ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕೆ 1800 ಕೋಟಿ ರೂಪಾಯಿ ಖರ್ಚು!
ಅಯೋಧ್ಯೆ, ಸೆಪ್ಟೆಂಬರ್ 12: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅಡಿಗಲ್ಲು ಹಾಕಿದ ರಾಮಮಂದಿರ ನಿರ್ಮಾಣಕ್ಕೆ ಅದೆಷ್ಟು ಹಣ ಖರ್ಚಾಗುತ್ತದೆ ಎಂಬುದನ್ನು ಜನ್ಮಭೂಮಿ ಟ್ರಸ್ಟ್ ಬಹಿರಂಗಪಡಿಸಿದೆ.
ಕಳೆದ 2021ರ ಆಗಸ್ಟ್ 5ರಂದು ಪ್ರಧಾನಮಂತ್ರಿ ಭೂಮಿ ಪೂಜೆ ನೆರವೇರಿಸಿ ಅಡಿಗಲ್ಲು ಹಾಕಿದ ರಾಮಮಂದಿರ ನಿರ್ಮಾಣಕ್ಕೆ 1800 ಕೋಟಿ ರೂಪಾಯಿ ವೆಚ್ಚವಾಗಲಿದೆ ಎಂದು ತಿಳಿದು ಬಂದಿದೆ.
ಪರಿಷ್ಕೃತ ಅಂದಾಜಿನ ಪ್ರಕಾರ, ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಬಹು ನಿರೀಕ್ಷಿತ ರಾಮಮಂದಿರ ನಿರ್ಮಾಣಕ್ಕೆ 1800 ಕೋಟಿ ರೂಪಾಯಿ ವೆಚ್ಚವಾಗಲಿದೆ ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಹೇಳಿದ್ದಾರೆ.
ಡಿಸೆಂಬರ್ 2023ರ ವೇಳೆಗೆ ಭವ್ಯವಾದ ರಾಮ ಮಂದಿರದ ಗರ್ಭಗುಡಿಯ ನಿರ್ಮಾಣ ಪೂರ್ಣಗೊಳ್ಳಲಿದೆ. ಮೂಲಗಳನ್ನು ನಂಬುವುದಾದರೆ, ಜನವರಿ 2024 ರಂದು ಮಕರ ಸಂಕ್ರಾಂತಿಯಂದು ಶ್ರೀ ರಾಮಲಲ್ಲಾ ಗರ್ಭಗುಡಿಯಲ್ಲಿ ಕುಳಿತುಕೊಳ್ಳುವಂತೆ ಮಾಡಬೇಕು. ಹೀಗಾಗಿ ಕಾಮಗಾರಿ ಸ್ಥಳದಲ್ಲಿ ಹಗಲು ರಾತ್ರಿ ಎನ್ನದೆ ಕಾಮಗಾರಿ ನಡೆಸಲಾಗುತ್ತಿದೆ. ರಾಮಜನ್ಮಭೂಮಿ ದೇಗುಲದ ಸಂಕೀರ್ಣದಲ್ಲಿ ಹಸಿರಿನ ಸುಂದರ ನೋಟಗಳನ್ನು ಕಾಣುವಂತೆ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ ಎಂದು ಚಂಪತ್ ರೈ ಹೇಳಿದರು. ಆದ್ದರಿಂದ, ರಸ್ತೆಗಳು ಮತ್ತು ಮರಗಳ ವಿಶೇಷ ಹೊಂದಾಣಿಕೆಯೊಂದಿಗೆ ಕ್ಯಾಂಪಸ್‌ನಲ್ಲಿ ಭೂಸ್ಕೇಪಿಂಗ್ ಕೆಲಸ ನಡೆಯುತ್ತಿದೆ.

