ಗುಟ್ಕಾ ನಿಷೇಧ ಆದೇಶದ ಬೆನ್ನಲ್ಲೇ ಕೊಪ್ಪಳದಲ್ಲಿ ಕಂತೆ ಕಂತೆ ಹಣ ಸುರಿದು ಚೀಲಗಳಲ್ಲಿ ತಂಬಾಕು ತುಂಬಿಕೊಂಡು ಹೊರಟ ಜನ

ಕೊಪ್ಪಳ, ಆಗಸ್ಟ್‌ 14: ಈಗಾಗಲೇ ರಾಜ್ಯದಲ್ಲಿ ಒಂದು ವರ್ಷದ ಮಟ್ಟಿಗೆ ಗುಟ್ಕಾ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಿ ಆದೇಶ ಹೊರಡಿಸಲಾಗಿದೆ. ಈ ಸುದ್ದಿಗಳು ಹರಿದಾಡುತ್ತಿದ್ದಂತೆ ಕಂತೆ ಕಂತೆ ಹಣ ಸುರಿದು ಗುಟ್ಕಾ ಖರೀದಿಸಿದ ಘಟನೆ ಕೊಪ್ಪಳ ಜಿಲ್ಲೆಯಲ್ಲಿ ನಡೆದಿದೆ.

ಈ ಸುದ್ದಿಗಳು ಹರಿದಾಡುತ್ತಿದ್ದಂತೆ ಕೊಪ್ಪಳ ಜಿಲ್ಲೆಯಲ್ಲಿ ತಂಬಾಕು ಮತ್ತು ಗುಟ್ಕಾ ಪ್ರಿಯರಲ್ಲಿ ಭಾರೀ ಆತಂಕ ವ್ಯಕ್ತವಾಗಿದೆ. ನಿಷೇಧದ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರ ಆಗುತ್ತಿದ್ದಂತೆಯೇ ಗ್ರಾಹಕರು ಅಂಗಡಿಗಳ ಮುಂದೆ ಸಾಲು ನಿಂತು ಗುಟ್ಕಾ ಖರೀದಿಗೆ ಮುಗಿಬೀಳುತ್ತಿರುವ ದೃಶ್ಯಗಳು ಕಂಡುಬಂದಿವೆ.

Gutka Ban Panic in Karnataka Customers Rush to Buy as Prices Surge 4 Times in Koppal Know details

ಜನರು ತಮ್ಮಲ್ಲಿರುವ ಹಣ ಸಾಲದೆ ಕೈಸಾಲ ಮಾಡಿ, ಕಂತೆ ಕಂತೆ ಹಣ ಹಿಡಿದುಕೊಂಡು ಬಂದು ಗುಟ್ಕಾ ಖರೀದಿಸುತ್ತಿರುವುದು ಆಶ್ಚರ್ಯ ಮೂಡಿಸಿದೆ. ಎಷ್ಟೇ ಬೆಲೆ ಇದ್ದರೂ ಸರಿ ತಮಗೆ ಗುಟ್ಕಾ ನೀಡಿ ಎಂದು ಸೈಕಲ್, ಬೈಕ್ ತಂದು ಗೋಣಿ ಚೀಲಗಳಲ್ಲಿ ಗುಟ್ಕಾ ಪ್ಯಾಕೆಟ್‌ಗಳನ್ನು ತುಂಬಿಕೊಂಡು ಹೋಗುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಗುಟ್ಕಾ ಸಿಗುವುದಿಲ್ಲ ಎಂಬ ಆತಂಕದಿಂದ ಇಲ್ಲಿನ ಜನರು ಈ ಹಾದಿ ಹಿಡಿದಿದ್ದಾರೆ ಎನ್ನಲಾಗುತ್ತಿದೆ.

ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ

ಬೆಳಗಿನ ವೇಳೆಯಲ್ಲಿ ಗ್ರಾಹಕರಿಗೆ ಪ್ಯಾಕೆಟ್ ಹಾಗೂ ಚೀಲಗಳ ಲೆಕ್ಕದಲ್ಲಿ ಮುಕ್ತವಾಗಿ ಮಾರಾಟ ಮಾಡಿದ ವ್ಯಾಪಾರಿಗಳು, ಮಧ್ಯಾಹ್ನದ ವೇಳೆಗೆ ತಂಬಾಕು ಉತ್ಪನ್ನಗಳ ಸ್ಟಾಕ್ ಇದ್ದರೂ ಮಾರಾಟಕ್ಕಿಲ್ಲ ಎಂದು ಖಾಲಿ ಬೋರ್ಡ್ ಪ್ರದರ್ಶಿಸುತ್ತಿದ್ದಾರೆ. ಗೋದಾಮುಗಳಲ್ಲಿ ಗುಟ್ಕಾ ದಾಸ್ತಾನು ಇಟ್ಟರೆ ಕಾನೂನು ಕ್ರಮ ಜರುಗಬಹುದು ಅಥವಾ ಸೀಜ್ ಆಗಬಹುದು ಎಂಬ ಭಯದಿಂದ ವ್ಯಾಪಾರಿಗಳು ಅದನ್ನು ಸುರಕ್ಷಿತ ಸ್ಥಳಗಳಿಗೆ ಸಾಗಿಸುತ್ತಿದ್ದಾರೆ.

ಗುಟ್ಕಾ ದರ ನಾಲಕ್ಕು ಪಟ್ಟು ಹೆಚ್ಚಳ

ಸಾರ್ವಜನಿಕವಾಗಿ ಸ್ಟಾಕ್ ಇಲ್ಲ ಎಂದು ಹೇಳುವ ಅಂಗಡಿಕಾರರು, ಕದ್ದುಮುಚ್ಚಿ ದುಬಾರಿ ಮೊತ್ತಕ್ಕೆ ಮಾರಾಟ ಮಾಡುತ್ತಿದ್ದಾರೆ. ಸಾಮಾನ್ಯ ದಿನಗಳಲ್ಲಿ 25 ರೂಪಾಯಿಗೆ ಸಿಗುತ್ತಿದ್ದ ಒಂದು ಗುಟ್ಕಾ ಪ್ಯಾಕೆಟ್ ಈಗ ಕಾಳಸಂತೆಯಲ್ಲಿ 100 ರೂಪಾಯಿಗೆ ಮಾರಾಟವಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+