ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಿಂದ ಬರುವ ಹೆಚ್ಚುವರಿ ವಿಮಾನಗಳಿಗೆ ಅನುಮತಿ ನಿರಾಕರಿಸಿದ ಬ್ರಿಟನ್

|
Google Oneindia Kannada News

ಲಂಡನ್, ಏಪ್ರಿಲ್ 22: ಭಾರತದಿಂದ ಬರುವ ಹೆಚ್ಚುವರಿ ವಿಮಾನಗಳಿಗೆ ಬ್ರಿಟನ್ ಹಿಥ್ರೊ ವಿಮಾನ ನಿಲ್ದಾಣ ಅನುಮತಿಯನ್ನು ನಿರಾಕರಿಸಿದೆ.

ಭಾರತದಲ್ಲಿ ಕೊರೊನಾ ಸೋಂಕು ಹೆಚ್ಚಾಗಿರುತ್ತಿರುವ ಹಿನ್ನೆಲೆಯಲ್ಲಿ ಭಾರತವನ್ನು ಕೆಂಪು ಪಟ್ಟಿಗೆ ಸೇರಿಸಲಾಗಿದೆ. ಭಾರತದಲ್ಲಿ ಮೊದಲು ಗುರುತಿಸಲಾಗಿರುವ ರೂಪಾಂತರಿ ಕೊರೊನಾ ಸೋಂಕಿನ 10ಕ್ಕೂ ಹೆಚ್ಚು ಪ್ರಕರಣಗಳು ಬ್ರಿಟನ್‌ನಲ್ಲಿ ಕಂಡು ಬಂದಿರುವ ಹಿನ್ನೆಲೆಯಲ್ಲಿ ಹೆಚ್ಚುವರಿ ವಿಮಾನಗಳಿಗೆ ನಿಷೇಧ ಹೇರಲಾಗಿದೆ.

Shocking News: ಭಾರತದಲ್ಲಿ ಒಂದೇ ದಿನ 3 ಲಕ್ಷದ ಗಡಿ ದಾಟಿದ ಕೊರೊನಾ!Shocking News: ಭಾರತದಲ್ಲಿ ಒಂದೇ ದಿನ 3 ಲಕ್ಷದ ಗಡಿ ದಾಟಿದ ಕೊರೊನಾ!

ಭಾರತವನ್ನು ಕೆಂಪು ಪಟ್ಟಿಗೆ ಸೇರಿಸುವುದು ಕಠಿಣ ನಿರ್ಧಾರ, ಇದರರ್ಥ ಯುಕೆ ಅಥವಾ ಐರಿಶ್ ನಿವಾಸಿ ಅಥವಾ ಬ್ರಿಟಿಷ್ ಪ್ರಜೆಯಲ್ಲದವರು ಹಿಂದಿನ 10 ದಿನಗಳಲ್ಲಿ ಭಾರತದಲ್ಲಿದ್ದರೆ ಯುಕೆಗೆ ಪ್ರವೇಶಿಸಲು ಸಾಧ್ಯವಿಲ್ಲ ಎಂದು ಹೇಳಲಾಗಿದೆ.

Britains Heathrow Airport Turns Down Airline Requests For Extra Flights From India

ಕಳೆದ 24 ಗಂಟೆಗಳಲ್ಲಿ 3,14,835 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದ್ದು, 2,104 ಮಂದಿ ಮಹಾಮಾರಿಯಿಂದ ಪ್ರಾಣ ಬಿಟ್ಟಿದ್ದಾರೆ. ಒಂದು ದಿನದಲ್ಲಿ 1,78,841 ಕೊವಿಡ್-19 ಸೋಂಕಿತರು ಗುಣಮುಖರಾಗಿದ್ದಾರೆ.

ಗುರುವಾರದ ಅಂಕಿ-ಅಂಶಗಳ ಪ್ರಕಾರ, ದೇಶದಲ್ಲಿ ಒಟ್ಟು 1,59,30,965 ಕೊರೊನಾವೈರಸ್ ಸೋಂಕಿತ ಪ್ರಕರಣಗಳು ವರದಿಯಾಗಿವೆ. ಈವರೆಗೂ 1,34,54,880 ಸೋಂಕಿತರು ಗುಣಮುಖರಾಗಿದ್ದು, ಒಟ್ಟು 1,84,657 ಸಾವಿನ ಪ್ರಕರಣಗಳು ಪತ್ತೆಯಾಗಿವೆ. ಭಾರತದಲ್ಲಿ 22,91,428 ಕೊವಿಡ್-19 ಸಕ್ರಿಯ ಪ್ರಕರಣಗಳಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

English summary
Britain's Heathrow Airport has refused to allow extra flights from India before the country is added on Friday to Britain's "red-list" of locations from which most travel is banned due to a high number of COVID-19 cases, the airport said on Wednesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X