ ನಿರುದ್ಯೋಗ, ಬೆಲೆ ಏರಿಕೆ ಮತ್ತು ಭ್ರಷ್ಟಾಚಾರವನ್ನು ದ್ವಿಗುಣಗೊಳಿಸಿದೆ. ರೈತರ ಆದಾಯವನ್ನು ಅರ್ಧದಷ್ಟು ಕಡಿಮೆ ಮಾಡಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಸೋಮವಾರ ಹೇಳಿದ್ದಾರೆ. ಅಂಬೇಡ್ಕರ್‌ನಗರ, ಬಸ್ತಿ ಮತ್ತು ಸಂತ ಕಬೀರನಗರದಲ್ಲಿ ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡಿದ ಅಖಿಲೇಶ್, "ಡಬಲ್ ಇಂಜಿನ್ ಸರ್ಕಾರವು ಕಳೆದ ಮೂರು ವರ್ಷಗಳಿಂದ ಸೇನಾ ನೇಮಕಾತಿಗಳನ್ನು ನಡೆಸಿಲ್ಲ ಮತ್ತು ನಿರುದ್ಯೋಗ ಹೆಚ್ಚಿಸುತ್ತಿದೆ' ಎಂದು ಆರೋಪಿಸಿದ್ದಾರೆ.

ಇಂಧನ ಮತ್ತು ಅಡುಗೆ ಅನಿಲ ಸೇರಿದಂತೆ ಅಗತ್ಯ ವಸ್ತುಗಳ ಬೆಲೆಗಳು ಗಗನಕ್ಕೇರಿವೆ ಮತ್ತು ಈ ಆಡಳಿತದಲ್ಲಿಯೇ 400 ರೂ.ಗೆ ಬಂದ ಎಲ್‌ಪಿಜಿ ಸಿಲಿಂಡರ್‌ಗಳನ್ನು ಈಗ 1,000 ರೂ.ಗೆ ಮಾರಾಟ ಮಾಡಲಾಗುತ್ತಿದೆ. "ಬ್ಯಾಂಕ್‌ಗಳಿಗೆ ನೂರಾರು ಕೋಟಿ ರೂಪಾಯಿಗಳನ್ನು ವಂಚಿಸಿ ಉದ್ಯಮಿಗಳು ಒಬ್ಬರ ನಂತರ ಒಬ್ಬರು ದೇಶದಿಂದ ಪಲಾಯನ ಮಾಡುತ್ತಿದ್ದಾರೆ" ಎಂದು ಅಖಿಲೇಶ್ ಹೇಳಿದರು, ಇತ್ತೀಚಿನದು 23,000 ಕೋಟಿ ರೂಪಾಯಿಗಳ ಬ್ಯಾಂಕ್ ವಂಚನೆಯಾಗಿದೆ.

ವಿಡಿಯೋ: ಅಖಿಲೇಶ್ ಗೌತಮ ಬುದ್ಧನನ್ನು ಅವಮಾನಿಸಿದ್ದಾರೆ- ಕೇಶವ್ ಆರೋಪ ವಿಡಿಯೋ: ಅಖಿಲೇಶ್ ಗೌತಮ ಬುದ್ಧನನ್ನು ಅವಮಾನಿಸಿದ್ದಾರೆ- ಕೇಶವ್ ಆರೋಪ

