ಹೃದಯಾಘಾತ ವದಂತಿ: ನನ್ನ ಗುಂಡಿಗೆ ಗಟ್ಟಿಯಾಗಿದೆ ಎಂದ ಯಡಿಯೂರಪ್ಪ

Posted By: Nayana
Subscribe to Oneindia Kannada

ಕೊಪ್ಪಳ, ಡಿಸೆಂಬರ್ 19 : ಯಡಿಯೂರಪ್ಪ ಅವರಿಗೆ ಹೃದಯಾಘಾತವಾಗಿದೆ ಎಂದು ಸಾಮಾಜಿಕ ಜಾಲತಾಣಗಳ್ಲಲಿ ಸುದ್ದಿ ಹರಿದಾಡುತ್ತಿದೆ, ಇದೆಲ್ಲವೂ ಸುಳ್ಳು ಸುದ್ದಿ, ನಾನು ನಿಮ್ಮೆದುರು ನಿಂತಿದ್ದೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹೇಳಿದರು.

ಗುಂಡ್ಲುಪೇಟೆ, ನಂಜನಗೂಡು ಚುನಾವಣೆಗೆ ಇವಿಎಂ ಬಳಸಿರಲಿಲ್ಲವೇ?

ಗುಜರಾತ್ ಮತ್ತು ಹಿಮಾಚಲ ಪ್ರದೇಶ ಫಲಿತಾಂಶದ ಬಳಿಕ ಮೊದಲ ಪರಿವರ್ತನಾ ಯಾತ್ರೆಗೆ ಕೊಪ್ಪಳಕ್ಕೆ ಬಂದಿಳಿದ ಯಡಿಯೂರಪ್ಪ ಮಾಧ್ಯಮದವರೊಂದಿಗೆ ಮಾತನಾಡಿ ನೇರವಾಗಿ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಲ್ಲದೇ ರಾಜ್ಯದಲ್ಲಾಗುತ್ತಿರುವ ಕೋಮುಗಲಭೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ನೇರ ಕಾರಣ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಆರೋಪಿಸಿದ್ದಾರೆ.

I am fine: Yeddyurappa dares enemies

ಗುಜರಾತ್ ಮತ್ತು ಹಿಮಾಚಲ ಪ್ರದೇಶ ಚುನಾವಣೆ ಫಲಿತಾಂಶ ರಾಜ್ಯದ ಎಲ್ಲಾ ಬಿಜೆಪಿ ಕಾರ್ಯಕರ್ತರಿಗೆ ಶಕ್ತಿ ತಂದಿದೆ. ರಾಜ್ಯದಲ್ಲಿ 150 ಕ್ಕೂ ಹೆಚ್ಚು ಸ್ಥಾನ ಗೆಲ್ಲುವುದು ಖಚಿತ ಎಂದು ಹೇಳಿದ ಅವರು 6 ನೇ ಬಾರಿಗೆ ಗುಜರಾತ್ ನಲ್ಲಿ ಅಧಿಕಾರ ಹಿಡಿದಿದ್ದು ಸಾಮಾನ್ಯ ಮಾತಲ್ಲ, ದೇಶದಲ್ಲೇ ಸುದೀರ್ಘ ಅಧಿಕಾರ ಮಾಡಿದ ಹೆಗ್ಗಳಿಕೆ ಗುಜರಾತಿಗಿದೆ ಬಿಜೆಪಿ ಸರ್ಕಾರಕ್ಕಿದೆ ಎಂದರು.

ಎಂ.ಬಿ.ಪಾಟೀಲ, ಸಿದ್ದರಾಮಯ್ಯ ತಲೆ ತಿರುಕರು: ಯಡಿಯೂರಪ್ಪ ವಾಗ್ದಾಳಿ

ಇವಿಎಂ ಯಂತ್ರದ ಕುರಿತು ಮಾತನಾಡಿ, ಸಿದ್ದರಾಮಯ್ಯ ಅವರು ಇಲ್ಲಸಲ್ಲದ ಹೇಳಿಕೆ ನೀಡುತ್ತಿದ್ದಾರೆ. ಇವಿಎಂ ಇಂಪ್ಲಿಮೆಂಟೇಷನ್ ಆಗಿದ್ದು ರಾಜೀವ್ ಗಾಂಧಿ ಕಾಲದಲ್ಲಿ ಕಾಂಗ್ರೆಸ್ ಸರ್ಕಾರವಿದ್ದಾಗ, ಸೋಲಿನ ಭೀತಿಯಿಂದ ಇವಿಎಂ ಬಗ್ಗೆ ಮಾತನಾಡುತ್ತಿದ್ದಾರೆ. ಈಗಾಗಲೇ ಸಿದ್ದರಾಮಯ್ಯ 371 ಕಲಂ ಬಿಜೆಪಿ ಯವರು ವಿರೊಧಿಸಿದ್ದಾರೆ ಎಂದು ಹೇಳಿಕೊಂಡು ತಿರುಗಾಡುತ್ತಿದ್ದಾರೆ. 371 ಕಲಂ ಜಾರಿಯಾಗಲು ನಮ್ಮ ಪಾತ್ರ ಇದೆ ಎಂದು ಸ್ಪಷ್ಟಪಡಿಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
State BJP president BS Yeddyurappa clarified that he had not been met any heart attack and he fine. He also dared his pilitical enemies that they would be uncomfortable seeing he is fine. He has given clarification following rupors in social media that he had met cardiac attack.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