ಉದ್ಯೋಗಿಗಳ ನಿದ್ರೆ ಬಗ್ಗೆ ಹೈಕೋರ್ಟ್ ಮಹತ್ವದ ಆದೇಶ: ಇದು ಯಾಕೆ ವಿಚಾರಣೆಗೆ ಬಂತು? ಇಲ್ಲಿದೆ ಮಾಹಿತಿ
ಬೆಂಗಳೂರು, ಫೆಬ್ರವರಿ, 27: ಕೆಲಸದ ವೇಳೆ ನಿದ್ದೆ ಮಾಡಿದ ಆರೋಪದ ಮೇಲೆ ಕೆಕೆಆರ್‌ಟಿಸಿ ಸಾರಿಗೆಯ ಕಾನ್ಸ್‌ಟೇಬಲ್ ಚಂದ್ರಶೇಖರ್ ಅವರನ್ನು ಅಮಾನತುಗೊಳಿಸಿದ್ದನ್ನು ಹೈಕೋರ್ಟ್ ರದ್ದುಗೊಳಿಸಿದೆ. ನ್ಯಾಯಾಲಯವು ಆದೇಶವು ಕೆಲಸ-ಜೀವನ ಸಮತೋಲನ ಮತ್ತು ಉದ್ಯೋಗಿಗಳ ಯೋಗಕ್ಷೇಮದ ಮಹತ್ವವನ್ನು ಎತ್ತಿ ಹಿಡಿದಿದೆ. ಹಾಗಾದರೆ ಈ ಕುರಿತು ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಕೆಕೆಆರ್‌ಟಿಸಿ ಹೊರಡಿಸಿದ ಅಮಾನತು ಆದೇಶವು ಅನ್ಯಾಯವಾಗಿದೆ. ಏಕೆಂದರೆ ಕಾನ್ಸ್‌ಟೇಬಲ್ ಸತತ 60 ದಿನಗಳ ಕಾಲ ವಿರಾಮ ಇಲ್ಲದೆ 16 ಗಂಟೆಗಳ ಪಾಳಿಯಲ್ಲಿ ಕೆಲಸ ಮಾಡುವಂತೆ ಮಾಡಲಾಯಿತು ಎಂದು ನ್ಯಾಯಮೂರ್ತಿ ಎಂ ನಾಗಪ್ರಸನ್ನ ತೀರ್ಪು ನೀಡಿದರು.

ನಿದ್ರೆ ಮತ್ತು ವಿಶ್ರಾಂತಿ ಭಾರತದ ಸಂವಿಧಾನದಿಂದ ವ್ಯಕ್ತಿಗಳಿಗೆ ನೀಡಲಾದ ಮೂಲಭೂತ ಹಕ್ಕುಗಳಾಗಿವೆ ಮತ್ತು ಅಂತಾರಾಷ್ಟ್ರೀಯ ಕಾರ್ಮಿಕ ಕಾನೂನಿನಿಂದ ಗುರುತಿಸಲ್ಪಟ್ಟಿವೆ ಎಂದು ನ್ಯಾಯಾಲಯ ದೃಢವಾಗಿ ಹೇಳಿದೆ. ನ್ಯಾಯಮೂರ್ತಿ ನಾಗಪ್ರಸನ್ನ ಅವರು, ಕಾನೂನುಬದ್ಧವಾಗಿ ಅನುಮತಿಸಲಾದ ಸಮಯವನ್ನು ಮೀರಿ ಕೆಲಸ ಮಾಡಲು ಉದ್ಯೋಗಿಯನ್ನು ಒತ್ತಾಯಿಸಿದರೆ, ಆಯಾಸ ಅನಿವಾರ್ಯ. ಇಂತಹ ಪರಿಸ್ಥಿತಿಗಳಲ್ಲಿ ಅರ್ಜಿದಾರರಿಗೆ ಸಂಕ್ಷಿಪ್ತ ನಿದ್ರೆಗೆ ದಂಡ ವಿಧಿಸುವುದು ಅನ್ಯಾಯವಾಗಿದೆ ಎಂದಿದ್ದಾರೆ.
