ಅಯೋಧ್ಯೆ ತೀರ್ಪು: ಮುಸ್ಲಿಂ ಕಾನೂನು ಮಂಡಳಿ ಇಂದು ಸಭೆ, ಮರು ಪರಿಶೀಲನಾ ಅರ್ಜಿ ಸಲ್ಲಿಸಲು ಕರೆ

ಲಕ್ನೋ, ನವೆಂಬರ್ 17: ಅಯೋಧ್ಯೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನ ಬಗ್ಗೆ ಚರ್ಚಿಸಲು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಭಾನುವಾರ ಲಕ್ನೋದಲ್ಲಿ ಸಭೆ ಕರೆದಿದೆ. ಅಯೋಧ್ಯೆಯ ತೀರ್ಪಿನ ವಿರುದ್ಧ ಮರು ಪರಿಶೀಲನಾ ಅರ್ಜಿ ಸಲ್ಲಿಸಬೇಕೆ ಅಥವಾ ಬೇಡವೇ ಎಂಬುದನ್ನು ಎಐಎಂಪಿಎಲ್ಬಿ ನಿರ್ಧರಿಸುವ ಸಾಧ್ಯತೆಯಿದೆ.

ಬಾಬರಿ ಮಸೀದಿ ಕ್ರಿಯಾ ಸಮಿತಿ ಯ ಕನ್ವೀನರ್, ಸುನ್ನಿ ಸೆಂಟ್ರಲ್ ವಕ್ಫ ಮಂಡಳಿಯ ವಕೀಲ ಜಫರ್ಯಾಬ್ ಜಿಲಾನಿ ಅವರು ಮುಸ್ಲಿಂ ಸಮುದಾಯದ ದಾವೆದಾರರು ಮತ್ತು ಅಯೋಧ್ಯೆ ಭೂ ವಿವಾದಕ್ಕೆ ಸಂಬಂಧ ಹೊಂದಿದ್ದವರಿಗೆ ಪರಿಶೀಲನಾ ಅರ್ಜಿ ಬಗ್ಗೆ ಚರ್ಚೆ ಸಭೆಯಲ್ಲಿ ಪಾಲ್ಗೊಳ್ಳಲು ಶನಿವಾರ ಕರೆ ನೀಡಿದ್ದರು.

ಖಾಸಗಿ ವಾಹಿನಿಯೊಂದಕ್ಕೆ ಹೇಳಿಕೆ ನೀಡಿದ ವಕೀಲ ಜಫರ್ಯಾಬ್ ಜಿಲಾನಿ,"ನಾಳೆ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಎಲ್ಲ ಸದಸ್ಯರನ್ನು ಲಕ್ನೋದ ನದ್ವಾ ಕಾಲೇಜಿನಲ್ಲಿ ಸಭೆ ಕರೆಯಲಾಗಿದೆ, ಅಲ್ಲಿ ಮರು ಪರಿಶೀಲನಾ ಅರ್ಜಿಯನ್ನು ಸಲ್ಲಿಸುವ ಕುರಿತು ನಿರ್ಧಾರತೆಗೆದುಕೊಳ್ಳಲಾಗುವುದು" ಎಂದು ಹೇಳಿದರು.

Ayodya Verdict: Muslim Law Board To Meet Today, Will Take Call On Filing Review Petition

"ಅಯೋಧ್ಯೆಯಲ್ಲಿ ಮಸೀದಿಗೆ ಐದು ಎಕರೆ ಭೂಮಿಯನ್ನು ಮುಸ್ಲಿಂ ಸಮುದಾಯ ಸ್ವೀಕರಿಸಬೇಕೇ ಎಂಬುದನ್ನು ಚರ್ಚಿಸುತ್ತೇವೆ. ಇದನ್ನು ಸುಪ್ರೀಂ ಕೋರ್ಟ್ ಆದೇಶದಂತೆ ಕೇಂದ್ರ ಸರ್ಕಾರ ನಮಗೆ ನೀಡಲಿದೆ. ಸಬೆಯಲ್ಲಿ ಪರಿಶೀಲನಾ ಅರ್ಜಿ ಸಲ್ಲಿಸಬೇಕೆಂದು ಮಂಡಳಿ ನಿರ್ಧರಿಸಿದರೆ ಮರು ಪರಿಶೀಲನಾ ಅರ್ಜಿ ಸಲ್ಲಿಸಲಾಗುವುದು" ಎಂದು ಜಫರ್ಯಾಬ್ ಜಿಲಾನಿ ಹೇಳಿದ್ದಾರೆ.

ಮುಂದುವರೆದು ಮಾತನಾಡಿರುವ ಜಿಲಾನಿ "ಅಯೋಧ್ಯೆಯ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೀಡಿದ ತೀರ್ಪುನ್ನು ನಾನು ಓದಿದೆ, ಆದರೆ ನನಗೆ ತೃಪ್ತಿಕರವಾಗಿ ತೀರ್ಪು ಬಂದಿಲ್ಲ ಮತ್ತು ತೀರ್ಪಿನ ವಿರುದ್ಧ ಮರು ಪರಿಶೀಲನಾ ಸಲ್ಲಿಸುವುದು ಒಳಿತು ಇದು ನನ್ನ ವೈಯಕ್ತಿಕ ಅಭಿಪ್ರಾಯ"ವೆಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+