ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾನ್ಪುರ ಉದ್ಯಮಿ ಮನೆ ಮೇಲೆ ದಾಳಿ: ಈವರೆಗೆ 187 ಕೋಟಿ ವಶ

|
Google Oneindia Kannada News

ಕಾನ್ಪುರ/ಕನೌಜ್, ಡಿಸೆಂಬರ್ 26: ಉತ್ತರಪ್ರದೇಶದ ಕಾನ್ಪುರದಲ್ಲಿನ ಉದ್ಯಮಿ ಪಿಯೂಷ್ ಜೈನ್ ಅವರ ಮನೆಗಳ ಮೇಲೆ ಐಟಿ ದಾಳಿ ಮುಂದುವರೆದಿದ್ದು ಬಗೆದಷ್ಟು ದಾಖಲೆ ಇಲ್ಲದ ಸಂಪತ್ತು ಹೊರಬರುತ್ತಲೇ ಇದೆ. ಆದಾಯ ತೆರಿಗೆ ಇಲಾಖೆ ಮತ್ತು ಜಿಎಸ್‌ಟಿ ಗುಪ್ತಚರ ನಿರ್ದೇಶನಾಲಯ (ಡಿಜಿಜಿಐ) ಕಳೆದ ನಾಲ್ಕು ದಿನಗಳಲ್ಲಿ ಪಿಯೂಷ್ ಜೈನ್ ಅವರ ಬಳಿ 187 ಕೋಟಿ ರೂಪಾಯಿಗಳ ಅಪಾರ ಸಂಪತ್ತನ್ನು ಪತ್ತೆ ಮಾಡಿದೆ. ಇನ್ನೂ ಕೂಡ ತನಿಖಾ ತಂಡಗಳು ಶೋಧ ಕಾರ್ಯದಲ್ಲಿ ತೊಡಗಿವೆ. ಪಿಯೂಷ್ ಜೈನ್ ಅವರ ರಹಸ್ಯ ಸಂಪತ್ತನ್ನು ತಲುಪಲು ತನಿಖಾ ತಂಡವು ಬೀಗ, ಸುತ್ತಿಗೆ, ಗ್ಯಾಸ್ ಕಟ್ಟರ್ ಮತ್ತು ವೆಲ್ಡಿಂಗ್ ಯಂತ್ರದ ಸಹಾಯವನ್ನು ತೆಗೆದುಕೊಳ್ಳಬೇಕಾಗಿದೆ. ತನಿಖಾ ತಂಡವು ಪ್ರತಿದಿನ ಮನೆಯನ್ನು ಶೋಧಿಸುತ್ತಲೇ ಇದ್ದು ಮನೆಯ ಹಲವು ಗೋಡೆಗಳು/ಕೋಣೆಗಳ ಮೇಲ್ಛಾವಣಿಗಳು ಹೊಡೆದು ಹಣ ವಶಕ್ಕೆ ಪಡೆಯಲಾಗಿದೆ. ಹೀಗೆ ಹಲವೆಡೆ ನೆಲ ಒಡೆಯುವ ಬಗ್ಗೆಯೂ ಮಾಹಿತಿ ಬಂದಿದೆ. ಡಿಸೆಂಬರ್ 23 ರಿಂದ ಕಾನ್ಪುರ ಮತ್ತು ಕನೌಜ್‌ನಲ್ಲಿರುವ ಪಿಯೂಷ್ ಅವರ ಮನೆಗಳ ಮೇಲೆ ದಾಳಿ ನಡೆಯುತ್ತಿದೆ.

