ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಭಯದ ನಡುವೆ ಮೀರತ್ ನಲ್ಲಿ 81 ಮಂದಿಗೆ ಹಂದಿ ಜ್ವರ!

|
Google Oneindia Kannada News

ಮಾರಣಾಂತಿಕ ಕೊರೊನಾ ವೈರಸ್ ನಿಂದ ಇಡೀ ವಿಶ್ವಕ್ಕೆ ವಿಶ್ವವೇ ಬೆಚ್ಚಿಬಿದ್ದಿದೆ. ಚೀನಾದಿಂದ ವಿಶ್ವದ ಹಲವು ದೇಶಗಳಿಗೆ ಕೊರೊನಾ ಸೋಂಕು ಹರಡಿದೆ. ಭಾರತಕ್ಕೂ ಡೆಡ್ಲಿ ಕೊರೊನಾ ಕಾಲಿಟ್ಟಿದೆ. ಇಟಲಿಯಿಂದ ಭಾರತಕ್ಕೆ ಬಂದ ಪ್ರವಾಸಿಗರಿಗೆ ಮತ್ತು ಭಾರತೀಯ ಟೂರ್ ಆಪರೇಟರ್ ಗಳಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.

ಕೊರೊನಾ ಭಯದ ನಡುವೆಯೇ ಉತ್ತರ ಪ್ರದೇಶದ ಮೀರತ್ ನಲ್ಲಿ ಹಂದಿ ಜ್ವರ ವ್ಯಾಪಿಸಿದೆ. ಸ್ವೈನ್ ಫ್ಲೂ (ಹಂದಿ ಜ್ವರ) ದಿಂದಾಗಿ ಮೀರತ್ ನಲ್ಲಿ ಎಂಟು ಮಂದಿ ಮೃತಪಟ್ಟಿದ್ದಾರೆ. 20 ಪಿ.ಎ.ಸಿ ಜವಾನ್ ಗಳು ಸೇರಿದಂತೆ ಒಟ್ಟು 81 ಮಂದಿಗೆ ಹಂದಿ ಜ್ವರ ಇರುವುದು ಖಚಿತವಾಗಿದೆ.

ಭಾರತಕ್ಕೆ ಬಂದ 15 ಇಟಲಿ ಪ್ರವಾಸಿಗರಿಗೆ ಕೊರೊನಾ: ಖಚಿತ ಪಡಿಸಿದ ಏಮ್ಸ್!ಭಾರತಕ್ಕೆ ಬಂದ 15 ಇಟಲಿ ಪ್ರವಾಸಿಗರಿಗೆ ಕೊರೊನಾ: ಖಚಿತ ಪಡಿಸಿದ ಏಮ್ಸ್!

81 ಮಂದಿಗೆ ಹಂದಿ ಜ್ವರ

81 ಮಂದಿಗೆ ಹಂದಿ ಜ್ವರ

''ಪರೀಕ್ಷೆಗೆ ಒಳಪಡಿಸಿದಾಗ 20 ಜವಾನ್ ಗಳು ಒಳಗೊಂಡಂತೆ 81 ಮಂದಿಯ ರಕ್ತ ಮಾದರಿಯಲ್ಲಿ ಸ್ವೈನ್ ಫ್ಲೂ ಪಾಸಿಟಿವ್ ತೋರಿಸಿದೆ. ಇಲ್ಲಿಯವರೆಗೂ ಹಂದಿ ಜ್ವರದಿಂದಾಗಿ 387 ಮಂದಿಯನ್ನು ಪರೀಕ್ಷಿಸಲಾಗಿದೆ. ಅದರಲ್ಲಿ ಚಿಕಿತ್ಸೆಯಿಂದ ಚೇತರಿಸಿಕೊಂಡ 11 ಪಿ.ಎ.ಸಿ ಜವಾನ್ ಗಳನ್ನು ಈಗಾಗಲೇ ಡಿಸ್ಚಾರ್ಜ್ ಮಾಡಲಾಗಿದೆ'' ಎಂದು ಮೀರತ್ ನ ಚೀಫ್ ಮೆಡಿಕಲ್ ಆಫೀಸರ್ ಡಾ.ರಾಜ್ ಕುಮಾರ್ ತಿಳಿಸಿದ್ದಾರೆ.

ಹೆಚ್ಚಾಗುತ್ತಿದೆ ಹಂದಿ ಜ್ವರ

ಹೆಚ್ಚಾಗುತ್ತಿದೆ ಹಂದಿ ಜ್ವರ

ಕಳೆದ ಜನವರಿಯಿಂದ ಉತ್ತರ ಪ್ರದೇಶದ ಮೀರತ್ ನಲ್ಲಿ ಹಂದಿ ಜ್ವರದ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿವೆ. ಸ್ವೈನ್ ಫ್ಲೂ ನಿಂದಾಗಿ ಎಂಟು ಮಂದಿ ಮೃತಪಟ್ಟಿರುವುದರಿಂದ, ಪರಿಶೀಲನೆ ನಡೆಸಲು ಉತ್ತರ ಪ್ರದೇಶದ ಆರೋಗ್ಯ ಸೇವೆಗಳ ನಿರ್ದೇಶನಾಲಯದ ತಂಡ ಮೀರತ್ ಗೆ ಭೇಟಿ ನೀಡಿದೆ.

ಹಂದಿ ಜ್ವರದ ಲಕ್ಷಣಗಳೇನು.?

ಹಂದಿ ಜ್ವರದ ಲಕ್ಷಣಗಳೇನು.?

ಸ್ವೈನ್ ಇನ್ಫ್ಲುಯೆನ್ಝಾ ವೈರಸ್ ನಿಂದ ಹಂದಿ ಜ್ವರ ಕಾಣಿಸಿಕೊಳ್ಳುತ್ತದೆ. ಈ ಮಾರಕ ವೈರಸ್ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಜ್ವರ, ನೆಗಡಿ, ಕೆಮ್ಮು ಮತ್ತು ವಾಂತಿ.. ಹಂದಿ ಜ್ವರದ ಲಕ್ಷಣಗಳು. ಈ ಪೈಕಿ ಯಾವುದೇ ಲಕ್ಷಣ ಕಂಡುಬಂದರೂ, ಕೊಡಲೆ ವೈದ್ಯರಿಂದ ಚಿಕಿತ್ಸೆ ಪಡೆಯುವುದು ಉತ್ತಮ.

ಶುಚಿತ್ವ ಕಾಪಾಡಿ

ಶುಚಿತ್ವ ಕಾಪಾಡಿ

ಹಂದಿ ಜ್ವರದ ವೈರಸ್ ನ ತಡೆಗಟ್ಟಲು ಶುಚಿತ್ವ ಕಾಪಾಡಿಕೊಳ್ಳಬೇಕು. ಕೈಕಾಲುಗಳನ್ನು ಆಗಾಗ ತೊಳೆದುಕೊಳ್ಳುತ್ತಿರಬೇಕು. ಮುಖಕ್ಕೆ ಮಾಸ್ಕ್ ಧರಿಸಬೇಕು. ಈಗಾಗಲೇ ರೋಗದ ಲಕ್ಷಣ ಕಂಡುಬಂದಿರುವವರಿಂದ ದೂರವಿರಬೇಕು.

English summary
81 People test Positive for Swine Flu in Uttar Pradesh's Meerut.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X