ಕರ್ನಾಟಕದ ಪ್ರಸಿದ್ಧ ಜಾತ್ರಾ ಮಹೋತ್ಸವಕ್ಕೆ ಅಮಿತಾಬ್ ಬಚ್ಚನ್ ಆಗಮನ?
ಕೊಪ್ಪಳ, ನವೆಂಬರ್ 16: ಶ್ರೀ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವ-2025ರ ತಯಾರಿ ಆರಂಭವಾಗಿದೆ. ಮೊದಲು ಧಾರ್ಮಿಕ ಕಾರ್ಯಕ್ರಮಗಳಿಗೆ ಸೀಮಿತವಾಗಿದ್ದ ಗವಿಮಠದ ಜಾತ್ರೆ ಈಗ ಬಹಳ ಪ್ರಸಿದ್ಧಿ ಪಡೆದುಕೊಂಡಿದೆ. ಪ್ರತಿವರ್ಷ ಸಾಮಾಜಿಕ ಸಂದೇಶವೊಂದನ್ನು ಇಟ್ಟುಕೊಂಡು ಜಾತ್ರೆ ನಡೆಸಲಾಗುತ್ತದೆ. ಮಹಾ ದಾಸೋಹದ ಹಿನ್ನಲೆಯಲ್ಲಿಯೂ ಜಾತ್ರೆ ಬಹಳ ಜನಪ್ರಿಯವಾಗಿದೆ. ಸುಮಾರು 4 ರಿಂದ 5 ಲಕ್ಷ ಭಕ್ತರು ಪಾಲ್ಗೊಳ್ಳುವ ಬೃಹತ್ ಜಾತ್ರೆ ಇದಾಗಿದೆ.
ಪ್ರತಿ ವರ್ಷ ಪುಷ್ಯ ಬಹುಳ ಬಿದಿಗೆಯಂದು ಶ್ರೀ ಗವಿಸಿದ್ದೇಶ್ವರ ಮಹಾರಥೋತ್ಸವ ನಡೆಯುತ್ತದೆ. 2025ರ ಜನವರಿಯಲ್ಲಿ ನಡೆಯುವ ಈ ಬಾರಿಯ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವಕ್ಕೆ ಬಾಲಿವುಡ್ ನಡ ಅಮಿತಾಬ್ ಬಚ್ಚನ್ ಮುಖ್ಯ ಅತಿಥಿಯಾಗಿ ಆಗಮಿಸುವ ನಿರೀಕ್ಷೆ ಇದೆ. ಈಗಾಗಲೇ ಕೊಪ್ಪಳದ ಗವಿಮಠದ ವತಿಯಿಂದ ಚಚ್ಚನ್ ಭೇಟಿಯಾಗಿ ಆಹ್ವಾನವನ್ನು ನೀಡಲಾಗಿದೆ.

ದಕ್ಷಿಣ ಭಾರತದ ಕುಂಭಮೇಳ ಎಂದೇ ಶ್ರೀ ಗವಿಸಿದ್ದೇಶ್ವರ ಮಹಾರಥೋತ್ಸವ ಪ್ರಸಿದ್ಧಿಯನ್ನು ಪಡೆದಿದೆ. ಕೊಪ್ಪಳ ಮಾತ್ರವಲ್ಲ ರಾಜ್ಯದ ವಿವಿಧ ಜಿಲ್ಲೆಗಳ ಮತ್ತು ಹೊರ ರಾಜ್ಯಗಳ ಭಕ್ತರು ಸಹ ರಥೋತ್ಸವಕ್ಕೆ ಆಗಮಿಸುತ್ತಾರೆ. ಮೂರು ದಿನಗಳ ಕಾಲ ನಡೆಯುವ ಜಾತ್ರೆಗೆ ಎರಡು ತಿಂಗಳಿನಿಂದ ಸಿದ್ಧತೆಗಳು ಆರಂಭವಾಗುತ್ತದೆ.
ಅಮಿತಾಬ್ ಬಚ್ಚನ್ ಆಗಮನ: ಕೊಪ್ಪಳದ ಗವಿಮಠ 2025ರ ಶ್ರೀ ಗವಿಸಿದ್ದೇಶ್ವರ ಮಹಾರಥೋತ್ಸವಕ್ಕೆ ಆಗಮಿಸುವಂತೆ ಬಾಲಿವುಡ್ ನಟ ಅಮಿತ್ ಬಚ್ಚನ್‌ಗೆ ಆಹ್ವಾನ ನೀಡಿದೆ. ಜನವರಿ 15ರಿಂದ ಈ ಬಾರಿಯ ಶ್ರೀ ಗವಿಸಿದ್ದೇಶ್ವರ ಜಾತ್ರೆ ನಡೆಯಲಿದೆ. ಮಹಾರಥೋತ್ಸವದ ದಿನ ಆಗಮಿಸುವಂತೆ ಆಹ್ವಾನವನ್ನು ನೀಡಲಾಗಿದ್ದು, ಅಮಿತ್ ಬಚ್ಚನ್ ಸಹ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.