ಜೈನ್ ಮನೆಯಲ್ಲಿ ದಾಖಲೆ ಇಲ್ಲದ ಅಪಾರ ಸಂಪತ್ತು

ಜೈನ್ ಮನೆಯಲ್ಲಿ ದಾಖಲೆ ಇಲ್ಲದ ಅಪಾರ ಸಂಪತ್ತು

ಡೈರೆಕ್ಟರೇಟ್ ಜನರಲ್ ಆಫ್ ಜಿಎಸ್‌ಟಿ ಇಂಟೆಲಿಜೆನ್ಸ್ (ಡಿಜಿಜಿಐ) ಮತ್ತು ಐಟಿ ಜಂಟಿ ತಂಡವು ಕಾನ್ಪುರದ ಜೂಹಿಯಲ್ಲಿರುವ ಪಿಯೂಷ್ ಜೈನ್ ಅವರ ಆನಂದಪುರಿ ಮನೆಯ ಮೇಲೆ ಡಿಸೆಂಬರ್ 23 ರಂದು ಬೆಳಗ್ಗೆ ದಾಳಿಯನ್ನು ಪ್ರಾರಂಭಿಸಿತು. ಡಿಸೆಂಬರ್ 24ರ ಸಂಜೆ ವೇಳೆಗೆ ತಂಡ 177 ಕೋಟಿ ರೂ. ನಗದನ್ನು ಎಣಿಕೆ ಮಾಡಲು 14 ಯಂತ್ರಗಳು ಮತ್ತು ಎಸ್‌ಬಿಐ ಅಧಿಕಾರಿಗಳ ಸಹಕಾರವನ್ನು ತೆಗೆದುಕೊಂಡಿದೆ. ಇದೇ ವೇಳೆಗೆ ಡಿ.24ರ ಸಂಜೆ ಪಿಯೂಷ್ ಪುತ್ರ ಪ್ರತ್ಯೂಷ್ ಜತೆ ಕನೌಜ್‌ನಲ್ಲಿರುವ ಮನೆಗೆ ತಂಡವೊಂದು ಆಗಮಿಸಿತ್ತು. ಇಲ್ಲಿ ತನಿಖಾ ತಂಡವು ಒಂದು ರಹಸ್ಯವನ್ನು ಪತ್ತೆ ಮಾಡಿದ್ದು, ಅದರಲ್ಲಿ ಸುಮಾರು ಎಂಟು ಗೋಣಿಚೀಲಗಳು ಹಣ ಮತ್ತು ಚಿನ್ನದ ಬಿಸ್ಕತ್ತುಗಳು ರಟ್ಟಿನಲ್ಲಿ ಪತ್ತೆಯಾಗಿವೆ. ಗೋಣಿಚೀಲದಲ್ಲಿ ಸಿಕ್ಕ ನಗದನ್ನು ಎಣಿಸಲು ಅಧಿಕಾರಿಗಳು ನೋಟು ಎಣಿಕೆ ಯಂತ್ರಗಳನ್ನು ತಂದರು. ಎಎನ್‌ಐ ಸುದ್ದಿಸಂಸ್ಥೆಯ ಸುದ್ದಿ ಪ್ರಕಾರ, ಇಲ್ಲಿ ಸುಮಾರು 10 ಕೋಟಿ ರೂಪಾಯಿ ನಗದು ಪತ್ತೆಯಾಗಿದೆ. ನಂತರ ಪಿಯೂಷ್ ಜೈನ್ ಅವರ ಮನೆಯಿಂದ ಒಟ್ಟು 187.45 ಕೋಟಿ ರೂ. ವಶಕ್ಕೆ ಪಡೆಯಲಾಗಿದೆ.

