ಆಕೆಯ ವೆಡ್ಡಿಂಗ್ ಶೂ ನಲ್ಲಿತ್ತು ಅಗಲಿದ ಅಮ್ಮನ ಕೊನೆಯ ಮಾತು!
ಇಂಗ್ಲೆಂಡ್ ಲಿಸೆಸ್ಟರ್ ಶೇರ್ ನ ಎಮ್ಮಾ ಎಂಬಾಕೆಗೆ ತನ್ನ ಮದುವೆಯ ದಿನ ಸಿಕ್ಕ ಅತ್ಯಮೂಲ್ಯ ಉಡುಗೊರೆಯೊಂದು, ಕಣ್ಣಲ್ಲಿ ಸಂಭ್ರಮ ಮೂಡಿಸುವ ಬದಲು, ದುಃಖ ಉಮ್ಮಳಿಸುವಂತೆ ಮಾಡಿತ್ತು.
ಕ್ಯಾನ್ಸರ್ ನಿಂದ ಬಳಲುತ್ತಿದ್ದ ಎಮ್ಮಾ ತಾಯಿ, ತಮ್ಮ ಮಗಳಿಗಾಗಿಯೇ ಅದ್ಧೂರಿ ಬ್ರೈಡಲ್ ಶೂವನ್ನು ಖರೀದಿಸಿಟ್ಟಿದ್ದರು. ಅದರಲ್ಲಿ ತಮಗೆ ತೋಚಿದಂತೆ ಕೆಲವು ಸಾಲುಗಳನ್ನು ಬರೆದಿದ್ದರು. ಆದರೆ ಮಗಳ ಮದುವೆಯ ಸಮಯದಲ್ಲಾ ಶೂ ನೀಡಲು ಅಮ್ಮ ಬದುಕಿರಲಿಲ್ಲ.

ಅಮ್ಮ ನಿಧನರಾದ ಕೆಲವು ದಿನಗಳ ನಂತರ ಎಮ್ಮಾ ಮದುವೆಯಾಗಲು ನಿರ್ಧರಿಸಿದ್ದರು. ಅಮ್ಮನ ಸಮ್ಮುಖದಲ್ಲೇ ನಿಶ್ಚಿತಾರ್ಥ ಮಾಡಿಕೊಂಡಿದ್ದ ಹುಡುಗನೊಂದಿಗೆ ಎಮ್ಮಾ ಹೊಸ ಬದುಕಿಗೆ ಕಾಲಿರಿಸಲು ಮುಂದಾದಾಗ, ಆಕೆಯನ್ನು ಮದುವೆಯಾಗುವ ಹುಡುಗನಿಂದ ಅಮ್ಮ ಆಕೆಗೆ ನೀಡಿದ ಉಡುಗೊರೆ ಸಿಕ್ಕಿತ್ತು. ಇಷ್ಟು ದಿನ ಆ ಉಡುಗೊರೆಯನ್ನು ಗುಟ್ಟಾಗಿ ಎತ್ತಿಟ್ಟಿದ್ದ ಆತ ಎಮ್ಮಾ ತಾಯಿಯ ಮಾತಿನಂತೆ ಅದನ್ನು ಆಕೆಯ ಮದುವೆಯ ದಿನವೇ ಆಕೆಗೆ ಕೊಟ್ಟಿದ್ದ.
ಇಂಥದೊಂದು ಅತ್ಯಮೂಲ್ಯ ಉಡುಗೊರೆ ಸಿಗುತ್ತದೆ ಎಂಬ ಕಲ್ಪನೆಯೂ ಇಲ್ಲದ ಎಮ್ಮಾ ಆ ಶೂವನ್ನು ತೆಗೆದುಕೊಂಡು ಆದರಲ್ಲಿ ಬರೆದಿದ್ದ ಸಾಲುಗಳನ್ನು ಬಿಕ್ಕುತ್ತಲೇ ಓದಿದ್ದಾರೆ.
"ನಿನ್ನ ಮದುವೆ ದಿನ ಇಂಥದೊಂದು ಉಡುಗೊರೆ ನೀಡಬೇಕು ಎಂಬ ಮನಸ್ಸಿತ್ತು. ಅದಕ್ಕೇ ಕೊಡುತ್ತಿದ್ದೇನೆ. ಈ ದಿನ ನಿನ್ನ ಬದುಕಿನ ಅತ್ಯಂತ ಮಹತ್ವದ ದಿನ. ತುಂಬು ಪ್ರೀತಿ ಮತ್ತು ಅಪ್ಪುಗೆಯೊಂದಿಗೆ..." ಎಂದು ಆ ಶೂ ಅಡಿಯಲ್ಲಿ ಬರೆಯಲಾಗಿದೆ. ಶೂ ತಯಾರಿಸುವವರನ್ನೇ ಸಂಪರ್ಕಿಸಿ, ಎಮ್ಮಾ ಅವರ ತಾಯಿ ಆ ಶೂವನ್ನು ಹೀಗೆಯೇ ಇರಬೇಕೆಂದು ಮನವಿ ಮಾಡಿಕೊಂಡು, ಅದರಲ್ಲಿ ತಾವೇ ಕೆಲವು ಸಾಲುಗಳನ್ನು ಬರೆಯುವಂತೆ ವಿನಂತಿಸಿಕೊಂಡಿದ್ದರು.
ಇದ್ಯಾವುದರ ಬಗ್ಗೆಯೂ ತಿಳಿದಿರದ ಎಮ್ಮಾ, ಮದುವೆಯ ದಿನ ಶುವನ್ನು ನೋಡಿದ ಮೇಲೆ ಅಗಲಿದ ಅಮ್ಮನ ಕೊನೆಯ ಮಾತುಗಳನ್ನು ಮತ್ತೆ ಮತ್ತೆ ಓದಿ ಬಿಕ್ಕಿದ್ದಾರೆ.












Click it and Unblock the Notifications