ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಡಿಯೋ: ಯುಪಿ ಪೊಲೀಸ್ ಪೇದೆಯನ್ನು ಠಾಣೆಯಲ್ಲಿ ಥಳಿಸಿದ ಆರೋಪಿ

|
Google Oneindia Kannada News

ಮೈನ್‌ಪುರಿ ಜುಲೈ 5: ಉತ್ತರ ಪ್ರದೇಶದ ಮೈನ್‌ಪುರಿಯಲ್ಲಿ ಪೊಲೀಸ್ ಠಾಣೆಯ ಆವರಣದಲ್ಲಿ ವ್ಯಕ್ತಿಯೊಬ್ಬ ಪೊಲೀಸರಿಗೆ ಥಳಿಸಿದ ಘಟನೆ ನಡೆದಿದೆ. ಸುದ್ದಿ ಸಂಸ್ಥೆ ಎಎನ್‌ಐ ಪ್ರಕಾರ, ಕೌಟುಂಬಿಕ ಹಿಂಸಾಚಾರದ ದೂರಿನ ಮೇಲೆ ಆ ವ್ಯಕ್ತಿಯನ್ನು ಪೊಲೀಸರು ಕರೆಸಿದ್ದರು. ಅವನು ತಾಳ್ಮೆ ಕಳೆದುಕೊಂಡು ಪೊಲೀಸರಿಗೆ ಥಳಿಸಲು ಪ್ರಾರಂಭಿಸಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

ಎಎನ್‌ಐ ಟ್ವೀಟ್ ಮಾಡಿದ ವಿಡಿಯೊದಲ್ಲಿ, ಆ ವ್ಯಕ್ತಿ ತನ್ನ ಮುಂದೆ ನಿಂತಿರುವ ಪೋಲೀಸ್‌ನೊಂದಿಗೆ ವಾಗ್ವಾದ ನಡೆಸುತ್ತಿರುವುದನ್ನು ನೋಡಬಹುದು. ಅವನು ಕೋಪದ ಭರದಲ್ಲಿ ಪೋಲೀಸ್‌ಗೆ ಹೊಡೆಯಲು ಪ್ರಾರಂಭಿಸುತ್ತಾನೆ. ಘಟನಾ ಸ್ಥಳದ ಬಳಿ ನಿಂತಿದ್ದ ಮಹಿಳಾ ಪೇದೆಯೊಬ್ಬರು ವ್ಯಕ್ತಿ ಮೇಲೆ ದಾಳಿಗೆ ಮುಂದಾಗುತ್ತಾರೆ. ಆದರೆ ಅವರು ಮಹಿಳಾ ಪೇದೆ ದಾಳಿಗೆ ಬಳಕೆ ಮಾಡಿದ ಕುರ್ಚಿ ಅನ್ನೇ ತೆಗೆದುಕೊಂಡು ಪೊಲೀಸ್ ಮೇಲೆ ದಾಳಿ ಮಾಡುತ್ತಾರೆ.

ಪೊಲೀಸ್‌ಗೆ ಥಳಿಸಿದ ವ್ಯಕ್ತಿ

ಪೊಲೀಸ್‌ಗೆ ಥಳಿಸಿದ ವ್ಯಕ್ತಿ

ಅವರ ಹಿಂಸಾತ್ಮಕ ನಡವಳಿಕೆಯ ಹಿಂದಿನ ಕಾರಣ ಅವರ ಮಾನಸಿಕ ಆರೋಗ್ಯದ ಕಾರಣ ಎಂದು ಕುಟುಂಬವು ಉಲ್ಲೇಖಿಸಿದೆ ಎಂದು ಅಧಿಕಾರಿಯೊಬ್ಬರು ಸುದ್ದಿಗಾರರಿಗೆ ತಿಳಿಸಿದ್ದಾರೆ. "ಅವರನ್ನು ಕೌಟುಂಬಿಕ ಹಿಂಸಾಚಾರದ ದೂರಿನ ಮೇಲೆ ಕರೆಸಲಾಯಿತು ಮತ್ತು ಒಳಗೆ ಪೊಲೀಸ್ ಅಧಿಕಾರಿಯನ್ನು ಥಳಿಸಿದರು. ಅವರು ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದಾರೆ ಎಂದು ಅವರ ಕುಟುಂಬದವರು ಹೇಳಿದ್ದಾರೆ. ಆತ ಮಾನಸಿಕ ಅಸ್ವಸ್ಥ ಎಂದು ಪೂರಕ ದಾಖಲೆಗಳನ್ನು ನೀಡಿದರೆ ನಾವು ಅದನ್ನು ಗಣನೆಗೆ ತೆಗೆದುಕೊಳ್ಳುತ್ತೇವೆ ಎಂದು ಎಎಸ್ಪಿ ಮೈನ್‌ಪುರಿ ಮಧುವನ್ ಕುಮಾರ್ ಹೇಳಿದ್ದಾರೆ. ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಮಾನಸಿಕ ಅಸ್ವಸ್ಥತೆ ಬಗ್ಗೆ ದಾಖಲೆ

