ಅಯೋಧ್ಯಾ ರಾಮಮಂದಿರಕ್ಕೆ 1000 ವರ್ಷ ಚಿರಸ್ಥಾಯಿ

ಅಯೋಧ್ಯಾ, ಆ. 20: ಆಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ಶಿಲಾನ್ಯಾಸ ಆರಂಭವಾದಾಗಿನಿಂದಲೂ ಮಂದಿರ ನಿರ್ಮಾಣಕ್ಕೆ ಬಳಸುವ ಕಲ್ಲುಗಳ ಬಗ್ಗೆ ಎಲ್ಲರಿಗೂ ಕುತೂಹಲ ಇದ್ದೇ ಇತ್ತು. ರಾಜಸ್ಥಾನ ಮೂಲದ ಶಿಲೆಗಳನ್ನು ಬಳಸಲಾಗುತ್ತದೆ ಎಂಬ ಮಾಹಿತಿ ಆರಂಭದಲ್ಲೇ ಹೊರ ಬಂದಿತ್ತು. ಶಿಲೆಗಳು ಎಷ್ಟು ವರ್ಷ ಬಾಳಿಕೆ ಬರುತ್ತದೆ ಎಂಬುದರ ಬಗ್ಗೆ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ವಿವರಣೆ ನೀಡಿದ್ದಾರೆ. ಆಯೋಧ್ಯಾದಲ್ಲಿ ನಿರ್ಮಾಣವಾಗುವ ರಾಮ ಮಂದಿರವು 1000 ವರ್ಷ ಚಿರಸ್ಥಾಯಿಯಾಗಿ ಉಳಿಯಲಿದೆ ಎಂದಿದ್ದಾರೆ.

ಐಐಟಿ-ಚೆನ್ನೈ ಮತ್ತು ಕೇಂದ್ರ ಕಟ್ಟಡ ಸಂಶೋಧನಾ ಸಂಸ್ಥೆ (ಸಿಬಿಆರ್‌ಐ) ನಿಂದ ರಾಮ ಮಂದಿರ ನಿರ್ಮಾಣಾ ಪ್ರಕ್ರಿಯೆಯಲ್ಲಿ ಸಲಹೆ ಪಡೆಯಲು ನಿರ್ಧರಿಸಲಾಗಿದೆ ಎಂದು ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಯ ಹಿರಿಯ ಕಾರ್ಯಕಾರಿಯೂ ಆಗಿರುವ ರಾಯ್ ಹೇಳಿದರು.

ಲಾರ್ಸೆನ್ ಮತ್ತು ಟೌಬ್ರೊ ಸಂಸ್ಥೆ ನಿರ್ಮಾಣದ ಜವಾಬ್ದಾರಿ ಹೊತ್ತುಕೊಂಡಿದೆ. ಮಣ್ಣಿನ ಬಳಕೆ, ಕಲ್ಲು ಪ್ರಮಾಣ, ಭೂಕಂಪ ಇತರೆ ವಿಕೋಪದಿಂದ ಮಂದಿರಕ್ಕೆ ಧಕ್ಕೆ ಉಂಟಾಗದಂತೆ ವಾಸ್ತು ರೂಪಿಸಲಾಗುತ್ತದೆ ಎಂದು ಚಂಪತ್ ಹೇಳಿದರು.

Ayodhya Ram Temple to be build with stones only, will stand for 1,000 years: Champat Rai

ದೇವಾಲಯದ ನಿರ್ಮಾಣದಲ್ಲಿ 10,000 ತಾಮ್ರದ ಸಲಾಕೆಗಳನ್ನು ಬಳಸಲಾಗುತ್ತಿದ್ದು, ಇದಕ್ಕಾಗಿ ತಾಮ್ರ ದಾನ ಪಡೆದುಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+