ವಿಡಿಯೋ: ಅಖಿಲೇಶ್ ಗೌತಮ ಬುದ್ಧನನ್ನು ಅವಮಾನಿಸಿದ್ದಾರೆ- ಕೇಶವ್ ಆರೋಪ

ಲಕ್ನೋ ಫೆಬ್ರವರಿ 23: ಉತ್ತರ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆ ಸಾಗುತ್ತಿದ್ದಂತೆ ರಾಜಕೀಯ ಪಕ್ಷಗಳಲ್ಲಿ ಆರೋಪ-ಪ್ರತ್ಯಾರೋಪಗಳ ಸುರಿಮಳೆಯಾಗುತ್ತಿದೆ. ಈ ನಡುವೆ ರಾಜ್ಯದ ಉಪ ಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಅವರು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಭಗವಾನ್ ಗೌತಮ ಬುದ್ಧರನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿದ್ದಾರೆ. ವಾಸ್ತವವಾಗಿ, ಕೇಶವ್ ಪ್ರಸಾದ್ ಮೌರ್ಯ ಅವರು ಅಖಿಲೇಶ್ ಯಾದವ್ ಅವರ ವೀಡಿಯೊವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ, ಇದರಲ್ಲಿ ಅಖಿಲೇಶ್ ಯಾದವ್ ಅವರು ಸಮಾರಂಭವೊಂದರಲ್ಲಿ ಭಗವಾನ್ ಬುದ್ಧನ ಪ್ರತಿಮೆಯನ್ನು ಸ್ವೀಕರಿಸಲು ನಿರಾಕರಿಸಿದ್ದಾರೆ.

ಭಗವಾನ್ ಬುದ್ಧನ ಪ್ರತಿಮೆಯನ್ನು ಸ್ವೀಕರಿಸಲು ನಿರಾಕರಿಸುವ ಮೂಲಕ ಅಖಿಲೇಶ್ ಯಾದವ್ ಕೌಶಂಬಿ ಜಿಲ್ಲೆಗೆ ಅವಮಾನ ಮಾಡಿದ್ದಾರೆ ಎಂದು ಉಪ ಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಆರೋಪಿಸಿದ್ದಾರೆ. ಈ ವೀಡಿಯೊವನ್ನು ಹಂಚಿಕೊಂಡ ಕೇಶವ್ ಪ್ರಸಾದ್ ಮೌರ್ಯ, "ನೀವು ಭಗವಾನ್ ಗೌತಮ ಬುದ್ಧನನ್ನು ಏಕೆ ತುಂಬಾ ದ್ವೇಷಿಸುತ್ತೀರಿ? ಅಖಿಲೇಶ್ ಯಾದವ್ ಜಿ, ಇದು ಹೊಸ ಎಸ್ಪಿಯ ನಾಟಕ ಆಗಿದಿಯಾ!" ಎಂದು ಪ್ರಶ್ನಿಸಿದ್ದಾರೆ.

ಯೋಗಿ ಗೋರಖ್‌ಪುರಕ್ಕೆ ಅಖಿಲೇಶ್ ಲಂಡನ್‌ಗೆ ವಿಮಾನ ಟಿಕೆಟ್ ಬುಕ್
ಗೌತಮ ಬುದ್ಧನ ಪ್ರತಿಮೆ ತೆಗೆದುಕೊಳ್ಳಲು ನಿರಾಕರಿಸಿದ ಅಖಿಲೇಶ್

ಸಿರತುವಿನ ಮೀಠಾಪುರ ಸಯಾರಾ ಪ್ರದೇಶಕ್ಕೆ ಆಗಮಿಸಿದ ಅಖಿಲೇಶ್ ಯಾದವ್ ಗೌತಮ ಬುದ್ಧನ ಪ್ರತಿಮೆಯನ್ನು ತೆಗೆದುಕೊಳ್ಳಲಿಲ್ಲ. ಆದರೆ ಬೆಳ್ಳಿಯ ಕಿರೀಟವನ್ನು ಹಾಕಿದರು. ಹೀಗಾಗಿ ಅಖಿಲೇಶ್ ಯಾದವ್ ಭಗವಾನ್ ಬುದ್ಧನನ್ನು ಅವಮಾನಿಸಿದ್ದು ಮಾತ್ರವಲ್ಲದೆ ಅವರು ಕೌಶಂಬಿ ಜಿಲ್ಲೆಗೂ ಅವಮಾನ ಮಾಡಿದ್ದಾರೆ ಎಂದು ಕೇಶವ್ ಪ್ರಸಾದ್ ಮೌರ್ಯ ಹೇಳಿದ್ದಾರೆ. ಅಖಿಲೇಶ್ ಯಾದವ್ ಅವರು ಭಗವಾನ್ ಬುದ್ಧನನ್ನು ನಂಬಿರುವ ಕೋಟಿ ಕೋಟಿ ಜನರಿಗೆ ಅವಮಾನ ಮಾಡಿದ್ದಾರೆ ಎಂದು ಕೇಶವ್ ಪ್ರಸಾದ್ ಮೌರ್ಯ ಹೇಳಿದ್ದಾರೆ.


ಅಖಿಲೇಶ್ ಹೇಳಿದ್ದೇನು?

