ಯುಪಿ: ಪತ್ನಿಯೊಂದಿಗೆ ಅಖಿಲೇಶ್ ಯಾದವ್ ಮತ- ಯೋಗಿ ವಿರುದ್ಧ ವಾಗ್ದಾಳಿ
ಇಟಾವಾ ಫೆಬ್ರವರಿ 20: ಯುಪಿ ವಿಧಾನಸಭೆ ಚುನಾವಣೆಯ ಮೂರನೇ ಹಂತದ ಮತದಾನದಲ್ಲಿ ಮುಲಾಯಂ ಸಿಂಗ್ ಯಾದವ್ ಅವರ ಇಡೀ ಕುಟುಂಬ ಭಾನುವಾರ ಅವರ ಸ್ವಗ್ರಾಮ ಸೈಫೈನಲ್ಲಿ ಮತದಾನ ಮಾಡಿದರು. ಸಮಾಜವಾದಿ ಪಕ್ಷದ ಅಧ್ಯಕ್ಷ ಮತ್ತು ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ಪತ್ನಿ ಡಿಂಪಲ್ ಯಾದವ್ ಅವರೊಂದಿಗೆ ಮತ ಚಲಾಯಿಸಿದರು. ಮತ ಚಲಾಯಿಸಿದ ನಂತರ, ಮಾಧ್ಯಮದ ಮುಂದೆ ಮಾತನಾಡಿದ ಅಖಿಲೇಶ್ ಅವರು ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ಗುರಿಯಾಗಿಸಿಕೊಂಡು ಎಸ್‌ಪಿ ಸರ್ಕಾರ ರಚಿಸುವುದಾಗಿ ಹೇಳಿಕೊಂಡರು. ಅಖಿಲೇಶ್ ಯಾದವ್ ಸಿಎಂ ಯೋಗಿಯನ್ನು ಗುರಿಯಾಗಿಸಿಕೊಂಡು ಈ ಬಾಬಾ 5 ವರ್ಷ ಮುಖ್ಯಮಂತ್ರಿಯಾಗಿದ್ದರು. ಪಿಜಿಐ ಇರುವ ನಿಮ್ಮ ಮೆಡಿಕಲ್ ಕಾಲೇಜಿಗೆ ಯಾಕೆ ಸೌಲಭ್ಯ ನೀಡಿಲ್ಲ. ಇದಕ್ಕೆ ಯಾರು ಹೊಣೆ? ಸೈಫೈ ಅಭಿವೃದ್ಧಿ ಒಂದು ದಿನಕ್ಕೂ ಆಗಿಲ್ಲ. ಬಾಬಾ ಮುಖ್ಯಮಂತ್ರಿ ಯಾವುದೇ ಕೆಲಸ ಮಾಡೊಲ್ಲ, ಒಳ್ಳೆಯ ಕೆಲಸದ ಕಡೆಗೆ ತಿರಗಿಯೂ ನೋಡಿಲ್ಲ ಎಂದು ವಾಗ್ದಾಳಿ ಮಾಡಿದರು.
ಉತ್ತರ ಪ್ರದೇಶದ ಮೂರನೇ ಹಂತದ ವಿಧಾನಸಭೆ ಚುನಾವಣೆಯ 16 ಜಿಲ್ಲೆಗಳ 59 ಸ್ಥಾನಗಳಿಗೆ ಮತದಾನ ನಡೆಯುತ್ತಿದೆ. ಮತದಾನ ನಡೆಯುತ್ತಿರುವ 59 ಸ್ಥಾನಗಳಲ್ಲಿ ಹೈ-ಪ್ರೊಫೈಲ್ ಕರ್ಹಾಲ್ ಸ್ಥಾನವೂ ಸೇರಿದೆ. ಸಮಾಜವಾದಿ ಪಕ್ಷದ (ಎಸ್‌ಪಿ) ರಾಷ್ಟ್ರೀಯ ಅಧ್ಯಕ್ಷ ಅಖಿಲೇಶ್ ಯಾದವ್ ಅವರೇ ಕರ್ಹಾಲ್ ಕ್ಷೇತ್ರದಿಂದ ಕಣದಲ್ಲಿದ್ದಾರೆ. ಶಿವಪಾಲ್ ಸಿಂಗ್ ಯಾದವ್ ಅವರು ಇಟಾವಾದ ಜಸ್ವಂತ್‌ನಗರ ಕ್ಷೇತ್ರದಿಂದ ಕಣದಲ್ಲಿದ್ದಾರೆ. ಮೈನ್‌ಪುರಿ ಮತ್ತು ಇಟಾವಾ ಮುಲಾಯಂ ಕುಟುಂಬದ ಭದ್ರಕೋಟೆ ಎಂದು ಹೇಳಲಾಗುತ್ತದೆ.