ನಾವು ಹಾಕಿದ ಅಂದಾಜು ಬದಲಾಗಬಹುದು
ಅಯೋಧ್ಯೆಯ ರಾಮಮಂದಿರ ನಿರ್ಮಾಣ ಸಮಿತಿಯ ಅಧ್ಯಕ್ಷ ನೃಪೇಂದ್ರ ಮಿಶ್ರಾ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಟ್ರಸ್ಟ್ ತನ್ನ ನಿಯಮಗಳು ಮತ್ತು ನಿಬಂಧನೆಗಳನ್ನು ಅಂತಿಮಗೊಳಿಸಲಾಯಿತು. "ಹಲವಾರು ಪರಿಷ್ಕರಣೆಗಳ ನಂತರ ಈ ಅಂದಾಜನ್ನು ಹಾಕಲಾಗಿದೆ. ಇದರಲ್ಲಿ ಸ್ವಲ್ಪ ಹೆಚ್ಚಾಗಬಹುದು, ಇಲ್ಲವೇ ಕಡಿಮೆಯೂ ಆಗಬಹುದು," ಎಂದು ಚಂಪತ್ ರಾಯ್ ಹೇಳಿದ್ದಾರೆ.

ಶ್ರೀರಾಮನ ವಿಗ್ರಹಕ್ಕಾಗಿ ಅಮೃತಶಿಲೆ ಬಳಕೆ
ಅಯೋಧ್ಯೆಯ ರಾಮ ಮಂದಿರದಲ್ಲಿ ಶ್ರೀರಾಮನ ವಿಗ್ರಹ ನಿರ್ಮಾಣಕ್ಕಾಗಿ ಬಿಳಿ ಬಣ್ಣದ ಅಮೃತಶಿಲೆಯನ್ನು ಬಳಸಲಾಗುತ್ತಿದೆ. ಅಮೃತಶಿಲೆಯಲ್ಲೇ ಕೆತ್ತನೆ ಮಾಡುವುದಕ್ಕೆ ಟ್ರಸ್ಟ್ ನಿರ್ಧರಿಸಿದೆ. ಇದರ ಜೊತೆಗೆ ರಾಮಾಯಣ ಕಾಲದ ಹಲವಾರು ದೇವತೆಗಳ ವಿಗ್ರಹಗಳು ರಾಮಮಂದಿರದಲ್ಲಿ ಬರುತ್ತವೆ ಎಂದು ಟ್ರಸ್ಟ್ ಉಲ್ಲೇಖಿಸಿದೆ. "ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ನಿಯಮಗಳು ಮತ್ತು ನಿಬಂಧನೆಗಳನ್ನು ಅಂತಿಮಗೊಳಿಸಲಾಗಿದೆ. ನಾವು ಕಳೆದ ಹಲವಾರು ತಿಂಗಳುಗಳಿಂದ ಅದರ ಮೇಲೆ ಕೆಲಸ ಮಾಡುತ್ತಿದ್ದೇವೆ" ಎಂದು ಚಂಪತ್ ರಾಯ್ ಹೇಳಿದ್ದಾರೆ.

ರಾಮ ಮಂದಿರ ನಿರ್ಮಾಣ ಯಾವಾಗ ಆಗುತ್ತೆ ಪೂರ್ಣ?
ಅಯೋಧ್ಯೆಯಲ್ಲಿ ನಿರ್ಮಾಣ ಮಾಡುತ್ತಿರುವ ರಾಮ ಮಂದಿರವು ಡಿಸೆಂಬರ್ 2023ರ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. 2024ರ ಜನವರಿಯಲ್ಲಿ ಮಕರ ಸಂಕ್ರಾಂತಿ ಹಬ್ಬದ ಹೊತ್ತಿಗೆ ಭಗವಾನ್ ರಾಮನ ಮೂರ್ತಿಯನ್ನು ಗರ್ಭಗುಡಿಯಲ್ಲಿ ಪ್ರತಿಷ್ಠಾಪನೆ ಮಾಡುವ ನಿರೀಕ್ಷೆಯಿದೆ ಎಂದು ಚಂಪತ್ ರಾಯ್ ಹೇಳಿದ್ದಾರೆ.

