ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಶಾಸಕಾಂಗ ಪಕ್ಷದ ಸಭೆಗೆ ನನ್ನನ್ನು ಕರೆಯಲಿಲ್ಲ': ಮತ್ತೆ ಮುನಿಸಿಕೊಂಡ ಶಿವಪಾಲ್

|
Google Oneindia Kannada News

ಲಕ್ನೋ ಮಾರ್ಚ್ 26: ಉತ್ತರಪ್ರದೇಶ ವಿಧಾನಸಭೆ ಚುನಾವಣೆ ಬಳಿಕ ಮತ್ತೊಮ್ಮೆ ಶಿವಪಾಲ್ ಯಾದವ್ ಅವರು ಅಖಿಲೇಶ್ ಯಾದವ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಲಕ್ನೋದಲ್ಲಿ ಸಮಾಜವಾದಿ ಪಕ್ಷದ ಸಭೆ ನಡೆಯುತ್ತಿದೆ. ಇಂದು ಎಸ್‌ಪಿ ಅಧ್ಯಕ್ಷ ಅಖಿಲೇಶ್ ಯಾದವ್ ಅವರನ್ನು ಶಾಸಕಾಂಗ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡುವ ಸಾಧ್ಯತೆ ಇದೆ. ಆದರೆ ಅಖಿಲೇಶ್ ಅವರ ಚಿಕ್ಕಪ್ಪ ಮತ್ತು ಪ್ರಗತಿಶೀಲ ಸಮಾಜವಾದಿ ಪಕ್ಷದ ಅಧ್ಯಕ್ಷ ಶಿವಪಾಲ್ ಯಾದವ್ ಈ ಸಭೆಯಲ್ಲಿ ಭಾಗಿಯಾಗಿಲ್ಲ. ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಶಿವಪಾಲ್ ಯಾದವ್ ಅವರು,''ಸಭೆಗೆ ನನ್ನನ್ನು ಕರೆದಿಲ್ಲ. ಹೀಗಾಗಿ ನಾನು ಹೋಗಿಲ್ಲ" ಎಂದು ಶಿವಪಾಲ್ ಯಾದವ್ ಅಖಿಲೇಶ್ ವಿರುದ್ಧ ಮತ್ತೊಮ್ಮೆ ಅಸಮಧಾನ ಹೊರಹಾಕಿದ್ದಾರೆ.

ವಿಧಾನಸಭೆ ಚುನಾವಣೆಗೂ ಮುನ್ನ ಇವರಿಬ್ಬರ ಭೇಟಿ ಮತ್ತೆ ಒಂದಾಗುವ ಮನ್ಸೂಚನೆಯನ್ನು ನೀಡಿತ್ತು. ಆದರೆ ಅದ್ಯಾಕೋ ಅಖಿಲೇಶ್ ಯಾದವ್ ಶಿವಪಾಲ್ ಅವರನ್ನು ಪಕ್ಷಕ್ಕೆ ಒಗ್ಗೂಡಿಸಿಕೊಳ್ಳುವ ಮನಸ್ಸು ಮಾಡಲಿಲ್ಲ. ಆದರೂ ಬಿಜೆಪಿ ವಿರುದ್ಧ ಗೆಲ್ಲಲ್ಲು ಶಿವಪಾಲ್ ಎಸ್‌ಪಿಗೆ ಬೆಂಬಲ ಸೂಚಿಸಿದ್ದರು. ಆದರೆ ಇಂದು ನಡೆದ ಬೆಳವಣಿಗೆಯಿಂದಾಗಿ ಅವರು ಅಖಿಲೇಶ್ ವಿರುದ್ಧ ಮತ್ತೆ ಬೇಸರ ವ್ಯಕ್ತಪಡಿಸಿದ್ದಾರೆ.