ಅಲ್ಲದೆ, ಇಂದು ಪೊಲೀಸ್ ಪೇದೆ ಆಗಿರಬಹುದು ಇಲ್ಲವೇ ನಾಳೆ ಮತ್ತೊಬ್ಬರಾಗಿರಬಹುದು. ನಿದ್ರೆ ಕೊರತೆ ಆದರೆ, ಯಾವುದೇ ಮನುಷ್ಯ, ಎಲ್ಲಿ ಬೇಕಾದರೂ ನಿದ್ರೆಗೆ ಜಾರುತ್ತಾನೆ. ಆದ್ದರಿಂದ ಕೆಲಸ ಮತ್ತು ಜೀವನದ ನಡುವಿನ ಸಮತೋಲನದ ಪ್ರಮುಖ ಅಂಶವೆಂದರೆ ನಿದ್ರೆ ಮತ್ತು ವಿರಾಮ ಎಂದು ಪರಿಗಣಿಸಲಾಗಿದೆ ಎಂದು ನ್ಯಾಯಪೀಠ ಹೇಳಿದೆ.
ನಿಗಮದ ಮೂರು ಕೆಎಸ್‌ಟಿ ಪೇದೆಗಳು ದಿನಕ್ಕೆ 8 ಗಂಟೆಯಷ್ಟೇ ಕರ್ತವ್ಯ ನಿರ್ವಹಿಸಬೇಕಿದೆ. ಮೂರು ಪೇದೆಗಳು ತಲಾ 8 ಗಂಟೆಯಂತೆ 24 ಗಂಟೆ ಕೆಲಸ ಮಾಡುತ್ತಾರೆ. ಹೆಚ್ಚಿನ ಕಾರ್ಯಭಾರ ಇರುವುದರಿಂದ ಚಂದ್ರಶೇಖರ್ ಅವರನ್ನು ಎರಡು ಶಿಫ್ಟ್‌ಗಳಲ್ಲಿ ಕೆಲಸ ಮಾಡಲು ಸೂಚಿಸಲಾಗಿದೆ. ನಿರಂತರವಾಗಿ ದಿನ 16 ಗಂಟೆ ಎರಡು ಪಾಳಿಯಲ್ಲಿಕೆಲಸ ಮಾಡಲು ಸೂಚಿಸಲಾಗಿತ್ತು. ಇದು 60 ದಿನಗಳವರೆಗೆ ಮುಂದುವರೆದಿತ್ತು.
ಸಂವಿಧಾನದ ಪರಿಚ್ಛೇದ 24ರಡಿ ಘೋಷಣೆ ಆಗಿರುವ ಮಾನವ ಹಕ್ಕುಗಳ ಪ್ರಕಾರ ಪ್ರತಿಯೊಬ್ಬರೂ ವಿಶ್ರಾಂತಿ, ವಿರಾಮದ ಹಕ್ಕು ಹೊಂದಿದ್ದಾರೆ. ಕೆಲಸದ ಸಮಯವು ಸಮಂಜಸವಾದ ಮಿತಿ ಮತ್ತು ವೇತನದೊಂದಿಗೆ ಆವರ್ತಕ ರಜಾ ದಿನ ಒಳಗೊಂಡಂತೆ ವಿಶ್ರಾಂತಿ ಮತ್ತು ವಿರಾಮದ ಹಕ್ಕನ್ನು ಪ್ರತಿಯೊಬ್ಬರೂ ಹೊಂದಿದ್ದಾರೆ ಎಂದು ತಿಳಿಸಿದೆ. 2024ರ ಏಪ್ರಿಲ್ 23ರಂದು ಕರ್ತವ್ಯ ನಿರ್ವಹಣೆ ಅವಧಿಯಲ್ಲಿಅರ್ಜಿದಾರ ಚಂದ್ರಶೇಖರ್ ನಿದ್ರೆ ಮಾಡುತ್ತಿದ್ದರು.
ಇನ್ನು ಚಂದ್ರಶೇಖರ್ ನಿದ್ರೆ ಮಾಡುತ್ತಿದ್ದಾಗ ವಿಡಿಯೋ ಚಿತ್ರೀಕರಣ ಮಾಡಲಾಗಿದ್ದು, ಅದು ಸಾಮಾಜಿಕ ಜಾಲತಾಣಗಳಲ್ ಹರಿದಾಡಿತ್ತು. ಈ ಬಗ್ಗೆ ಸಂಬಂಧಪಟ್ಟ ಪ್ರಾಧಿಕಾರ ಚಂದ್ರಶೇಖರ್ ಅವರಿಂದ ವಿವರಣೆ ದಾಖಲಿಸಿಕೊಂಡಿತ್ತು. ನಂತರ ಈ ಬಗ್ಗೆ ವರದಿ ಸಲ್ಲಿಸಿದ ಬಳಿಕ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿತ್ತು. ಅದನ್ನು ಅವರು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.












Click it and Unblock the Notifications