2022 ರ ವೇಳೆಗೆ ರೈತರ ಆದಾಯವನ್ನು ದ್ವಿಗುಣಗೊಳಿಸುವುದಾಗಿ ಸರ್ಕಾರ ಭರವಸೆ ನೀಡಿತ್ತು. ಆದರೆ ನೀರಾವರಿ, ರಸಗೊಬ್ಬರಕ್ಕೆ ಅಗತ್ಯವಿರುವ ವಿದ್ಯುತ್ ಮತ್ತು ಇಂಧನದ ಬೆಲೆ ಏರಿಕೆಯಿಂದಾಗಿ ಅವರ ಆದಾಯವು ಸುಮಾರು ಅರ್ಧಕ್ಕೆ ಇಳಿದಿದೆ. ಬಿಜೆಪಿ ಅಭ್ಯರ್ಥಿಗಳು ತಾವು ಹೀನಾಯ ಸೋಲಿನತ್ತ ಸಾಗುತ್ತಿರುವುದನ್ನು ಅರಿತು ಕಿವಿ ಹಿಂಡಿಕೊಂಡು ವೇದಿಕೆ ಮೇಲೆ ಧರಣಿ ಕುಳಿತಿದ್ದಾರೆ ಎಂದರು. ಈ ಹಿಂದೆ ಬಿಜೆಪಿ ಶಾಸಕ ಭೂಪೇಶ್ ಚೌಬೆ ತಮ್ಮ ಕುರ್ಚಿಯ ಮೇಲೆ ನಿಂತು, ತಮ್ಮ ಕಿವಿಗಳನ್ನು ಹಿಡಿದುಕೊಂಡು, ಕಳೆದ ಐದು ವರ್ಷಗಳಲ್ಲಿ ತಾವು ಏನಾದರೂ ತಪ್ಪು ಮಾಡಿದ್ದರೆ ಅದನ್ನು ಕ್ಷಮಿಸಿ ಎಂದು ವೇದಿಕೆಯ ಮೇಲೇ ಬಸ್ಕಿ ಹೊಡೆದಿದ್ದರು. ಇದನ್ನು ಅಖಿಲೇಶ್ ವ್ಯಂಗ್ಯವಾಡಿದ್ದಾರೆ.

Double Engine Govt’ Has Doubled Joblessness, Graft: Akhilesh Yadav

ರಾಜ್ಯದಲ್ಲಿ ಖಾಲಿ ಇರುವ 11 ಲಕ್ಷ ಸರ್ಕಾರಿ ಹುದ್ದೆಗಳಿಗೆ ಕಾಲಮಿತಿಯ ನೇಮಕಾತಿಗಳ ಕುರಿತು ಯುವಕರಿಗೆ ಭರವಸೆ ನೀಡಿದ ಅಖಿಲೇಶ್, ಐಟಿ ವಲಯದಲ್ಲಿ 20 ಲಕ್ಷ ಹೆಚ್ಚುವರಿ ಉದ್ಯೋಗಗಳು ಮತ್ತು ಉದ್ಯೋಗಾವಕಾಶಗಳ ಭರವಸೆ ನೀಡಿದರು.

ಮತದಾರಿರಗೆ ಪರೋಕ್ಷ ಸಂದೇಶ ರವಾನಿಸಿತಾ ಮಯಾಂಕ್-ಅಖಿಲೇಶ್ ಭೇಟಿ? ಮತದಾರಿರಗೆ ಪರೋಕ್ಷ ಸಂದೇಶ ರವಾನಿಸಿತಾ ಮಯಾಂಕ್-ಅಖಿಲೇಶ್ ಭೇಟಿ?

ಬಿಜೆಪಿಯು ವಿಮಾನ ನಿಲ್ದಾಣಗಳು, ಏರ್‌ಲೈನ್‌ಗಳು, ಶಿಪ್‌ಯಾರ್ಡ್‌ಗಳು ಮತ್ತು ರೈಲ್ವೆಗಳನ್ನು ಖಾಸಗಿಯವರಿಗೆ ಮಾರಾಟ ಮಾಡುವ ಮೂಲಕ ಉದ್ಯೋಗಾವಕಾಶಗಳನ್ನು ಕಡಿಮೆ ಮಾಡುತ್ತಿದೆ ಎಂದು ಪ್ರತಿಪಾದಿಸಿದ ಅಖಿಲೇಶ್ ಅವರು, ಅವರು ಸರ್ಕಾರದೊಂದಿಗೆ ಏನನ್ನೂ ಬಿಡುತ್ತಿಲ್ಲ, ಆದ್ದರಿಂದ ಉದ್ಯೋಗಗಳಲ್ಲಿ ಮೀಸಲಾತಿಗೆ ಅರ್ಹರಿಗೆ ಅವಕಾಶಗಳಿಲ್ಲ'' ಎಂದು ಹೇಳಿದರು. ಸರ್ಕಾರದೊಂದಿಗೆ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವವರನ್ನು ಕಾಯಂಗೊಳಿಸುವ ಮಾರ್ಗೋಪಾಯಗಳನ್ನು ಕಂಡುಕೊಳ್ಳುತ್ತೇವೆ ಎಂದರು.

