• search
  • Live TV
ಲಕ್ನೋ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಹರ್ಯಾಣದಲ್ಲಿ ವಲಸೆ ಕಾರ್ಮಿಕರಿಗೆ ಕಾರು ಡಿಕ್ಕಿ: ಇಬ್ಬರು ಸ್ಥಳದಲ್ಲೇ ಸಾವು

|

ಅಂಬಾಲಾ, ಮೇ 12: ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಇಬ್ಬರು ವಲಸೆ ಕಾರ್ಮಿಕರ ಮೇಲೆ ಕಾರು ಹರಿದು ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಹರ್ಯಾಣಾದಲ್ಲಿ ನಡೆದಿದೆ.

ಜಾಗತಿಕ ವ್ಯಾಕ್ಸಿನ್ ವಾರ್: ಭಾರತವೇ ಯುದ್ಧ ಕೇಂದ್ರ..!

ಊರುಗಳಿಗೆ ತೆರಳಲು ಯಾವುದೇ ವ್ಯವಸ್ಥೆ ಇಲ್ಲದೆ, ನಡೆದುಕೊಂಡೇ ಹೋಗುತ್ತಿದ್ದ ಇಬ್ಬರಿಗೆ ಕಾರು ಡಿಕ್ಕಿ ಹೊಡೆದಿದೆ.

ಬಿಹಾರದಿಂದ ವಲಸಿಗರು ಉತ್ತರ ಪ್ರದೇಶಕ್ಕೆ ಬರುತ್ತಿದ್ದರು. ವೇಗವಾಗಿ ಬಂದ ಕಾರೊಂದು ಇವರಿಗೆ ಗುದ್ದಿತ್ತು. ಅವರ ತಲೆ ಗಂಭೀರವಾಗಿ ಪೆಟ್ಟುಬಿದ್ದ ಕಾರಣ ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿತ್ತು ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೊನರಯುಸಿರೆಳೆದಿದ್ದಾರೆ.

ರಾಯ್ ಬರೇಲಿಯಲ್ಲಿ 25 ವರ್ಷದ ವ್ಯಕ್ತಿ ಉತ್ತರ ಪ್ರದೇಶದಿಂದ ಬಿಹಾರಕ್ಕೆ ತೆರಳುತ್ತಿದ್ದಾಗ ಅಪಘಾತವಾಗಿತ್ತು. ಗಾಡಿಯ ಬ್ರೇಕ್ ಫೇಲ್ ಆಗಿದ್ದ ಕಾರಣ ಈ ಅಪಘಾತ ಸಂಭವಿಸಿತ್ತು. ಚಾಲಕನಿಗೂ ಗಾಯಗಳಾಗಿದ್ದವು.

ರಸ್ತೆಯಲ್ಲಿ ಸಾಗುತ್ತಿದ್ದ ಕಾರ್ಮಿಕರಿಗೆ ಬಸ್ ಡಿಕ್ಕಿ, 6 ಮಂದಿ ಸಾವು

ವಲಸೆ ಕಾರ್ಮಿಕರಿಗೆ ವಿಶೇಷ ರೈಲು ವ್ಯವಸ್ಥೆ ಮಾಡಲಾಗಿದ್ದರೂ ಕೂಡ, ಟಿಕೆಟ್ ದರ ಹೆಚ್ಚಿರುವ ಕಾರಣ ಹಿಂಜರಿಯುತ್ತಿದ್ದಾರೆ. ಹಾಗೆಯೇ ಕೆಲವು ದಿನಗಳ ಹಿಂದೆ ರೈಲ್ವೆ ಹಳಿಯಲ್ಲಿ ಮಲಗಿದ್ದ 16 ವಲಸೆ ಕಾರ್ಮಿಕರ ಮೇಲೆ ರೈಲು ಹರಿದಿತ್ತು.

English summary
Two migrants on the move, travelling thousands of kilometres to their villages amid the coronavirus lockdown have been killed since last night in car crashes in Haryana and Uttar Pradesh. A migrant worker from Bihar was killed and another injured after being hit by a speeding car in Haryana.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X