ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುಪಿಗಾಗಿ ಕದನ: ಅಖಿಲೇಶ್ ಯಾದವ್ ಚಿಕ್ಕಪ್ಪ ಎಸ್ಪಿ ಚಿಹ್ನೆ ಜೊತೆ ಸ್ಪರ್ಧೆ

|
Google Oneindia Kannada News

ಲಕ್ನೋ ಜನವರಿ 17: ಸಮಾಜವಾದಿ ಪಕ್ಷಕ್ಕೆ (ಎಸ್‌ಪಿ) ಪ್ರಗತಿಶೀಲ ಸಮಾಜವಾದಿ ಪಕ್ಷ ಲೋಹಿಯಾ (ಪಿಎಸ್‌ಪಿಎಲ್) ಔಪಚಾರಿಕವಾಗಿ ವಿಲೀನವಾಗದಿದ್ದರೂ, ಪಿಎಸ್‌ಪಿ ಚಿಹ್ನೆಯ ಮೇಲೆ ನಾನು ಮತ್ತು ತನ್ನ ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸುವುದಾಗಿ ಪಿಎಸ್‌ಪಿಎಲ್ ಅಧ್ಯಕ್ಷ ಶಿವಪಾಲ್ ಸಿಂಗ್ ಯಾದವ್ ಹೇಳಿದ್ದಾರೆ.

ಸಮಾಜವಾದಿ ಪಕ್ಷ ಮತ್ತು ಪ್ರಗತಿಶೀಲ ಸಮಾಜವಾದಿ ಪಕ್ಷ ಲೋಹಿಯಾ ಔಪಚಾರಿಕವಾಗಿ ವಿಲೀನವಾಗಿಲ್ಲದಿದ್ದರೂ ನಾವು ಎಸ್‌ಪಿ ಚಿಹ್ನೆಯ ಜೊತೆಗೆ ಸ್ಪರ್ಧಿಸುತ್ತೇವೆ ಮತ್ತು ಭಾರತೀಯ ಜನತಾ ಪಕ್ಷವನ್ನು (ಬಿಜೆಪಿ) ಸೋಲಿಸುತ್ತೇವೆ ಎಂದು ಅವರು ಹೇಳಿದ್ದಾರೆ. ಮಾತ್ರವಲ್ಲದೆ ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಅವರನ್ನು ತಮ್ಮ ನಾಯಕನನ್ನಾಗಿ ಒಪ್ಪಿಕೊಂಡಿದ್ದೇನೆ ಎಂದು ಶಿವಪಾಲ್ ಸಿಂಗ್ ಪುನರುಚ್ಚರಿಸಿದ್ದಾರೆ.

ಬೇರೆ ರಾಜ್ಯಗಳಿಂದ ಕಾರ್ಯಕರ್ತರ ಆಮದು ಯಾಕೆ? ಅಖಿಲೇಶ್ ಯಾದವ್ಬೇರೆ ರಾಜ್ಯಗಳಿಂದ ಕಾರ್ಯಕರ್ತರ ಆಮದು ಯಾಕೆ? ಅಖಿಲೇಶ್ ಯಾದವ್

ಶಿವಪಾಲ್ ಯಾದವ್ ಅವರು ತಮ್ಮ ಪಕ್ಷಕ್ಕೆ ಚುನಾವಣಾ ಚಿಹ್ನೆ 'ಸ್ಟೂಲ್' ಎಂದು ಗುರುತಿಸಿದ್ದಾರೆ. ಆದರೆ ಅದನ್ನು ಜನಪ್ರಿಯಗೊಳಿಸಲು ಬಹಳ ಕಡಿಮೆ ಸಮಯ ಉಳಿದಿದೆ ಎಂದು ಹೇಳಿದರು. ಈ ಹಿಂದೆ ಪಿಎಸ್‌ಪಿಎಲ್‌ಗೆ ಚುನಾವಣಾ ಚಿಹ್ನೆಯಾಗಿಕೀ'ಯನ್ನು ನೀಡಲಾಗಿತ್ತು.

