ಪ್ರವಾದಿ ಮೊಹಮ್ಮದರನ್ನು ಟೀಕಿಸಿದ ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ವಿರುದ್ಧ ಕೇಸ್

ವಾರಣಾಸಿ, ಮೇ 29: ಪ್ರವಾದಿ ಮೊಹಮ್ಮದ್ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ ಆರೋಪದ ಹಿನ್ನೆಲೆ ಬಿಜೆಪಿ ರಾಷ್ಟ್ರೀಯ ವಕ್ತಾರ ನೂಪುರ್ ಶರ್ಮಾ ವಿರುದ್ಧ ಮುಂಬೈನಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ರಾಷ್ಟ್ರೀಯ ಸುದ್ದಿ ವಾಹಿನಿಯೊಂದರಲ್ಲಿ ಪ್ರವಾದಿ ಮೊಹಮ್ಮದ್ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ ಆರೋಪದ ಹಿನ್ನೆಸೆ ಭಾರತೀಯ ಸುನ್ನಿ ಮುಸ್ಲಿಮರ ಸುನ್ನಿ ಬರೇಲ್ವಿ ಸಂಘಟನೆ ಆಗಿರುವ ರಾಝಾ ಅಕಾಡೆಮಿಯ ದೂರಿನ ಮೇರೆಗೆ ಭಾರತೀಯ ದಂಡ ಸಂಹಿತೆಯ (IPC) 295A, 153A ಮತ್ತು 505B ಅಡಿಯಲ್ಲಿ ಮುಂಬೈನ ಪೈಡೋನಿ ಪೊಲೀಸ್ ಠಾಣೆ ಪ್ರದೇಶದಲ್ಲಿ ಪ್ರಕರಣ ದಾಖಲಿಸಲಾಗಿದೆ.

ಜ್ಞಾನವಾಪಿ ಮಸೀದಿ ಪ್ರಕರಣದ ಕುರಿತು ಟಿವಿ ಚಾನೆಲ್‌ನಲ್ಲಿ ಇತ್ತೀಚೆಗೆ ನಡೆದ ಚರ್ಚೆಯೊಂದರಿಂದ ಹೆಚ್ಚು ಎಡಿಟ್ ಮಾಡಿದ ವಿಡಿಯೋವನ್ನು "ಸತ್ಯ ಪರೀಕ್ಷಕ" ಎಂದು ಕರೆಯುವ ವ್ಯಕ್ತಿಯೊಬ್ಬರು ಪ್ರಸಾರ ಮಾಡಿದ್ದರು. ತದನಂತರ ಸಾಮಾಜಿಕ ಜಾಲತಾಣದಲ್ಲಿ ತನಗೆ ಕೊಲೆ ಮತ್ತು ಅತ್ಯಾಚಾರ ಬೆದರಿಕೆಗಳು ಬರುತ್ತಿವೆ ಎಂದು ಶುಕ್ರವಾರ ಶರ್ಮಾ ಆರೋಪಿಸಿದ್ದರು.

ನೂಪುರ್ ಶರ್ಮಾರಿಗೆ ಜೀವ ಬೆದರಿಕೆ ಕರೆ

ನೂಪುರ್ ಶರ್ಮಾರಿಗೆ ಜೀವ ಬೆದರಿಕೆ ಕರೆ

"ಕಳೆದ ರಾತ್ರಿ ನನ್ನ ಚರ್ಚೆಯೊಂದರಿಂದ ಹೆಚ್ಚು ಕಟ್ ಮಾಡಲಾಗಿರುವ ಹಾಗೂ ಕೆಲವೇ ಕೆಲವು ಅಂಶವನ್ನು ಆಯ್ಕೆ ಮಾಡಿರುವ ವಿಡಿಯೋಗಳನ್ನು ಹಾಕುವ ಮೂಲಕ ವಾತಾವರಣವನ್ನೇ ಹಾಳು ಮಾಡಲಾಗುತ್ತಿದೆ. ಸತ್ಯ-ಶೋಧನೆ ಹೆಸರಿನಲ್ಲಿ ಈ ಕೃತ್ಯವನ್ನು ನಡೆಸುತ್ತಿದ್ದು, ನನಗೆ ಅತ್ಯಾಚಾರ ಮತ್ತು ಪ್ರಾಣ ಬೆದರಿಕೆ ಕರೆಗಳು ಬರುತ್ತಿವೆ. ನನ್ನ ಕುಟುಂಬ ಸದಸ್ಯರಿಗೂ ಬೆದರಿಕೆ ಹಾಕಲಾಗುತ್ತಿದೆ," ಎಂದು ನೂಪುರ್ ಶರ್ಮಾ ದೂಷಿಸಿದ್ದಾರೆ.

