6ರ ಬಾಲೆ ಮೇಲೆ ಅತ್ಯಾಚಾರ, ಆರೋಪಿಗಳ ಸ್ಕೆಚ್ ರೆಡಿ, ನೀವೂ ಒಮ್ಮೆ ನೋಡಿ

ಹಾಪುರ, ಆಗಸ್ಟ್ 10: ಆರು ವರ್ಷದ ಬಾಲಕಿಯನ್ನು ಅಪಹರಿಸಿ, ಅತ್ಯಾಚಾರವೆಸಗಿರುವ ಘಟನೆ ಉತ್ತರ ಪ್ರದೇಶದ ಹಾಪುರದಲ್ಲಿ ಗುರುವಾರ ನಡೆದಿದ್ದು, ಆರೋಪಿಗಳು ಇದುವರೆಗೂ ಪತ್ತೆಯಾಗಿಲ್ಲ.

ಪೊಲೀಸರು ಬಾಲಕಿ ಹಾಗೂ ಪೋಷಕರು, ಊರಿನವರ ಹೇಳಿಕೆ ಆಧಾರದ ಮೇಲೆ ಆರೋಪಿಗಳ ಸ್ಕೆಚ್ ತಯಾರಿಸಿದ್ದಾರೆ.

ಗಡ್ ಮುಕ್ತೇಶ್ವರ ಪ್ರದೇಶದಲ್ಲಿ ಮನೆಯ ಎದುರು ಬಾಲಕಿಯನ್ನು ಅಪಹರಿಸಲಾಗಿತ್ತು. ಆರೋಪಿಗಳು ಬಾಲಕಿಯೊಂದಿಗೆ ಬೈಕಿನಲ್ಲಿ ಸುಮಾರು 100 ಕಿ.ಮೀ ಕ್ರಮಿಸಿದ್ದರು.

6-yr-old Hapur Rape Victim Critical Police Release Sketches Of Accused

ಪೋಷಕರು ಬಾಲಕಿ ಕಾಣೆಯಾಗಿರುವುದಾಗಿ ಪೊಲೀಸರಿಗೆ ದೂರು ನೀಡಿದ್ದರು. ಬಾಲಕಿಯನ್ನು ಹುಡುಕಲು ಸಾಕಷ್ಟು ಪ್ರಯತ್ನ ಪಟ್ಟಿದ್ದಾರೆ. ಬಳಿಕ ಮರುದಿನ ಬೆಳಗ್ಗೆ ಪ್ರಜ್ಞೆತಪ್ಪಿದ ಸ್ಥಿತಿಯಲ್ಲಿ ಬಾಲಕಿ ಪತ್ತೆಯಾಗಿದ್ದಳು. ಗಿಡಗಂಟಿಗಳ ಮಧ್ಯದಲ್ಲಿ ಆಕೆಯನ್ನು ಎಸೆದಿದ್ದರು.

ಆದರೆ ಆ ಪ್ರದೇಶ ಮನೆಯಿಂದ ಸಾಕಷ್ಟು ದೂರದಲ್ಲಿದೆ.ವೈದ್ಯಕೀಯ ಪರೀಕ್ಷೆ ಬಳಿಕ ಅತ್ಯಾಚಾರ ನಡೆದಿರುವುದು ಖಚಿತವಾಗಿದೆ. ಮೀರತ್‌ನಲ್ಲಿರುವ ಆಸ್ಪತ್ರೆಗೆ ಬಾಲಕಿಯನ್ನು ದಾಖಲಿಸಲಾಗಿತ್ತು.

ಬಾಲಕಿಗೆ ದೀರ್ಘಕಾಲದ ಚಿಕಿತ್ಸೆ ಅಗತ್ಯವಿದೆ ಎಂದು ಆಸ್ಪತ್ರೆ ತಿಳಿಸಿದೆ. ಆಕೆಗೆ ಶಸ್ತ್ರಚಿಕಿತ್ಸೆಯ ಅಗತ್ಯವೂ ಕೂಡ ಇದೆ. ಬಾಲಕಿಯ ಹೇಳಿಕೆಯನ್ನು ದಾಖಲಿಸಿಕೊಳ್ಳಲು ಪೊಲೀಸರಿಗೆ ಸಾಧ್ಯವಾಗಿಲ್ಲ. ಆದಷ್ಟು ಬೇಗ ಆರೋಪಿಗಳನ್ನು ಪತ್ತೆ ಹೆಚ್ಚುವುದಾಗಿ ಪೊಲೀಸರು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+