ಮಾನಸಿಕ ಅಸ್ವಸ್ಥತೆ ಬಗ್ಗೆ ದಾಖಲೆ

ಪ್ರಕರಣವೊಂದರಲ್ಲಿ ಯುವಕನನ್ನು ವಿಚಾರಣೆಗೆ ಕರೆಸಿದಾಗ ಈ ಘಟನೆ ನಡೆದಿದೆ ಎಂದು ಎಎಸ್‌ಪಿ ತಿಳಿಸಿದ್ದಾರೆ. ಠಾಣೆ ತಲುಪಿದ ಪೊಲೀಸ್ ಅಧಿಕಾರಿಗಳು ಅವರಿಗೆ ವಿವರಿಸುತ್ತಿದ್ದರು. ಅಷ್ಟರಲ್ಲಿ ಯುವಕ ಗಲಾಟೆ ಆರಂಭಿಸಿದ. ಆತ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದಾನೆ ಎಂದು ಕುಟುಂಬದವರು ತಿಳಿಸಿದ್ದಾರೆ. ಈ ಸಂಬಂಧ ದಾಖಲೆಗಳು ಬಂದರೆ ಪರಿಶೀಲಿಸುತ್ತೇವೆ ಎಂದು ಅವರು ಹೇಳಿದ್ದಾರೆ.

ಸೂಕ್ತ ಕ್ರಮಕ್ಕೆ ಒತ್ತಾಯ

ಸೂಕ್ತ ಕ್ರಮಕ್ಕೆ ಒತ್ತಾಯ

ಪೊಲೀಸ್ ಠಾಣೆಯಲ್ಲಿ ಪೊಲೀಸ್ ಅಧಿಕಾರಿಯೊಂದಿಗೆ ಜಗಳವಾಡಿದ ವಿಡಿಯೋವನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಲಾಗಿದೆ. ಈ ಬಗ್ಗೆ ಜನರ ಪ್ರತಿಕ್ರಿಯೆಗಳು ಬರುತ್ತಿವೆ. ಈತ ಮಾನಸಿಕ ಅಸ್ವಸ್ಥ ಎನ್ನುವ ದಾಖಲೆಗಳು ಮುಖ್ಯ. ಇಲ್ಲವಾದಲ್ಲಿ ಈತನ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಟ್ವಿಟರ್ ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ. ಠಾಣೆಗೆ ಬಂದಾಗ ಪೊಲೀಸ್ ಅಧಿಕಾರಿಗಳು ಸಮಜಾಯಿಷಿ ನೀಡುತ್ತಿದ್ದ ವೇಳೆ ಥಳಿಸಿದ್ದರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ.

ಯುವಕನ ಬಂಧನ

ಯುವಕನ ಬಂಧನ

ಯುವಕನ ಕಿತ್ತಾಟದ ವಿಡಿಯೋ ಕೆಲವೇ ಹೊತ್ತಿನಲ್ಲಿ ಆತನ ಜೈಲಿನ ಚಿತ್ರವೂ ಹೊರಬಿದ್ದಿದೆ. ಆದರೆ, ಈ ಚಿತ್ರದಲ್ಲಿ ಯುವಕನ ಶರ್ಟ್ ಮತ್ತೊಂದು ಬಣ್ಣದಲ್ಲಿ ಕಾಣಿಸಿಕೊಂಡಿದೆ. ಜಗಳದ ವೇಳೆ ಕೆಂಪು ಅಂಗಿ ಧರಿಸಿದ್ದ ಅವರು, ಇತ್ತೀಚಿನ ಚಿತ್ರದಲ್ಲಿ ಬಿಳಿ ಅಂಗಿ ಧರಿಸಿದ್ದಾರೆ. ಈ ಫೋಟೊ ಸತ್ಯಾಸತ್ಯತೆ ಬಯಲಾಗಬೇಕಿದೆ.

Recommended Video

ಆಧಾರ್ ಕಾರ್ಡ್ ನಿಂದ 2 ವರ್ಷಗಳಾದ್ಮೇಲೆ ಹೆತ್ತವರನ್ನು ಸೇರಿದ ಯುವತಿಯ ಕಥೆ ಹೇಳಿದ PM ಮೋದಿ | OneIndia Kannada

English summary
An incident took place in Mainpuri, Uttar Pradesh where a man beat up the police in the police station premises. According to news agency ANI, the man was called by the police on a complaint of domestic violence.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X