ಎಡಿಟ್ ಮಾಡಿರುವ ವಿಡಿಯೋ ಬಳಸಿ ಟ್ರೋಲ್

ಎಡಿಟ್ ಮಾಡಿರುವ ವಿಡಿಯೋ ಬಳಸಿ ಟ್ರೋಲ್

ತಮ್ಮ ವಿರುದ್ಧ ಟ್ರೋಲ್‌ಗಳನ್ನು ಉತ್ತೇಜಿಸಲು ಆಲ್ಟ್ ನ್ಯೂಸ್ ಮಾಲೀಕರು ಎಡಿಟ್ ಮಾಡಿದ ವಿಡಿಯೋಗಳನ್ನು ಪೋಸ್ಟ್ ಮಾಡಿದ್ದಾರೆ ಎಂದು ಆರೋಪಿಸಿದ ನೂಪುರ್ ಶರ್ಮಾ ತಮ್ಮ ಕುಟುಂಬಕ್ಕೆ ಯಾವುದೇ ಹಾನಿ ಸಂಭವಿಸಿದರೆ ಈ ಸುದ್ದಿ ಸಂಸ್ಥೆಯ ಮಾಲೀಕರೇ ಹೊಣೆ ಎಂದು ದೂಷಿಸಿದ್ದಾರೆ.

ಕುಟುಂಬಕ್ಕೆ ಅಪಾಯವಾದಲ್ಲಿ ಜುಬೇರ್ ಕಾರಣ ಎಂದು ಆರೋಪ

ಕುಟುಂಬಕ್ಕೆ ಅಪಾಯವಾದಲ್ಲಿ ಜುಬೇರ್ ಕಾರಣ ಎಂದು ಆರೋಪ

"ನಾನು ಪೊಲೀಸ್ ಕಮಿಷನರ್ ಮತ್ತು ದೆಹಲಿ ಪೊಲೀಸರನ್ನು ಟ್ಯಾಗ್ ಮಾಡಿದ್ದೇನೆ. ನನಗೆ ಮತ್ತು ನನ್ನ ಕುಟುಂಬ ಸದಸ್ಯರಿಗೆ ತಕ್ಷಣವೇ ಅಪಾಯ ಉಂಟಾಗಬಹುದು ಎಂಬ ಅನುಮಾನವಿದೆ. ನನಗೆ ಅಥವಾ ನನ್ನ ಕುಟುಂಬದ ಸದಸ್ಯರಿಗೆ ಯಾವುದೇ ಹಾನಿ ಉಂಟಾದರೆ, ನಾನು ಮಾಲೀಕನೆಂದು ಭಾವಿಸುವ ಮೊಹಮ್ಮದ್ ಜುಬೇರ್ ಆಲ್ಟ್ ನ್ಯೂಸ್ ಸಂಪೂರ್ಣ ಜವಾಬ್ದಾರವಾಗಿದೆ,'' ಎಂದು ಅವರು ಹೇಳಿದರು.

Recommended Video

    IPL ಫೈನಲ್ ಮ್ಯಾಚ್ ಗೂ ಮುನ್ನ ಸ್ಟೇಡಿಯಂನಲ್ಲಿ ಮಾರ್ದನಿಸಿತು KGF ನ ವಯಲೆನ್ಸ್ ಡೈಲಾಗ್ | OneIndia Kannada
    ಮೊಹಮ್ಮದ್ ಜುಬೇರ್ ಸುಳ್ಳು ಸುದ್ದಿ ಹರಡುವವನು

    ಮೊಹಮ್ಮದ್ ಜುಬೇರ್ ಸುಳ್ಳು ಸುದ್ದಿ ಹರಡುವವನು

    "ನಾನು ತಪ್ಪು ಮಾಡಿದ್ದರೆ, ಸತ್ಯ ಪರೀಕ್ಷಕರು ನನಗೆ ಕೊಲೆ ಬೆದರಿಕೆಗಳನ್ನು ಕಳುಹಿಸುವುದಕ್ಕಿಂತ ಸತ್ಯವನ್ನು ಸರಿಪಡಿಸಬೇಕು. ದಯವಿಟ್ಟು ಮುಂದೆ ಬಂದು ಸತ್ಯಗಳನ್ನು ಸರಿಪಡಿಸಿ, ಇದು ಸರಿಯಲ್ಲ, ಇದು ಸಂಪೂರ್ಣವಾಗಿ ಕಾನೂನುಬಾಹಿರ, ಅವನು (ಜುಬೈರ್) ಸತ್ಯ ಪರೀಕ್ಷಕನಲ್ಲ. ಅವನು ಸುಳ್ಳುಗಳನ್ನು ಹರಡುವವನು,''ಎಂದು ನುಪೂರ್ ಶರ್ಮಾ ಆರೋಪಿಸಿದ್ದಾರೆ.

    Notifications
    Settings
    Clear Notifications
    Notifications
    Use the toggle to switch on notifications
    • Block for 8 hours
    • Block for 12 hours
    • Block for 24 hours
    • Don't block
    Gender
    Select your Gender
    • Male
    • Female
    • Others
    Age
    Select your Age Range
    • Under 18
    • 18 to 25
    • 26 to 35
    • 36 to 45
    • 45 to 55
    • 55+