ಉ.ಪ್ರದೇಶದಲ್ಲಿ ಬರ್ಬರ ಘಟನೆ, 3 ತಿಂಗಳ ಶಿಶುವಿನ ತಲೆಯನ್ನೇ ಕಚ್ಚಿ ತಿಂದ ಬೀದಿ ನಾಯಿ
ಲಕ್ನೋ, ಜೂನ್ 25: ಉತ್ತರ ಪ್ರದೇಶದ ಸಹರಾನ್ಪುರದಲ್ಲಿ ಮೂರು ತಿಂಗಳ ಶಿಶುವನ್ನು ಬೀದಿನಾಯಿಯೊಂದು ಕಚ್ಚಿಕೊಂದ ಘಟನೆ ನಡೆದಿದೆ.
ಸಹರಾನ್ಪುರದ ದಯಾಳ್ಪುರ ಎಂಬಲ್ಲಿ ಮಗು ಬೀದಿ ಬದಿಯಲ್ಲಿ ಮಲಗಿತ್ತು (ಗಾರೆ ಕೆಲಸ ಮಾಡುವವರ ಶಿಶುವಾಗಿದ್ದಿರಬಹುದು ಎಂದು ಅಂದಾಜಿಸಲಾಗಿದೆ) ಈ ಸಂದರ್ಭದಲ್ಲಿ ಬೀದಿ ನಾಯಿಯೊಂದು ಮಗುವನ್ನು ಕಚ್ಚಿಕೊಂಡು ಹೋಗಿಗೆ. ಆದರೆ ಈ ಘಟನೆ ಯಾರ ಗಮನಕ್ಕೂ ಬಂದಿಲ್ಲ. ನಂತರ ಮಗುವಿನ ತಲೆಯಿಲ್ಲದ ಮೃತದೇಹ ಪತ್ತೆಯಾಗಿದೆ.
ಉತ್ತರ ಪ್ರದೇಶದ ಸೀತಾಪುರ ಜಿಲ್ಲೆಯಲ್ಲಿ ಇಂಥ ಘಟನೆ ಹೆಚ್ಚಾಗಿದ್ದು, ಕಳೆದ ಏಪ್ರಿಲ್ ನಲ್ಲಿ ಬೀದಿ ನಾಯಿ ಕಡಿತದಿಂದಲೇ 12 ಕ್ಕೂ ಹೆಚ್ಚು ಮಕ್ಕಳು ಮೃತರಾಗಿದ್ದರು. ಇತ್ತೀಚೆಗೆ ಮಕ್ಕಳನ್ನು ಶಾಲೆಗೆ ಕಳಿಸುವುದಕ್ಕೂ ಜನರು ಭಯಪಡುವ ಪರಿಸ್ಥಿತಿ ಆರಂಭವಾಗಿದೆ.

ಬೀದಿ ನಾಯಿ ನಿಯಂತ್ರಣಕ್ಕಾಗಿ ಹಳ್ಳಿ ಜನರು ನಿರಂತರವಾಗಿ ಆಗ್ರಹಿಸುತ್ತಲೇ ಇದ್ದರೂ ಈ ಕುರಿತು ಸೂಕ್ತ ಕ್ರಮವನ್ನು ಇದುವರೆಗೆ ಕೈಗೊಳ್ಳಲಾಗಿಲ್ಲ.












Click it and Unblock the Notifications