Battle for Up: Akhilesh Yadav’s Uncle Shivpal to Contest on SP Symbol

ನಾನು ಅಖಿಲೇಶ್ ಅವರನ್ನು ನನ್ನ ನಾಯಕ ಎಂದು ಒಪ್ಪಿಕೊಂಡಿರುವಾಗ ಅವರ ನಾಯಕತ್ವದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಗೊಂದಲ ನನಗಿಲ್ಲ ಎಂದರು. ಜೊತೆಗೆ ತಮ್ಮ ಸೊಸೆ ಅಪರ್ಣಾ ಯಾದವ್ ಬಿಜೆಪಿ ಸೇರುತ್ತಿದ್ದಾರೆ ಎಂಬ ಊಹಾಪೋಹಗಳಿಗೂ ಶಿವಪಾಲ್ ಪ್ರತಿಕ್ರಿಯಿಸಿದ್ದಾರೆ. ಅಪರ್ಣಾ ಕುಟುಂಬ ಮತ್ತು ಎಸ್ಪಿಯಲ್ಲಿ ಉಳಿದು ಜನರಿಗಾಗಿ ಕೆಲಸ ಮಾಡಬೇಕು. ಅವರಿಗೆ ಸೂಕ್ತ ಸಮಯದಲ್ಲಿ ಪ್ರತಿಫಲ ಖಂಡಿತವಾಗಿಯೂ ಸಿಗುತ್ತದೆ ಎಂದು ಶಿವಪಾಲ್ ಸಿಂಗ್ ಅವರು ಹೇಳಿದರು. ಅಪರ್ಣಾ ಯಾದವ್ ಅವರು 2017ರ ಚುನಾವಣೆಯಲ್ಲಿ ಲಕ್ನೋ ಕಂಟೋನ್ಮೆಂಟ್ ವಿಧಾನಸಭಾ ಕ್ಷೇತ್ರದಿಂದ ಎಸ್‌ಪಿ ಟಿಕೆಟ್‌ನಲ್ಲಿ ಸ್ಪರ್ಧಿಸಿದ್ದರು. ಆದರೆ ಅವರು ಬಿಜೆಪಿಯ ರೀಟಾ ಬಹುಗುಣ ಜೋಶಿ ವಿರುದ್ಧ ಸೋತಿದ್ದರು.

ಭೀಮ್ ಆರ್ಮಿ ಮುಖ್ಯಸ್ಥರಿಗೆ ಅಖಿಲೇಶ್ ಯಾದವ್ ತಿರುಗೇಟು
ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಪಕ್ಷವನ್ನು ಬಲಪಡಿಸಲು ಸಣ್ಣ ಪಕ್ಷಗಳನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತಿದ್ದಾರೆ. ಕಳೆದ ತಿಂಗಳು ಡಿಸೆಂಬರ್ ನಲ್ಲಿ ಅಖಿಲೇಶ್ ಚಿಕ್ಕಪ್ಪ ಶಿವಪಾಲ್ ಸಿಂಗ್ ಯಾದವ್ ಅವರು ಪ್ರಗತಿಶೀಲ ಸಮಾಜವಾದಿ (ಲೋಹಿಯಾ) ಪಕ್ಷದ ಜೊತೆ ಮೈತ್ರಿ ಘೋಷಿಸಿದ್ದರು. ಎಸ್‌ಪಿ ಮುಖ್ಯಸ್ಥ ಶಿವಪಾಲ್ ಅವರ ನಿವಾಸದಲ್ಲಿ ನಡೆದ ಸಭೆಯ ನಂತರ ಈ ಘೋಷಣೆ ಹೊರಬಿದ್ದಿತ್ತು. ಬಹಳ ದಿನಗಳಿಂದೆ ಶಿವಪಾಲ್ ಸಿಂಗ್ ಯಾದವ್ ಅವರು ಅಖಿಲೇಶ್ ಜೊತೆಗಿನ ಮೈತ್ರಿ ಬಗ್ಗೆ ಹೇಳಿಕೆ ನೀಡಿದ್ದರು. ಆ ಬಳಿಕ ಶಿವಪಾಲ್ ಸಿಂಗ್ ಯಾದವ್ ಸೊಸೆ ಅಪರ್ಣಾ ಯಾದವ್ ಬಿಜೆಪಿಗೆ ಸೇರ್ಪಡೆಗೊಂಡರು. ಇದಾದ ಬಳಿಕ ಯಾದವ್ ಮೈತ್ರಿ ಬಗ್ಗೆ ಯಾಕೋ ಮಾತೇ ಆಡಲಿಲ್ಲ.

