• search
 • Live TV
ಕೊಪ್ಪಳ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ದೇವೇಗೌಡರ ಮಾತು ನಂಬುತ್ತೀರಾ? ಕೊಪ್ಪಳದಲ್ಲಿ ಮೋದಿ ಪ್ರಶ್ನೆ

|
   ಎಚ್ ಡಿ ದೇವೇಗೌಡರ ಕುಟುಂಬವನ್ನ ಟೀಕಿಸಿದ ನರೇಂದ್ರ ಮೋದಿ

   ಕೊಪ್ಪಳ, ಏಪ್ರಿಲ್ 12 : 'ಎಚ್.ಡಿ.ದೇವೇಗೌಡರ ಕುಟುಂಬದ ಮಾತನ್ನು ಕರ್ನಾಟಕದ ಜನರು ನಂಬುತ್ತಾರೆಯೇ?' ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಗಂಗಾವತಿಯಲ್ಲಿ ಪ್ರಶ್ನಿಸಿದರು.

   ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

   ಲೋಕಸಭಾ ಚುನಾವಣೆ ಪ್ರಚಾರಕ್ಕಾಗಿ ಕೊಪ್ಪಳದ ಗಂಗಾವತಿಗೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ದೇವೇಗೌಡರು ಮತ್ತು ಅವರ ಕುಟುಂಬ ಸದಸ್ಯರ ವಿರುದ್ಧ ವಾಗ್ದಾಳಿ ನಡೆಸಿದರು. 'ಕರ್ನಾಟಕದಲ್ಲಿ 20 ಪರ್ಸೆಂಟ್ ಸರ್ಕಾರ ಅಧಿಕಾರದಲ್ಲಿದೆ' ಎಂದು ಲೇವಡಿ ಮಾಡಿದರು.

   ಗಂಗಾವತಿಯಲ್ಲಿ ಮೋದಿ : ದೇವೇಗೌಡರ ಮಾತು ನಂಬುತ್ತೀರಾ? ಎಂದು ಪ್ರಶ್ನೆ

   ಶುಕ್ರವಾರ ಕೊಪ್ಪಳದ ಗಂಗಾವತಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕೊಪ್ಪಳ, ಬಳ್ಳಾರಿ ಮತ್ತು ರಾಯಚೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸಿದರು.

   ಕೊಪ್ಪಳದ ಚುನಾವಣಾ ಪುಟ

   ಪ್ರಧಾನಿ ಮೋದಿ ಹೇಳಿದ್ದೇನು?

   * ಸಚಿವ ಎಚ್.ಡಿ.ರೇವಣ್ಣ ಅವರು, 'ಬೇಕಾದ್ರೆ ಡೈರಿಯಲ್ಲಿ ಬರೆದಿಟ್ಟುಕೊಳ್ಳಿ. ಮತ್ತೆ ಮೋದಿ ಪ್ರಧಾನಿ ಆದ್ರೆ ನಾನು ರಾಜಕೀಯ ಬಿಟ್ಟು ಹೋಗ್ತಿನಿ' ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆ ಮುಂದಿಟ್ಟುಕೊಂಡು ಮೋದಿ ವಾಗ್ದಾಳಿ ನಡೆಸಿದರು.

   * ಎಚ್.ಡಿ.ದೇವೇಗೌಡರ ಸುಪುತ್ರ ಹೇಳುತ್ತಾರೆ. ಮತ್ತೆ ಮೋದಿ ಪ್ರಧಾನಿಯಾದರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು. 2014ರ ಚುನಾವಣೆಯಲ್ಲಿ ದೇವೇಗೌಡರು ಇದೇ ಮಾತನ್ನು ಹೇಳಿದ್ದರು. ಅವರು ರಾಜಕೀಯ ನಿವೃತ್ತಿ ಪಡೆದರೇ? ಎಂದು ಮೋದಿ ಪ್ರಶ್ನಿಸಿದರು.

   * ಮೋದಿ ಪ್ರಧಾನಿಯಾದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು 2014ರಲ್ಲಿ ಹೇಳಿದವರು ಈಗ ಮನೆಯ ಎಲ್ಲಾ ಮಕ್ಕಳಿಗೆ ಟಿಕೆಟ್ ಕೊಟ್ಟು ಚುನಾವಣೆಗೆ ನಿಲ್ಲಿಸಿದ್ದಾರೆ.

   * ದೇವೇಗೌಡರು ಮತ್ತು ಅವರ ಕುಟುಂಬ ಸದಸ್ಯರು ಹೇಳಿದಂತೆ ನಡೆದುಕೊಳ್ಳುತ್ತಾರೆಯೇ?, ನೀವು ಅವರ ಮಾತನ್ನು ನಂಬುತ್ತೀರಾ? ಎಂದು ಪ್ರಧಾನಿ ಮೋದಿ ಪ್ರಶ್ನೆ ಮಾಡಿದರು.

   * ಈ ರಾಜ್ಯದ ಮುಖ್ಯಮಂತ್ರಿ ಎರಡು ಹೊತ್ತು ಊಟಕ್ಕೆ ಇಲ್ಲದವರು ಸೇನೆ ಸೇರುತ್ತಾರೆ ಎಂದು ಹೇಳಿಕೆ ನೀಡುತ್ತಾರೆ. ಇದು ಸೈನಿಕರಿಗೆ ಮಾಡುವ ಅವಮಾನವಲ್ಲವೇ?. ಇಂತಹವರು ಮತ ಕೇಳಿದರೆ ನೀವು ಕೊಡುತ್ತೀರಾ? ಎಂದು ಪ್ರಶ್ನಿಸಿದರು.

   English summary
   Prime ministers of India Narendra Modi used his campaign in Gangavathi, Koppal to attack on former PM H.D.Deve Gowda family. Will People believe H.D.Deve Gowda family members statement he asked.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X