ವಾಸ್ತವವಾಗಿ ಸಮಾಜವಾದಿ ಪಕ್ಷದ ಹೊಸದಾಗಿ ಚುನಾಯಿತ ಶಾಸಕರ ಮೊದಲ ಸಭೆಯನ್ನು ಶನಿವಾರ ರಾಜಧಾನಿ ಲಕ್ನೋದಲ್ಲಿ ಆಯೋಜಿಸಲಾಗಿದೆ. ಈ ಸಭೆಯಲ್ಲಿ ಎಸ್‌ಪಿ ಮುಖ್ಯಸ್ಥರನ್ನು ಶಾಸಕಾಂಗ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಬಹುದು. ಮತ್ತೊಂದೆಡೆ, ಅಖಿಲೇಶ್ ಯಾದವ್ ತಮ್ಮ ಚಿಕ್ಕಪ್ಪ ಶಿವಪಾಲ್ ಯಾದವ್ ಅವರನ್ನು ಸಭೆಗೆ ಆಹ್ವಾನಿಸಿಲ್ಲ. ಸಭೆಗೆ ಕರೆಯದಿರುವ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಶಿವಪಾಲ್ ಯಾದವ್, ನಾನು ಎರಡು ದಿನಗಳಿಂದ ಕಾಯುತ್ತಿದ್ದೆ, ಆದರೆ ಶಾಸಕಾಂಗ ಪಕ್ಷದ ಸಭೆಗೆ ನನ್ನನ್ನು ಕರೆಯಲಿಲ್ಲ ಎಂದಿದ್ದಾರೆ.

 did not call me for newly elected MLAs meeting: Shivpal again bored

'ಪಕ್ಷದ ಸಭೆಗೆ ನನ್ನನ್ನು ಆಹ್ವಾನಿಸಿಲ್ಲ. ನಾನು 2 ದಿನಗಳ ಕಾಲ ಕಾಯುತ್ತಿದ್ದೆ ಮತ್ತು ಈ ಸಭೆಗಾಗಿ ನನ್ನ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಗೊಳಿಸಿದೆ, ಆದರೆ ನನಗೆ ಆಹ್ವಾನವಿಲ್ಲ. ನಾನು ಸಮಾಜವಾದಿ ಪಕ್ಷದ ಶಾಸಕ, ಆದರೂ ನನಗೆ ಇನ್ನೂ ಆಹ್ವಾನ ನೀಡಿಲ್ಲ' ಎಂದು ಶಿವಪಾಲ್ ಯಾದವ್ ಸುದ್ದಿ ಸಂಸ್ಥೆ ಎಎನ್‌ಐಗೆ ಮಾತನಾಡುವಾಗ ಹೇಳಿದರು. ಶಿವಪಾಲ್ ಯಾದವ್ ಅವರ ಈ ಹೇಳಿಕೆಯ ನಂತರ, ಚಿಕ್ಕಪ್ಪ ಮತ್ತು ಸೋದರಳಿಯ ನಡುವಿನ ಸಂಬಂಧವನ್ನು ಒಮ್ಮೆ ಊಹಿಸಬಹುದು. ಇತ್ತೀಚೆಗಷ್ಟೇ ಚುನಾವಣೆಗೂ ಮುನ್ನ ಸುಧಾರಿಸಿದ್ದ ಸಂಬಂಧಗಳ ಮಧ್ಯೆ ಮತ್ತೆ ಜಗಳ ಕಾಣಿಸಿಕೊಳ್ಳುತ್ತಿದೆ.

UP Cabinet Minister List 2022: ಇಬ್ಬರು ಉಪ ಮುಖ್ಯಮಂತ್ರಿಗಳು ಸೇರಿದಂತೆ 52 ಸಚಿವರ ಸಂಪೂರ್ಣ ಪಟ್ಟಿUP Cabinet Minister List 2022: ಇಬ್ಬರು ಉಪ ಮುಖ್ಯಮಂತ್ರಿಗಳು ಸೇರಿದಂತೆ 52 ಸಚಿವರ ಸಂಪೂರ್ಣ ಪಟ್ಟಿ