ಸಂಪೂರ್ಣ ದಾಖಲೆ ವಶ

ಸಂಪೂರ್ಣ ದಾಖಲೆ ವಶ

ಎಎನ್‌ಐ ಸುದ್ದಿಸಂಸ್ಥೆಯ ಸುದ್ದಿ ಪ್ರಕಾರ, ಪಿಯೂಷ್ ಜೈನ್ ಅವರ ಮನೆಯಿಂದ ವಶಪಡಿಸಿಕೊಂಡ 187.45 ಕೋಟಿ ರೂ.ಗಳನ್ನು ಸಿಜಿಎಸ್‌ಟಿ ಕಾಯ್ದೆಯ ಸೆಕ್ಷನ್ 67 ರ ನಿಬಂಧನೆಗಳ ಅಡಿಯಲ್ಲಿ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಕನ್ನೌಜ್‌ನಲ್ಲಿರುವ ಪಿಯೂಷ್ ಅವರ ಕಾರ್ಖಾನೆಯಿಂದ ತನಿಖಾ ತಂಡವು 5 ಕೋಟಿ ರೂಪಾಯಿಗಳನ್ನು ವಶಪಡಿಸಿಕೊಂಡಿದೆ. ಪಿಯೂಷ್ ಅವರ ಕಾರ್ಖಾನೆಯಿಂದ ಲಕ್ಷಾಂತರ ಶ್ರೀಗಂಧದ ಎಣ್ಣೆ ಮತ್ತು ಸುಗಂಧ ದ್ರವ್ಯವನ್ನು ವಶಪಡಿಸಿಕೊಳ್ಳಲಾಗಿದೆ. ಪಿಯೂಷ್ ಜೈನ್ ವಿಚಾರಣೆಯ ಸಂಪೂರ್ಣ ದಾಖಲೆಯನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಭಾನುವಾರ ಬೆಳಗಿನ ಜಾವದವರೆಗೆ ಸಂಸ್ಥೆಯು 187.45 ಕೋಟಿ ರೂಪಾಯಿ ನಗದು ವಶಪಡಿಸಿಕೊಂಡಿದೆ. ಇಲ್ಲಿ ಬಿಲ್ ಇಲ್ಲದ ಕೋಟ್ಯಂತರ ರೂಪಾಯಿ ಮೌಲ್ಯದ ವಸ್ತುಗಳನ್ನು ಡಿಜಿಜಿಐ ವಶಪಡಿಸಿಕೊಂಡಿದ್ದಾರೆ.

ವಕೀಲರನ್ನು ಸಂಪರ್ಕಿಸಿದ ಜೈನ್

ವಕೀಲರನ್ನು ಸಂಪರ್ಕಿಸಿದ ಜೈನ್

ಮೂಲಗಳ ಪ್ರಕಾರ, ಜಿಎಸ್‌ಟಿ ಗುಪ್ತಚರ ನಿರ್ದೇಶನಾಲಯ (ಡಿಜಿಜಿಐ) ಮತ್ತು ಐಟಿ ಜಂಟಿ ತಂಡವು ದಾಳಿಯ ಮೊದಲ ದಿನ ಪಿಯೂಷ್ ಜೈನ್ ಅವರ ಮನೆಗೆ ತಲುಪಿದಾಗ ಅವರು ಪರಾರಿಯಾಗಿದ್ದರು. ತನಿಖಾಧಿಕಾರಿಗಳಿಂದ ಹಲವಾರು ಕರೆಗಳ ಮೇರೆಗೆ ಅವರು ಎರಡು ಗಂಟೆಗಳ ನಂತರ ಹಿಂತಿರುಗಿದರು. ಹುಡುಕಾಟದಲ್ಲಿ ದೊಡ್ಡ ಮೊತ್ತದ ನಗದು ವಶಪಡಿಸಿಕೊಳ್ಳಲಾಗುವುದು ಎಂದು ತಿಳಿದಿದ್ದರಿಂದ ಪಿಯೂಷ್ ಜೈನ್ ತನ್ನ 'ಸಹೋದ್ಯೋಗಿಗಳು' ಮತ್ತು 'ವಕೀಲರನ್ನು' ಸಮಾಲೋಚಿಸಿದ ನಂತರ ಹಿಂತಿರುಗಿದ್ದಾರೆ ಎಂದು ಅಧಿಕಾರಿಗಳು ಶಂಕಿಸಿದ್ದಾರೆ.

