ಯಮುನಾ ಎಕ್ಸ್ ಪ್ರೆಸ್ ವೇ ರಸ್ತೆ ಅಪಘಾತದಲ್ಲಿ ಎಂಟು ಮಂದಿ ಸಾವು
ಮಥುರಾ (ಉತ್ತರಪ್ರದೇಶ), ಜೂನ್ 16: ಯಮುನಾ ಎಕ್ಸ್ ಪ್ರೆಸ್ ವೇನಲ್ಲಿ ಭಾನುವಾರ ಸಂಭವಿಸಿದ ರಸ್ತೆ ಅಪಘಾತದಲ್ಲಿ ಎಂಟು ಮಂದಿ ಸಾವನ್ನಪ್ಪಿದ್ದಾರೆ. ಆಗ್ರಾಗೆ ತೆರಳುವ ವೇಳೆ ಚಲಿಸುತ್ತಿದ್ದ ಟ್ರಕ್ ಗೆ ಕಾರು ಡಿಕ್ಕಿ ಹೊಡೆದು, ಈ ಘಟನೆ ಸಂಭವಿಸಿದೆ. ಐವರು ಘಟನಾ ಸ್ಥಳದಲ್ಲೇ ಮೃತಪಟ್ಟರೆ, ಬಾಕಿ ಮೂವರು ಗಾಯಗಳಿಂದ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
ಮೃತರಲ್ಲಿ ಐವರು ಮಹಿಳೆಯರು, ಇಬ್ಬರು ಪುರುಷರು ಹಾಗೂ ಒಂದು ಹೆಣ್ಣುಮಗು ಇತ್ತು. ಭಾನುವಾರ ಬೆಳಗ್ಗೆ ಇವರೆಲ್ಲ ಆಗ್ರಾದ ತಾಜ್ ಮಹಲ್ ಗೆ ತೆರಳುತ್ತಿದ್ದರು. ಅನಿತಾ, ನೀರಜ್, ಅಂಜಲಿ, ಶಾಲು, ತರುಣ, ವಿಷ್ಣು, ಗಬ್ಬರ್ ಹಾಗೂ ಸಂತೋಷಿ ಮೃತಪಟ್ಟವರು ಎಂದು ಗುರುತಿಸಲಾಗಿದೆ.

ಅಪಘಾತದ ಬಗ್ಗೆ ಬೆಳಗ್ಗೆ ಎಂಟೂ ಮೂವತ್ತರ ಹೊತ್ತಿಗೆ ಮಾಹಿತಿ ಬಂತು. ಬಲ್ ದೇವ್ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಹೋಗುವುದರೊಳಗೆ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದರು. ಚಲಿಸುತ್ತಿದ್ದ ಟ್ರಕ್ ಗೆ ಗುದ್ದಿದ್ದ ಕಾರಿನ ಮುಂಭಾಗ ನಜ್ಜುಗುಜ್ಜಾಗಿತ್ತು ಎಂದು ಗ್ರಾಮಾಂತರ ಎಸ್ಪಿ ಆದಿತ್ಯ ಶುಕ್ಲಾ ತಿಳಿಸಿದ್ದಾರೆ.
ಹಾನಿಗೊಳಗಾದ ಕಾರಿನಲ್ಲೇ ಸಂತ್ರಸ್ತರನ್ನು ಸ್ಥಳದಲ್ಲಿ ಬಿಟ್ಟು, ಟ್ರಕ್ ಚಾಲಕ ಸ್ಥಳದಿಂದ ಓಡಿ ಹೋಗಿದ್ದಾನೆ.












Click it and Unblock the Notifications