ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಸೋಂಕಿತರಲ್ಲಿ ಸಾವಿನ ಅಪಾಯ ಪತ್ತೆ ಹಚ್ಚುವ ಸಾಧನ ಬಂದೇಬಿಡ್ತು

|
Google Oneindia Kannada News

ಕೊರೊನಾ ಸೋಂಕಿತರಲ್ಲಿ ಯಾರಿಗೆ ಹೆಚ್ಚು ಅಪಾಯವಿದೆ ಯಾರಿಗೆ ಕಡಿಮೆ ಇದೆ ಎಂದು ಪತ್ತೆ ಹೆಚ್ಚುವ ಸಾಧನ ಬಂದಿದೆ. ಕೊರೊನಾ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿರುವ ಯಾವ ರೋಗಿಗಳಲ್ಲಿ 'ಸಾವಿನ ಅಪಾಯ' ಎಷ್ಟಿದೆ ಎಂದು ಅಂದಾಜಿಸುವ ನಾಲ್ಕು ಹಂತಗಳ '4 ಸಿ' ಎಂಬ ಹೊಸ ಪರಿಕರ ಅಥವಾ ಮಾದರಿಯನ್ನು ಬ್ರಿಟನ್‌ ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ.

ರೋಗಿಗಳಿಗೆ ತ್ವರಿತಗತಿಯಲ್ಲಿ ಚಿಕಿತ್ಸೆ ನೀಡಲು ವೈದ್ಯರಿಗೆ ಈ ಮಾದರಿ ಸಹಾಯ ಮಾಡುತ್ತದೆ'ಎಂದು ಈ ಸಂಶೋಧನೆಯ ಸಹ ನೇತೃತ್ವವಹಿಸಿರುವ ಎಡಿನ್ಬರ್ಗ್ ವಿಶ್ವವಿದ್ಯಾಲಯದ ಶಸ್ತ್ರಚಿಕಿತ್ಸೆ ಮತ್ತು ದತ್ತಾಂಶ ವಿಜ್ಞಾನದ ಪ್ರಾಧ್ಯಾಪಕ ಎವೆನ್ ಹ್ಯಾರಿಸನ್ ಹೇಳಿದ್ದಾರೆ.

ಡಿಸಿಜಿಐ ಆದೇಶ ಪಾಲಿಸುತ್ತೇವೆ: ಸೆರಂ ಇನ್‌ಸ್ಟಿಟ್ಯೂಟ್ ಪ್ರತಿಕ್ರಿಯೆಡಿಸಿಜಿಐ ಆದೇಶ ಪಾಲಿಸುತ್ತೇವೆ: ಸೆರಂ ಇನ್‌ಸ್ಟಿಟ್ಯೂಟ್ ಪ್ರತಿಕ್ರಿಯೆ

ವಿವಿಧ ದತ್ತಾಂಶಗಳನ್ನು ಆಧರಿಸಿ ರೋಗಿಗಳ ಅಪಾಯ ಮಟ್ಟವನ್ನು ಅಳತೆ ಮಾಡಲಾಗುತ್ತದೆ. ರೋಗದ ಪ್ರಮಾಣಕ್ಕೆ 0 ಯಿಂದ 21ರವರೆಗೆ ಅಂಕಗಳನ್ನು ನೀಡಲಾಗುತ್ತದೆ. ಯಾವ ರೋಗಿಗೆ 15 ಅಥವಾ ಅದಕ್ಕಿಂತ ಹೆಚ್ಚು ಅಂಕಗಳು ಬರುತ್ತವೆಯೋ ಅವರು ಶೇ 62ರಷ್ಟು ಹೆಚ್ಚು ತೊಂದರೆ ಎದುರಿಸುತ್ತಿರುತ್ತಾರೆ.

4 ಸಿ ಎಂದರೆ ಏನು ಅಪಾಯದ ಮಟ್ಟ ಅಳೆಯುವುದು ಹೇಗೆ?

4 ಸಿ ಎಂದರೆ ಏನು ಅಪಾಯದ ಮಟ್ಟ ಅಳೆಯುವುದು ಹೇಗೆ?

'4ಸಿ' ಎಂದರೆ ಕೊರೊನಾವೈರಸ್ ಕ್ಲಿನಿಕಲ್ ಕ್ಯಾರೆಕ್ಟರೈಸೇಷನ್ ಕನ್ಸೋರ್ಟಿಯಂ (Coronavirus Clinical Characterisation Consortium). ಈ ಮಾದರಿಯು ಸಾವಿನ ಅಪಾಯದಲ್ಲಿರುವ ರೋಗಿಗಳನ್ನು ಪತ್ತೆ ಹಚ್ಚುತ್ತದೆ, ಹಾಗೆಯೇ ಅವರಿಗೆ ತಕ್ಷಣ ಚಿಕಿತ್ಸೆ ನೀಡಿ ಆರೈಕೆ ಮಾಡಲು ವೈದ್ಯರಿಗೆ ಸಹಕಾರಿಯಾಗಲಿದೆ.

