• search
  • Live TV
ಕೊಪ್ಪಳ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಟ್ರಾಫಿಕ್ ನಿಯಮ ಉಲ್ಲಂಘಿಸಿದ ವಿದೇಶಿಯರಿಗೂ ಬಿತ್ತು ದಂಡ

|

ಕೊಪ್ಪಳ, ಅಕ್ಟೋಬರ್ 16: ಟ್ರಾಫಿಕ್ ನಿಯಮ ಉಲ್ಲಂಘಿಸಿದ್ದ ವಿದೇಶಿಯರಿಗೂ ದಂಡ ವಿಧಿಸಿರುವ ಘಟನೆ ಗಂಗಾವತಿಯಲ್ಲಿ ನಡೆದಿದೆ.

ಸೆಪ್ಟೆಂಬರ್ 1ರಿಂದ ಹೊಸ ಟ್ರಾಫಿಕ್ ನಿಯಮ ಜಾರಿಗೆ ಬಂದಿತ್ತು. ಅಂದಿನಿಂದ ಟ್ರಾಫಿಕ್ ನಿಯಮ ಉಲ್ಲಂಘನೆ ಬಗ್ಗೆ ವಾಹನ ಸವಾರರಿಗೆ ತಲೆಬಿಸಿಯೂ ಆರಂಭವಾಗಿತ್ತು.

ಈ ವ್ಯಕ್ತಿ ಟ್ರಾಫಿಕ್ ನಿಯಮ ಉಲ್ಲಂಘಿಸಿದ್ದು ಬರೋಬ್ಬರಿ 104 ಬಾರಿ!

ನ್ಯೂಜಿಲೆಂಡ್ ಮೂಲದ ಡೇವಿಡ್ ಲೀ, ಈಡನ್, ಚಾರ್ಲಿಗೆ 7 ಸಾವಿರ ದಂಡ ವಿಧಿಸಲಾಗಿದೆ. ಹೆಲ್ಮೆಟ್ ಇಲ್ಲದೆ ಬೈಕ್ ಚಾಲನೆ ಮಾಡಿದ್ದಕ್ಕೆ ದಂಡ ವಿಧಿಸಲಾಗಿದೆ.

ಈ ಮೂವರು ವಿರುಪುರ ಐಲೆಂಡ್ ಗೆ ಭೇಟಿ ನೀಡಿ ಗಂಗಾವತಿಗೆ ಮರಳುತ್ತಿದ್ದರು.ಆಗ ಟ್ರಾಫಿಕ್ ಪೊಲೀಸರು ಅವರನ್ನು ಹಿಡಿದು ಬೈಕಿನ ದಾಖಲೆ ನೀಡುವಂತೆ ಕೇಳಿದ್ದಾರೆ. ಆದರೆ ಅವರು ಅಂತಾರಾಷ್ಟ್ರೀಯ ವಾಹನ ಚಾಲನೆ ಪಪರವಾನಗಿ ಹೊಂದಿದ್ದೇವೆ ಎಂದು ಹೇಳಿ ಟ್ರಾಫಿಕ್ ಪೊಲೀಸರ ಬಳಿ ಏರು ಧ್ವನಿಯಲ್ಲಿ ಮಾತನಾಡಿದ್ದಾರೆ.

ಆದರೆ ಅವರ ಬಳಿ ಯಾವುದೇ ದಾಖಲೆ ಇರಲಿಲ್ಲ. ಅಷ್ಟೇ ಅಲ್ಲದೆ ಆ ಸಂದರ್ಭದಲ್ಲಿ ಘಟನೆಯನ್ನು ಮೊಬೈಲ್‌ನಲ್ಲಿ ಸೆರೆ ಹಿಡಿಯಲು ಅವರು ಪ್ರಯತ್ನಿಸಿದ್ದರು. ಸ್ಥಳೀಯ ನ್ಯಾಯಾಲಯದಲ್ಲಿ ಚಾರ್ಜ್‌ಶೀಟ್ ಸಲ್ಲಿಸಿರುವುದಾಗಿ ಗಂಗಾವತಿ ಪೊಲೀಸ್ ನಾಗರಾಜ್ ತಿಳಿಸಿದ್ದಾರೆ.

English summary
Three Foreign nationals were fined Rs 7 thousand for breaking traffic rules in Gangavati.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X