ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಸೋಂಕಿನಿಂದ ಮೆದುಳಿಗೆ ಹಾನಿಯಾಗಬಹುದು: ಎಚ್ಚರಿಕೆ

|
Google Oneindia Kannada News

ಲಂಡನ್, ಜುಲೈ 8: ಕೊರೊನಾ ಸೋಂಕು ರೋಗಿಯ ಮೆದುಳಿನ ಮೇಲೆ ದುಷ್ಪರಿಣಾಮ ಉಂಟು ಮಾಡಬಲ್ಲದು ಎಂದು ವಿಜ್ಞಾನಿಗಳು ಮಾಹಿತಿ ನೀಡಿದ್ದಾರೆ.

ಕೊರೊನಾ ಸೋಂಕು ಕೇವಲ ಶ್ವಾಸಕೋಶ, ಹೃದಯಕ್ಕೆ ಮಾತ್ರ ತೊಂದರೆ ನೀಡುವುದಲ್ಲದೆ ಮೆದುಳಿಗೆ ಸಂಬಂಧಿಸಿದ ರೋಗಗಳಿಗೂ ತುತ್ತಾಗಬಹುದು.

ಲಸಿಕೆ ಇಲ್ಲದೆಯೇ ಕೊರೊನಾ ಅಂತ್ಯವಾಗಬಲ್ಲದೇ? ಹೇಗೆ?: ಕುತೂಹಲಕಾರಿ ಸಂಗತಿಲಸಿಕೆ ಇಲ್ಲದೆಯೇ ಕೊರೊನಾ ಅಂತ್ಯವಾಗಬಲ್ಲದೇ? ಹೇಗೆ?: ಕುತೂಹಲಕಾರಿ ಸಂಗತಿ

ಉರಿಯೂತ, ಮನೋರೋಗ ಸೇರಿದಂತೆ ನರ ವೈಜ್ಞಾನಿಕ ತೊಡಕುಗಳಿಗೂ ಕಾರಣವಾಗಬಹುದು ಎಂದು ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ.ಯೂನಿವರ್ಸಿಟಿ ಕಾಲೇಜ್ ಲಂಡನ್(ಯುಸಿಎಲ್)ನ ಸಂಶೋಧಕರು ನಡೆಸಿದ ಅಧ್ಯಯನದಲ್ಲಿ 43 ರೋಗಿಗಳಿಗೆ ಪಾರ್ಶ್ವವಾಯು, ನರಹಾನಿ ಅಥವಾ ಇತರೆ ಗಂಭೀರ ಮೆದುಳಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂಬುದು ತಿಳಿದುಬಂದಿದೆ.

COVID Linked To Brain Damage Scientists Warns

ಹೀಗಾಗಿ ಕೊವಿಡ್ 19 ಮೆದುಳಿಗೂ ಕೂಡ ಹಾನಿ ಉಂಟು ಮಾಡಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.1918ರಲ್ಲಿ ಇನ್‌ಫ್ಲುಯೆನ್ಸಾ ಸಾಂಕ್ರಾಮಿಕದ ಬಳಿಕ 1920-1930ರ ದಶಕದಲ್ಲಿ ಎನ್ಸೆಪಾಲಿಟಿಸ್ ಲೆಥಾರ್ಜಿಕಾ ರೋಗ ಕಾಣಿಸಿಕೊಂಡಿತ್ತು. ಇದು ಮೆದುಳನ್ನು ನಿಷ್ಕ್ರಿಯಗೊಳಿಸುತ್ತಿತ್ತು.

ಈಗ ಹೊಸದಾಗಿ ಬಂದಿರುವ ಕೊವಿಡ್ 19 ರೋಗವು ಶ್ವಾಸಕೋಶಕ್ಕೆ ಹಾನಿಯುಂಟು ಮಾಡುತ್ತೆ ಎಂದು ಹೇಳಲಾಗಿದ್ದರೂ, ಮೆದುಳಿನ ಮೇಲೂ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಸಂಶೋಧಕರು ತಿಳಿಸಿದ್ದಾರೆ.

English summary
Scientists warned on Wednesday of a potential wave of coronavirus-related brain damage as new evidence suggested COVID-19 can lead to severe neurological complications, including inflammation, psychosis and delirium.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X