ಸಾವಿನ ಅಂಚಿಗೆ ತಲುಪುತ್ತಾರೆ

ಸಾವಿನ ಅಂಚಿಗೆ ತಲುಪುತ್ತಾರೆ

ಕೊರೊನಾ ವೈರಸ್‌ನಿಂದ ಬಳಲುತ್ತಿರುವ ಕೆಲವು ರೋಗಿಗಳು ಸಾವಿನ ಅಂಚಿಗೆ ತಲುಪುತ್ತಾರೆ. ಆಸ್ಪತ್ರೆಗೆ ದಾಖಲಾಗುವ ಇಂಥ ರೋಗಿಗಳಲ್ಲಿನ ಅಪಾಯದ ಪ್ರಮಾಣ ಗುರುತಿಸುವುದು ವೈದ್ಯರಿಗೆ ಸವಾಲಾಗುತ್ತಿದೆ. ಹೀಗೆ ಅಪಾಯದಲ್ಲಿರುವ ಕೋವಿಡ್ 19 ರೋಗಿಗಳನ್ನು ತ್ವರಿತವಾಗಿ ಗುರುತಿಸಿ, ಅವರಿಗೆ ನಿಗದಿತ ಚಿಕಿತ್ಸೆಯನ್ನು ನೀಡಲು ನಿಖರ ಹಾಗೂ ವೇಗವಾಗಿ ಅಪಾಯದ ಮುನ್ಸೂಚನೆ ನೀಡುವ ಸಾಧನಗಳು ಬೇಕಾಗುತ್ತವೆ.

ವಯಸ್ಸು, ಲಿಂಗ, ಆರೋಗ್ಯ ಸ್ಥಿತಿ ದತ್ತಾಂಶಗಳ ಬಳಕೆ

ವಯಸ್ಸು, ಲಿಂಗ, ಆರೋಗ್ಯ ಸ್ಥಿತಿ ದತ್ತಾಂಶಗಳ ಬಳಕೆ

ಈ 4ಸಿ- ಮಾದರಿಯಲ್ಲಿ ರೋಗಿಯ ವಯಸ್ಸು, ಲಿಂಗ, ಆರೋಗ್ಯ ಪರಿಸ್ಥಿತಿ, ಉಸಿರಾಟ ಮತ್ತು ರಕ್ತದಲ್ಲಿರುವ ಆಮ್ಲಜನಕದ ಪ್ರಮಾಣದಂತಹ ದತ್ತಾಂಶಗಳನ್ನು ಉಪಯೋಗಿಸಿಕೊಂಡು ಅಪಾಯದ ಹಂತವನ್ನು ಗುರುತಿಸಿ, ಸಾವಿನ ಸಂಖ್ಯೆಯನ್ನು ಕಡಿಮೆ ಮಾಡಬಹುದು. ಈಗಾಗಲೇ ನಡೆಸಿರುವ ಅಧ್ಯಯನದ ಪ್ರಕಾರ, ಈ ರಿತಿ ಅಪಾಯವನ್ನು ಪತ್ತೆ ಹಚ್ಚುವ ಬೇರೆ ಬೇರೆ 15 ಮಾದರಿಗಳಿಗೆ ಹೋಲಿಸಿದರೆ, '4ಸಿ' ಮಾದರಿ ಹೆಚ್ಚು ನಿಖರವಾಗಿ ಮಾಹಿತಿ ನೀಡುತ್ತಿದೆ. ಇದು ರೋಗಿಗಳಿಗೆ ಯಾವ ರೀತಿ ಚಿಕಿತ್ಸೆ ನೀಡಬಹುದೆಂದು ಬೇಗ ತೀರ್ಮಾನಕ್ಕೆ ಬರಲು ಸಹಕಾರಿಯಾಗಿದೆ' ಎಂದು ಸಂಶೋಧಕರು ತಿಳಿಸಿದ್ದಾರೆ.

ವೈದ್ಯಕೀಯ ಜರ್ನಲ್‌ನಲ್ಲಿ ಪ್ರಕಟ

ವೈದ್ಯಕೀಯ ಜರ್ನಲ್‌ನಲ್ಲಿ ಪ್ರಕಟ

ಈ ಮಾದರಿಯ ಸಂಶೋಧನಾ ಪ್ರಬಂಧ ಬಿಎಂಜೆ ವೈದ್ಯಕೀಯ ಜರ್ನಲ್‌ನಲ್ಲಿ ಬುಧವಾರ ಪ್ರಕಟವಾಗಿದೆ. ಕೋವಿಡ‌19 ಸೋಂಕಿನಿಂದ ಬಳಲುತ್ತಿರುವರನ್ನು 'ಕಡಿಮೆಯಿಂದ ಮಧ್ಯಮ, ಹೆಚ್ಚು(Low to Medium, High) ಅಪಾಯವಿರುವವರು' ಅಥವಾ 'ಹೆಚ್ಚು ಅಪಾಯದೊಂದಿಗೆ ಸಾವಿನಂಚಿನಲ್ಲಿರುವರು (Low to Mortality risk)' ಎಂದು ವಿಭಾಗಿಸಲಾಗುತ್ತದೆ. ಸಂಶೋಧಕರ ಪ್ರಕಾರ, '3 ಅಥವಾ ಅದಕ್ಕಿಂತ ಕಡಿಮೆ ಅಂಕಗಳನ್ನು ಪಡೆದ ರೋಗಿಗಳನ್ನು ಆಸ್ಪತ್ರೆಗೆ ದಾಖಲಿಸುವ ಅಗತ್ಯವಿಲ್ಲ.

English summary
British scientists have developed a four-level scoring model for predicting the death risk of patients hospitalised with Covid-19, saying it should help doctors quickly decide on the best care for each patient.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X