ಅಖಿಲೇಶ್ ಯಾದವ್ ಪಕ್ಷದ ಅಭ್ಯರ್ಥಿಯ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲು ಸಿರತ್ತುಗೆ ಹೋದಾಗ ಈ ವೀಡಿಯೊ ಮಂಗಳವಾರ ಬಹಿರಂಗಗೊಂಡಿದೆ. ಅಖಿಲೇಶ್ ಯಾದವ್ ವೇದಿಕೆಯಲ್ಲಿದ್ದಾಗ ಲೋಹಿಯಾ ವಾಹಿನಿಯ ರಾಜ್ಯಾಧ್ಯಕ್ಷ ರಾಮ್ ಕರಣ್ ನಿರ್ಮಲ್ ಅವರು ಅಖಿಲೇಶ್ ಯಾದವ್ ಅವರಿಗೆ ಗೌತಮ ಬುದ್ಧನ ಪ್ರತಿಮೆಯನ್ನು ಉಡುಗೊರೆಯಾಗಿ ನೀಡಲು ಬಯಸಿದ್ದರು, ಆದರೆ ಅಖಿಲೇಶ್ ಯಾದವ್ ವಿಗ್ರಹವನ್ನು ಕೈಗೆ ತೆಗೆದುಕೊಳ್ಳಲಿಲ್ಲ ಮತ್ತು ಅದನ್ನು ಅಲ್ಲಿಂದ ತೆಗೆದುಹಾಕಲು ಹೇಳಿದರು. ಸಿರತುವಿನ ಮೀಠಾಪುರ ಸಯಾರಾ ಪ್ರದೇಶಕ್ಕೆ ಆಗಮಿಸಿದ ಅಖಿಲೇಶ್ ಯಾದವ್, ಕೇಶವ್ ಪ್ರಸಾದ್ ಮೌರ್ಯ ಅವರನ್ನು ಗುರಿಯಾಗಿಸಿಕೊಂಡು, ಅವರು ಮಲವುಳ್ಳ ಮಂತ್ರಿ, ಅವರು ನಿಮಗೆ ಮೋಸ ಮಾಡಿದ್ದಾರೆ ಎಂದು ಹೇಳಿದರು. ಮೂರು ತಿಂಗಳಲ್ಲೇ ಇಲ್ಲಿನ ರಸ್ತೆಗಳು ಕಿತ್ತು ಹೋಗಿವೆ. ಸರ್ಕಾರ ರಚನೆಯಾದ ಮೇಲೆ ತನಿಖೆ ನಡೆಸುತ್ತೇವೆ ಎಂದಿದ್ದಾರೆ.

Akhilesh Yadav of Insulting Lord Gautam Buddha- Keshav Prasad Maurya Accuses
ಉತ್ತರಪ್ರದೇಶ ವಿಧಾನಸಭಾ ಚುನಾವಣೆ ಏಳು ಹಂತಗಳಲ್ಲಿ ನಡೆಯುತ್ತಿದೆ. ಈಗಾಗಲೇ ನಾಲ್ಕು ಹಂತಗಳಲ್ಲಿ ಮತದಾನ ಪೂರ್ಣಗೊಂಡಿದೆ. ನಾಲ್ಕನೇ ಹಂತದ ಮತದಾನವೂ ಬೆಳಗ್ಗೆ 7 ಗಂಟೆಗೆ ಆರಂಭಗೊಂಡಿದ್ದು, ಸಂಜೆ 6 ಗಂಟೆಗೆ ಮುಗಿದಿದೆ. ಇನ್ನೂ ಮೂರು ಹಂತಗಳಲ್ಲಿ ಚುನಾವಣೆ ನಡೆಯಬೇಕಿದೆ. ಮಾರ್ಚ್ 10 ರಂದು ಫಲಿತಾಂಶ ಪ್ರಕಟವಾಗಲಿದೆ. ಇಂದು ಮತದಾನ ಪೂರ್ಣಗೊಂಡಿದ್ದು ಲಖಿಂಪುರ ಖೇರಿಯಲ್ಲಿ (62.42%) ಅತಿ ಹೆಚ್ಚು ಮತದಾನವಾಗಿದ್ದು ನಂತರ ಪಿಲ್ಭಿತ್ 61.33%ರಷ್ಟು ಮತ್ತು ರಾಯ್‌ಬರೇಲಿ 58.40%ರಷ್ಟು ಮತದಾನವಾಗಿದೆ.

ಉತ್ತರಪ್ರದೇಶ ವಿಧಾನಸಭಾ ಚುನಾವಣೆ ಒಟ್ಟು ಏಳು ಹಂತದಲ್ಲಿ ನಡೆಯಲಿದ್ದು ಈಗಾಗಲೇ ನಾಲ್ಕು ಹಂತದ ಚುನಾವಣೆ ಯಶಸ್ವಿಯಾಗಿ ಪೂರ್ಣಗೊಂಡಿದೆ. ಇನ್ನೂ ಮೂರು ಹಂತದ ಮತದಾನ ನಡೆಯಬೇಕಿದೆ. ಈ ನಾಲ್ಕನೇ ಹಂತದ ಚುನಾವಣೆಯಲ್ಲಿ ಪ್ರಮುಖ ಅಭ್ಯರ್ಥಿಗಳಲ್ಲಿ ಉತ್ತರ ಪ್ರದೇಶದ ಕಾನೂನು ಸಚಿವ ಬ್ರಿಜೇಶ್ ಪಾಠಕ್ ಅವರು ಲಕ್ನೋ ಕಂಟೋನ್ಮೆಂಟ್ ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷದ ಅಭ್ಯರ್ಥಿ ಮತ್ತು ಎರಡು ಬಾರಿ ಕಾರ್ಪೊರೇಟರ್ ಸುರೇಂದ್ರ ಸಿಂಗ್ ಗಾಂಧಿ ಅವರನ್ನು ಎದುರಿಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+