ಅಖಿಲೇಶ್ ಯಾದವ್ ಚಿಕ್ಕಪ್ಪ ಶಿವಪಾಲ್ ಯಾದವ್ ನಡುವೆ 2017ರ ಚುನಾವಣೆಗೂ ಮುನ್ನ ಕೌಟುಂಬಿಕ ಭಿನ್ನಾಭಿಪ್ರಾಯದಿಂದ ಶಿವಪಾಲ್ ಯಾದವ್ ಎಸ್‌ಪಿ ತೊರೆದು ಪ್ರತ್ಯೇಕ ಪಕ್ಷ ಕಟ್ಟಿದ್ದರು. ಆದರೆ ಈ ಬಾರಿ ಬಿಜೆಪಿಯನ್ನು ಎದುರಿಸಲು ಅಖಿಲೇಶ್ ಯಾದವ್ ಅವರ ಅತಂತ್ರ ಮೈತ್ರಿಕೂಟಕ್ಕೆ ಸೇರ್ಪಡೆಯಾದರು. ಆದರೆ ಅಧಿಕೃತವಾಗಿ ಘೋಟಣೆಯಾಗದ ಹಿನ್ನೆಲೆ ಶಿವಪಾಲ್ ಯಾದವ್ ಇಟಾವಾದಲ್ಲಿನ ಜಸ್ವಂತ್ ನಗರದಿಂದ ಸ್ಪರ್ಧಿಸಲಿದ್ದಾರೆ. ಆದರೆ ಮುಲಾಯಂ ಸಿಂಗ್ ಯಾದವ್ ಕುಟುಂಬ ಈ ಕ್ಷೇತ್ರದಲ್ಲಿ ಪ್ರಾಬಲ್ಯ ಸಾಧಿಸಿದೆ.

Recommended Video

ಕಾಲಿಗೆ ಒಂಚೂರು ಕೆಸರು ತಾಕಿಸಿಕೊಳ್ಳದೆ ರಸ್ತೆ ದಾಟ್ಬೇಕಾ? ಹಾಗಾದ್ರೆ ಈ ವಿಡಿಯೋ ನೋಡಿ | Oneindia Kannada

ಅಖಿಲೇಶ್ ಯಾದವ್ ಚಿಕ್ಕಪ್ಪ ಶಿವಪಾಲ್ ಯಾದವ್ ನಡುವೆ 2017ರ ಚುನಾವಣೆಗೂ ಮುನ್ನ ಕೌಟುಂಬಿಕ ಭಿನ್ನಾಭಿಪ್ರಾಯದಿಂದ ಎಸ್‌ಪಿ ತೊರೆದು ಪ್ರತ್ಯೇಕ ಪಕ್ಷ ಕಟ್ಟಿದ್ದರು. ಆದರೆ ಈ ಬಾರಿ ಬಿಜೆಪಿಯನ್ನು ಎದುರಿಸಲು ಅಖಿಲೇಶ್ ಯಾದವ್ ಅವರ ಅತಂತ್ರ ಮೈತ್ರಿಕೂಟಕ್ಕೆ ಸೇರ್ಪಡೆಯಾದರು. ಆದರೆ ಅಧಿಕೃತವಾಗಿ ಶಿವಪಾಲ್ ಯಾದವ್ ಸೇರ್ಪಡೆ ಬಗ್ಗೆ ಅಖಿಲೆಶ್ ಘೋಷಣೆ ಮಾಡದ ಹಿನ್ನೆಲೆ ಶಿವಪಾಲ್ ಯಾದವ್ ಇಟಾವಾದಲ್ಲಿನ ಜಸ್ವಂತ್ ನಗರದಿಂದ ಸ್ಪರ್ಧಿಸಿದರು. ಮುಲಾಯಂ ಸಿಂಗ್ ಯಾದವ್ ಕುಟುಂಬ ಈ ಕ್ಷೇತ್ರದಲ್ಲಿ ಪ್ರಾಬಲ್ಯ ಸಾಧಿಸಿದೆ.

English summary
Shivpal Yadav once again expressed his displeasure with Akhilesh Yadav after the Uttar Pradesh assembly elections. A meeting of the Socialist Party is being held in Lucknow today. “I am not invited to the meeting. This is why I will not go, ”Shivpal said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X