2016ರಲ್ಲಿ ಅಖಿಲೇಶ್ ಅವರು ಮುಖ್ಯಮಂತ್ರಿಯಾಗಿದ್ದಾಗ ಶಿವಪಾಲ್ ಅವರನ್ನು ವಜಾಗೊಳಿಸುವುದರೊಂದಿಗೆ ಚಿಕ್ಕಪ್ಪ ಮತ್ತು ಯಾದವ್ ನಡುವಿನ ಸಂಬಂಧ ಹಳಸಿತ್ತು. ಅಖಿಲೇಶ್ ಅವರು ಜನವರಿ 2017 ರಲ್ಲಿ ಎಸ್‌ಪಿ ಅಧ್ಯಕ್ಷರಾದರು ಮತ್ತು ಶಿವಪಾಲ್ ತಮ್ಮದೇ ಆದ ಪಕ್ಷವನ್ನು ಸ್ಥಾಪಿಸಿದರು. ಸದ್ಯ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಅವರೊಂದಿಗೆ ತಮ್ಮ ಚಿಕ್ಕಪ್ಪ ಶಿವಪಾಲ್ ಯಾದವ್ ಅವರು ಮೈತ್ರಿ ಮಾಡಿಕೊಳ್ಳುವುದಾಗಿ ತಿಳಿಸಿದ್ದಾರೆ.

Recommended Video

ಹೊಸ ನಾಯಕನ ಮುಂದೆ Kohli ಹೇಗಿರಬೇಕು ಎಂದ Kapil Dev | Oneindia Kannada

ಯುಪಿಯಲ್ಲಿ ಬಿಜೆಪಿ ಗೆದ್ದರೆ ಯೋಗಿಯೇ ಪಿಎಂ ಅಭ್ಯರ್ಥಿ; ಏನಿದು ಅಖಿಲೇಶ್ ಮಾತಿನ ಮರ್ಮ?
2022ರಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದ ಅಭ್ಯರ್ಥಿಗಳು 400ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲುವು ದಾಖಲಿಸಲಿದ್ದಾರೆ ಎಂದು ಅಖಿಲೇಶ್ ಯಾದವ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಉತ್ತರಪ್ರದೇಶ ಚುನಾವಣೆ ಹೊಸ ರಣತಂತ್ರ ಒಬಿಸಿ ಮತಗಳತ್ತ ಅಖಿಲೇಶ್ ಚಿತ್ತವಿದ್ದು ಸಣ್ಣ ಪಕ್ಷಗಳೊಂದಿಗಿನ ಮೈತ್ರಿ ನಮ್ಮ ಪಕ್ಷವನ್ನು 400 ಕ್ಷೇತ್ರಗಳಲ್ಲಿ ಗೆಲ್ಲುವಂತೆ ಮಾಡಬಹುದು ಎನ್ನುವ ವಿಶ್ವಾಸ ಅಖಿಲೇಶ್ ಅವರಿಗಿದೆ. ಹೀಗಾಗಿ ಬಿಜೆಪಿ ವಿರುದ್ಧ ಈ ಬಾರೀ ಗೆಲ್ಲಲೇಬೇಕು ಎನ್ನುವ ಛಲದೊಂದಿಗೆ ಅಖಿಲೇಶ್ ಯಾದವ್ ಕಾರ್ಯತಂತ್ರ ರೂಪಿಸುತ್ತಿದ್ದಾರೆ.

English summary
Even though there has been no formal merger of the Pragatisheel Samajwadi Party Lohia (PSPL) into the Samajwadi Party (SP), PSPL president Shivpal Singh Yadav has said that he and his party candidates will contest on the SP symbol.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X