2024ರ ಅದ್ಧೂರಿ ಕಾರ್ಯಕ್ರಮಕ್ಕೆ ಸಿದ್ಧತೆ2024ರ ಅದ್ಧೂರಿ ಕಾರ್ಯಕ್ರಮದ ಸಿದ್ಧತೆಗಾಗಿ ಟ್ರಸ್ಟ್ ಚಿಂತನೆ ನಡೆಸಿದೆ. ವಿಶ್ವಹಿಂದೂ ಪರಿಷತ್ತಿನ ಪ್ರಾಂತೀಯ ಉಸ್ತುವಾರಿ ಶರದ್ ಶರ್ಮಾ ಈ ಬಗ್ಗೆ ತಿಳಿಸಿದ್ದು, ಪ್ರಧಾನಮಂತ್ರಿ ಗೃಹ ಸಚಿವರ ಪ್ರೇರಣೆಯಿಂದ ನಿರ್ಮಾಣಗೊಂಡಿರುವ ಶ್ರೀರಾಮ ಜನ್ಮಭೂಮಿಯಲ್ಲಿ ಭವ್ಯ ಮಂದಿರ ನಿರ್ಮಿಸಲು ಟ್ರಸ್ಟ್ ಸಂಸ್ಥೆ ಸಂಕಲ್ಪ ಮಾಡಿದೆ. ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಭವ್ಯ ಮಂದಿರದಲ್ಲಿ ದೇವರನ್ನು ಕೂರಿಸಬೇಕು ಎಂಬ ಸಂಪೂರ್ಣ ಆಸೆಯನ್ನು ಹೊಂದಿದ್ದು, ಡಿಸೆಂಬರ್ 2023ರೊಳಗೆ ಗರ್ಭಗುಡಿ ನಿರ್ಮಾಣವಾಗಬೇಕು ಮತ್ತು 2024 ರ ಜನವರಿಯಲ್ಲಿ ಮಕರ ಸಂಕ್ರಾಂತಿಯಂದು ದೇವರನ್ನು ಕೂರಿಸಬೇಕು. ಅವರ ಗರ್ಭಗುಡಿಯಲ್ಲಿ ಪ್ರಯತ್ನಗಳು ನಡೆಯುತ್ತಿವೆ ಎಂದು ತಿಳಿಸಿದ್ದಾರೆ.
2024ರ ಅದ್ಧೂರಿ ಕಾರ್ಯಕ್ರಮದ ಸಿದ್ಧತೆಗಾಗಿ ಟ್ರಸ್ಟ್ ಚಿಂತನೆ ನಡೆಸಿದೆ. ವಿಶ್ವಹಿಂದೂ ಪರಿಷತ್ತಿನ ಪ್ರಾಂತೀಯ ಉಸ್ತುವಾರಿ ಶರದ್ ಶರ್ಮಾ ಈ ಬಗ್ಗೆ ತಿಳಿಸಿದ್ದು, ಪ್ರಧಾನಮಂತ್ರಿ ಗೃಹ ಸಚಿವರ ಪ್ರೇರಣೆಯಿಂದ ನಿರ್ಮಾಣಗೊಂಡಿರುವ ಶ್ರೀರಾಮ ಜನ್ಮಭೂಮಿಯಲ್ಲಿ ಭವ್ಯ ಮಂದಿರ ನಿರ್ಮಿಸಲು ಟ್ರಸ್ಟ್ ಸಂಸ್ಥೆ ಸಂಕಲ್ಪ ಮಾಡಿದೆ. ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಭವ್ಯ ಮಂದಿರದಲ್ಲಿ ದೇವರನ್ನು ಕೂರಿಸಬೇಕು ಎಂಬ ಸಂಪೂರ್ಣ ಆಸೆಯನ್ನು ಹೊಂದಿದ್ದು, ಡಿಸೆಂಬರ್ 2023ರೊಳಗೆ ಗರ್ಭಗುಡಿ ನಿರ್ಮಾಣವಾಗಬೇಕು ಮತ್ತು 2024 ರ ಜನವರಿಯಲ್ಲಿ ಮಕರ ಸಂಕ್ರಾಂತಿಯಂದು ದೇವರನ್ನು ಕೂರಿಸಬೇಕು. ಅವರ ಗರ್ಭಗುಡಿಯಲ್ಲಿ ಪ್ರಯತ್ನಗಳು ನಡೆಯುತ್ತಿವೆ ಎಂದು ತಿಳಿಸಿದ್ದಾರೆ.












Click it and Unblock the Notifications