Assembly Elections 2022 Voting Live: 11 ಗಂಟೆಗೆ ಯುಪಿ, ಪಂಜಾಬ್ ಮತದಾನ ಪ್ರಮಾಣ?
ಜಸ್ವಂತ್‌ನಗರದ ಮತಗಟ್ಟೆಯಲ್ಲಿ ಮತದಾನ
ಎಸ್‌ಪಿ ಮುಖ್ಯಸ್ಥ ಮತ್ತು ಕರ್ಹಾಲ್‌ನ ಪಕ್ಷದ ಅಭ್ಯರ್ಥಿ ಅಖಿಲೇಶ್ ಯಾದವ್ ಜಸ್ವಂತ್‌ನಗರದ ಮತಗಟ್ಟೆಯಲ್ಲಿ ಮತ ಚಲಾಯಿಸಿದರು. ಈ ವೇಳೆ ಪತ್ನಿ ಡಿಂಪಲ್ ಯಾದವ್ ಕೂಡ ಜೊತೆಗಿದ್ದರು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅಖಿಲೇಶ್, ಬಿಜೆಪಿ ನಿರ್ನಾಮವಾಗಲಿದೆ. ಉತ್ತರ ಪ್ರದೇಶದ ರೈತರು ಅವರನ್ನು ಕ್ಷಮಿಸುವುದಿಲ್ಲ. ಮೊದಲ ಎರಡು ಮತ್ತು ಇಂದು ಹಂತದಲ್ಲಿ ನಾವು ಶತಕ ಬಾರಿಸಿದ್ದು, ಈ ಹಂತದಲ್ಲಿಯೂ ಎಸ್‌ಪಿ ಮತ್ತು ಮೈತ್ರಿಕೂಟ ಎಲ್ಲರಿಗಿಂತ ಮುಂದಿರುತ್ತದೆ ಎಂದು ಎಸ್‌ಪಿ ಮುಖ್ಯಸ್ಥರು ಹೇಳಿದ್ದಾರೆ. ಇದಕ್ಕೂ ಮುನ್ನ ಶಿವಪಾಲ್ ಯಾದವ್, ರಾಮ್ ಗೋಪಾಲ್ ಯಾದವ್ ಕೂಡ ಮತದಾನ ಮಾಡಿದರು. ಸಮಾಜವಾದಿ ಪಕ್ಷದ (ಎಸ್‌ಪಿ) ಸಂಸ್ಥಾಪಕ ಮುಲಾಯಂ ಸಿಂಗ್ ಯಾದವ್ ಅವರು ಸೈಫೈ ಜಸ್ವಂತ್‌ನಗರದ ಮತಗಟ್ಟೆಗೆ ವೀಲ್ ಚೇರ್ ಮೇಲೆ ಆಗಮಿಸಿ ಮತ ಚಲಾಯಿಸಿದರು.

BJP going to be eliminated. Farmers of UP won't forgive them. We've hit century in first 2 phases & even in this phase SP & alliance would be ahead of everyone else: SP chief & party's candidate from Karhal, Akhilesh Yadav after voting in Jaswantnagar#UttarPradeshElections2022 pic.twitter.com/xDS7FVmwB0
— ANI UP/Uttarakhand (@ANINewsUP) February 20, 2022
ಮುಲಾಯಂ ಸಿಂಗ್ ಯಾದವ್, ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್, ಶಿವಪಾಲ್ ಯಾದವ್, ಡಿಂಪಲ್ ಯಾದವ್, ಪ್ರತೀಕ್ ಯಾದವ್, ಅಂಕುರ್ ಯಾದವ್, ಅಭಿಷೇಕ್ ಯಾದವ್, ಅಪರ್ಣಾ ಯಾದವ್, ತೇಜ್ ಪ್ರತಾಪ್ ಯಾದವ್, ಸರಳಾ ಯಾದವ್, ಪ್ರೇಮಲತಾ ಯಾದವ್, ಅಭಯರಾಮ್ ಯಾದವ್, ಧರ್ಮೇಂದ್ರ ಯಾದವ್, ಧರ್ಮೇಂದ್ರ ಯಾದವ್, ಗೋಪಾಲ್ ಯಾದವ್ ಸೇರಿದಂತೆ ಇತರರು ಮತಗಟ್ಟೆಯಲ್ಲಿ ತಮ್ಮ ಮತವನ್ನು ಚಲಾಯಿಸಿದ್ದಾರೆ.













Click it and Unblock the Notifications