ಸಾಮಾನ್ಯವಾಗಿ ಉತ್ತರಪ್ರದೇಶ ಚುನಾವಣೆಯಲ್ಲಿ ಉದ್ಯೋಗವಕಾಶಗಳಿಂದ ಯುವಕರು ವಂಚಿತರಾಗಿದ್ದಾರೆ. ರಾಜ್ಯದಲ್ಲಿ ನಿರುದ್ಯೋಗಿಗಳ ಸಂಖ್ಯೆ ಹೆಚ್ಚಾಗಿದೆ ಎನ್ನುವ ಆರೋಪಗಳನ್ನು ವಿಪಕ್ಷಗಳು ಆಡಳಿತ ಪಕ್ಷದ ವಿರುದ್ಧ ಮಾಡಿವೆ. ಚುನಾವಣಾ ಪ್ರಚಾರದ ವೇಳೆ ಇದೇ ಅಸ್ತ್ರವನ್ನಿಟ್ಟುಕೊಂಡು ಬಿಜೆಪಿ ವಿರುದ್ಧ ಮತಯಾಚನೆ ಮಾಡುತ್ತಿವೆ. ಇದು ಬಿಜೆಪಿಗೆ ದೊಡ್ಡ ಸವಾಲಾಗಿತ್ತು. ಆದರೀಗ ಬಿಜೆಪಿ ಉದ್ಯೋಗದ ಭರವಸೆ ನೀಡುವ ಮೂಲಕ ಮತಯಾಚನೆ ಮಾಡುತ್ತಿದೆ. ಬಿಜೆಪಿ ಈ ಚುನಾವಣೆಯಲ್ಲಿ ಜಯಗಳಿಸಿದರೆ ಪ್ರತಿ ಕುಟುಂಬದ ಒಬ್ಬ ವ್ಯಕ್ತಿಗೆ ಸರ್ಕಾರಿ ಉದ್ಯೋಗ ನೀಡುವ ಭರವಸೆ ನೀಡುತ್ತಿದೆ.

ಗೋರಖ್‌ಪುರದ ಚೌರಿ ಚೌರಾದಲ್ಲಿ ಸಾರ್ವಜನಿಕ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಆದಿತ್ಯನಾಥ್, "ಮುಂದಿನ ಐದು ವರ್ಷಗಳಲ್ಲಿ ಉತ್ತರ ಪ್ರದೇಶದ ಪ್ರತಿ ಕುಟುಂಬದ ಒಬ್ಬ ವ್ಯಕ್ತಿಗೆ ಸರ್ಕಾರಿ ಉದ್ಯೋಗ ಅಥವಾ ಸ್ವಯಂ ಉದ್ಯೋಗಾವಕಾಶಗಳನ್ನು ಒದಗಿಸಲಾಗುವುದು ಎಂದು ನಾವು ಯೋಜಿಸುತ್ತಿದ್ದೇವೆ" ಎಂದು ಹೇಳಿದ್ದಾರೆ.

English summary
Samajwadi Party chief Akhilesh Yadav on Monday said that the "double engine government" has only doubled joblessness, price rise and corruption in the state and has halved the income of farmers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X