ಜೈನ್ ಹೇಳಿಕೆಯಿಂದ ಸಂಶಯ

ಜೈನ್ ಹೇಳಿಕೆಯಿಂದ ಸಂಶಯ

ಎಎನ್‌ಐನ ಸುದ್ದಿ ಪ್ರಕಾರ, ಪಿಯೂಷ್ ಜೈನ್ ತನ್ನ ಅಡಗುತಾಣಗಳಿಂದ ಪಡೆದ ಹಣವನ್ನು ಈ ಹಿಂದೆ ತನ್ನ ಸಹೋದರರು ಮತ್ತು ಸಂಬಂಧಿಕರಿಗೆ ತಿಳಿಸಿದ್ದರು. ಆದರೆ ಪಿಯೂಷ್ ಹೇಳಿಕೆಯಿಂದ ಅಧಿಕಾರಿಗಳು ತೃಪ್ತರಾಗಿರಲಿಲ್ಲ. ಏಕೆಂದರೆ, ಅಧಿಕಾರಿಗಳು ಪಿಯೂಷ್ ಅವರ ಸಹೋದರರು ಮತ್ತು ಸಂಬಂಧಿಕರೊಂದಿಗೆ ಮಾತುಕತೆ ನಡೆಸಿದಾಗ, ಅವರು ತಮ್ಮ ಬಳಿ ಹಣವಿಲ್ಲ ಎಂದು ಸ್ಪಷ್ಟವಾಗಿ ನಿರಾಕರಿಸಿದ್ದರು. ಕಾನ್ಪುರ ಮತ್ತು ಕನೌಜ್‌ನಲ್ಲಿ ಇನ್ನೂ ಶೋಧ ಕಾರ್ಯಗಳು ನಡೆಯುತ್ತಿದ್ದು, ಜೈನ್‌ನ ಆವರಣದಲ್ಲಿ ವಶಪಡಿಸಿಕೊಂಡಿರುವ ನಗದಿನ ನಿಜವಾದ ಮಾಲೀಕರನ್ನು ಕಂಡುಹಿಡಿಯುವವರೆಗೆ ತನಿಖೆ ಮುಂದುವರಿಯುತ್ತದೆ.

ಕಟ್ಟರ್‌ನಿಂದ ಬೀಗ ಒಡೆದು ಹಣ ಸಂಗ್ರಹ

ಕಟ್ಟರ್‌ನಿಂದ ಬೀಗ ಒಡೆದು ಹಣ ಸಂಗ್ರಹ

ಕನ್ನೌಜ್‌ನಲ್ಲಿರುವ ನಿವಾಸದಲ್ಲಿ ತನಿಖಾ ತಂಡಕ್ಕೆ 15 ರಿಂದ 20 ಕಪಾಟಿನ ಕೀಗಳು ಸಿಗದ ಹಿನ್ನೆಲೆಯಲ್ಲಿ ತಂಡವು ಕಟ್ಟರ್‌ನಿಂದ ಬೀಗ ಒಡೆದು ಹಣ ಮತ್ತು ಕಾಗದಗಳನ್ನು ವಶಪಡಿಸಿಕೊಂಡಿದೆ. ತಂಡವು ಪಿಯೂಷ್ ಮನೆಯೊಳಗೆ ಹಲವಾರು ಬ್ಯಾಗ್‌ಗಳಲ್ಲಿ ಕೀಗಳನ್ನು ಕಂಡುಕೊಂಡಿದೆ. ಸುಮಾರು 300 ಕೀಗಳಿವೆ ಎಂದು ಬೀಗ ಒಡೆದ ಕುಶಲಕರ್ಮಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಅವುಗಳನ್ನು ಹಾಕಿಕೊಂಡು ಬೀಗ ತೆರೆಯಲು ತೊಂದರೆಯಾಗುತ್ತಿದೆ. ಹಲವು ಪ್ರಯತ್ನಗಳ ನಂತರವೂ ತೆರೆಯದ ಬಾಗಿಲಗಳನ್ನು ಒಡೆದು ಹಾಕಿದ್ದಾರೆ. ಶನಿವಾರ ಮಧ್ಯಾಹ್ನ ಮನೆಯಿಂದ ಹೊರಬಂದ ಕುಶಲಕರ್ಮಿಯೊಬ್ಬರು ಮೂರು ದೊಡ್ಡ ಬೀಗಗಳನ್ನು ಒಡೆದಿದ್ದಾರೆ ಎಂದು ಹೇಳಿದರು.

Recommended Video

ಹೊಸ ಕಾರ್ಮಿಕ‌ ನೀತಿ ಸಂಹಿತೆ:ಯಾವ್ಯಾವ ರಾಜ್ಯದಲ್ಲಿ ವಾರಕ್ಕೆ 4 ದಿನ ಕೆಲಸ | Oneindia Kannada

English summary
The Income Tax Department and Directorate General of GST Intelligence (DGGI) have unearthed Piyush Jain's immense wealth of Rs 187 crore within the last four days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X