ಗರ್ಲ್‌ಫ್ರೆಂಡ್ ಸಿಗದೆ ಫೇಸ್‌ಬುಕ್‌ನಲ್ಲಿ ತನ್ನನ್ನೇ ಮಾರಾಟಕ್ಕಿಟ್ಟುಕೊಂಡ ವ್ಯಕ್ತಿ

ಲಂಡನ್, ಅಕ್ಟೋಬರ್ 2: ಬಹಳ ಕಾಲದಿಂದ ಗೆಳತಿಗಾಗಿ ಹುಡುಕಾಡಿ ಹೈರಾಣಾದ ವ್ಯಕ್ತಿಯೊಬ್ಬ ತನ್ನನ್ನು ತಾನೇ ಮಾರಾಟಕ್ಕೆ ಇರಿಸಿಕೊಂಡಿದ್ದಾನೆ! ತುಂಬಾ ಸಮಯದಿಂದ ಪ್ರೀತಿಯನ್ನು ಅರಸುತ್ತಿದ್ದ ವ್ಯಕ್ತಿ, ಡೇಟಿಂಗ್ ಆಪ್‌ಗಳಲ್ಲಿಯೂ ಗೆಳತಿಯನ್ನು ಕಂಡುಕೊಳ್ಳುವಲ್ಲಿ ವಿಫಲನಾಗಿದ್ದ. ಕೊನೆಗೆ ಫೇಸ್‌ಬುಕ್‌ನಲ್ಲಿ ತನ್ನನ್ನು ತಾನೇ ಮಾರಾಟಕ್ಕೆ ಇರಿಸಿಕೊಂಡಿರುವ ವಿಚಿತ್ರ ಘಟನೆ ಬ್ರಿಟನ್‌ನ ಕೆಟ್ಟೆರಿಂಗ್‌ನಲ್ಲಿ ನಡೆದಿದೆ.

ಅಲಾನ್ ಕ್ಲೇಟನ್ ಎಂಬ 30 ವರ್ಷದ ವ್ಯಕ್ತಿ, ಫೇಸ್‌ಬುಕ್‌ನ ಗ್ರೂಪ್‌ನಲ್ಲಿ 'ಮಾರಾಟಕ್ಕಿರುವ ವಸ್ತು' ಎಂದು ತನ್ನ ಹೆಸರನ್ನೇ ಜಾಹೀರಾತು ನೀಡಿದ್ದಾನೆ. ತಾನು 'ಉಚಿತ'ವಾಗಿದ್ದು, 'ಉತ್ತಮ/ಬಳಕೆಯ ಸ್ಥಿತಿ'ಯಲ್ಲಿರುವುದಾಗಿ 'ವಸ್ತು'ವಿನ ಗುಣಮಟ್ಟದ ಬಗ್ಗೆ ಹೇಳಿಕೊಂಡಿದ್ದಾನೆ. ಬ್ರಿಟನ್‌ನ ಎಲ್ಲ ಡೇಟಿಂಗ್ ಆಪ್‌ಗಳಲ್ಲಿಯೂ ತನ್ನ ಅದೃಷ್ಟ ಪರೀಕ್ಷೆ ಮಾಡಿದ್ದ ಕ್ಲೇಟನ್, ದುರದೃಷ್ಟವೇ ಮೆಟ್ಟಿಕೊಂಡಿದೆ ಎಂದು ಈ ಹೊಸ ಮಾರ್ಗ ತುಳಿದಿದ್ದಾನೆ.

'ಹಲೋ ಮಹಿಳೆಯರೇ, ನಾನು ಅಲಾನ್, ನನಗೆ 30 ವರ್ಷ ವಯಸ್ಸು. ನನಗೆ ಮಾತನಾಡಲು ಸುಂದರವಾದ ಮಹಿಳೆ ಬೇಕು. ಅದಕ್ಕಿಂತಲೂ ಮಿಗಿಲಾಗಿ ನಾನು ಕೆಲವು ಮದುವೆಗಳಿಗೆ ಹೋಗಬೇಕಾಗಿದೆ. ಆದರೆ ಅವುಗಳಿಗೆ ಏಕಾಂಗಿಯಾಗಿ ಹೋಗಲು ಬಯಸುವುದಿಲ್ಲ. ನಾನು ಡೇಟಿಂಗ್ ಸೈಟ್‌ಗಳಲ್ಲಿ ಬಹಳ ಪ್ರಯತ್ನಿಸಿದೆ. ಆದರೆ ಯಾವುದೇ ಅದೃಷ್ಟ ಖುಲಾಯಿಸಲಿಲ್ಲ. ಹೀಗಾಗಿ ಈ ರೀತಿ ಇಲ್ಲಿ ಕೇಳಿಕೊಳ್ಳಬೇಕಾಗಿದೆ' ಎಂದು ಅವರು ತಮ್ಮ ಕೆಲವು ಫೋಟೊಗಳನ್ನು ಹಂಚಿಕೊಂಡು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾನೆ.

Man Who Fails To Find Girlfriend On Dating Apps Lists Himself As Item For Sale On Facebook

ವೃತ್ತಿಯಿಂದ ಲಾರಿ ಚಾಲಕನಾಗಿರುವ ಕ್ಲೇಟನ್, ಇನ್‌ಬಾಕ್ಸ್ ಬ್ರಿಟನ್‌ನ ಮಹಿಳೆಯರ ಸಂದೇಶಗಳಿಂದ ತುಂಬಿ ಹೋಗಿದೆಯಂತೆ. ಜನರಿಂದ ಬಂದ ಬೆಂಬಲದ ಸಂದೇಶಗಳನ್ನು ಓದಿ ಮುಗಿಸುವಾಗ ಮಧ್ಯರಾತ್ರಿಯಾಗಿತ್ತು. ಕೆಲವು ಮಹಿಳೆಯರು ನನ್ನ ಬಗ್ಗೆ ಆಸಕ್ತಿ ತೋರಿಸಿದ್ದಾರೆ ಎಂದು ಹೇಳಿದ್ದಾನೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+