ಸಾಮಾಜಿಕ ಸಂದೇಶ ಸಾರುವ ಘೋಷಣೆಯೊಂದಿಗೆ ಪ್ರತಿ ವರ್ಷ ಶ್ರೀ ಗವಿಸಿದ್ದೇಶ್ವರ ಜಾತ್ರೆಯನ್ನು ನಡೆಸಲಾಗುತ್ತದೆ. ಜಾತ್ರೆಗೆ ಆಗಮಿಸುವ ಭಕ್ತರಿಗೆ ದಾಸೋಹದ ವ್ಯವಸ್ಥೆ ಇರುತ್ತದೆ. ಭಕ್ತರು ತಮ್ಮ ಮನೆಯಿಂದ ರೊಟ್ಟಿ, ಹೋಳಿಗೆ, ಕಡಬು, ಶೇಂಗಾ ಹಿಂಡಿಯನ್ನು ತಯಾರು ಮಾಡಿಕೊಂಡು ಬಂದು ಮಠಕ್ಕೆ ನೀಡುತ್ತಾರೆ. ಲಕ್ಷ ಲಕ್ಷ ಮಿರ್ಚಿ ಬಜ್ಜಿಯನ್ನು ಜಾತ್ರೆಯಲ್ಲಿ ತಯಾರು ಮಾಡಲಾಗುತ್ತದೆ.
ಶ್ರೀ ಗವಿಸಿದ್ದೇಶ್ವರ ಜಾತ್ರೆ ಅಜ್ಜನ ಜಾತ್ರೆ ಎಂದೇ ಖ್ಯಾತಿ ಪಡೆದಿದೆ. ಶ್ರೀ ಗವಿಸಿದ್ದೇಶ್ವರ ಜಾತ್ರೆ ಮತ್ತು ತೆಪ್ಪೋತ್ಸವ ಈ ಜಾತ್ರೆಯ ವಿಶೇಷ ಆಕರ್ಷಣೆಯಾಗಿದೆ. ಈ ಜಾತ್ರೆಯ ಅಂಗವಾಗಿ ಗವಿಮಠ ಮತ್ತು ಕೊಪ್ಪಳ ಜಿಲ್ಲಾಡಳಿತದ ವತಯಿಂದ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.
ಅಜ್ಜನ ಜಾತ್ರೆ ಬಂತು ಎಂದರೆ ಕೊಪ್ಪಳ ಜಿಲ್ಲೆಯೇ ಹೊಸ ಹುರುಪು ಪಡೆಯುತ್ತದೆ. ಹಳ್ಳಿ ಹಳ್ಳಿಗಳಲ್ಲಿ ಸಂಭ್ರಮ ಇರುತ್ತದೆ. ಜಿಲ್ಲೆಯ ಪ್ರತಿ ಹಳ್ಳಿಯಲ್ಲಿಯೂ ದೊಡ್ಡ ಹಬ್ಬಕ್ಕೆ ಸಿದ್ಧವಾಗುವಂತೆ ಜನರು ತಯಾರಿಯನ್ನು ಆರಂಭಿಸುತ್ತಾರೆ. ಮೂರು ದಿನಗಳ ಕಾಲ ನಡೆಯುವ ಜಾತ್ರೆಯಲ್ಲಿ ಲಕ್ಷಾಂತರ ಭಕ್ತರು ಭಾಗಿಯಾಗುತ್ತಾರೆ.
ಸಂಕ್ರಾಂತಿ ಹಬ್ಬ ಬಂತು ಎಂದರೆ ಉತ್ತರ ಕರ್ನಾಟಕ ಭಾಗದಲ್ಲಿ ಸಾಲು ಸಾಲು ಜಾತ್ರೆಗಳು ಆರಂಭವಾಗುತ್ತದೆ. ಇವುಗಳಲ್ಲಿ ಶ್ರೀ ಗವಿಸಿದ್ದೇಶ್ವರ ಮಹಾರಥೋತ್ಸವ ಬಹಳ ಪ್ರಸಿದ್ಧಿ. ಜಾತ್ರೆಗೂ ಮುನ್ನ ಕೊಪ್ಪಳದ ಗವಿಮಠದ ಆವರಣದ ಮುಂದೆ ಅಕ್ಕಿ, ಬೆಲ್ಲ, ಜೋಳ ಮುಂತಾದ ಆಹಾರ ಸಾಮಾಗ್ರಿಗಳನ್ನು ಹೊತ್ತ ಟ್ರಾಕ್ಟರ್‌ಗಳು ಆಗಮಿಸುತ್ತವೆ.
ಧರ್ಮ, ಜಾತಿ, ಊರು, ವ್ಯಕ್ತಿ ಬೇಧವಿಲ್ಲದೆ ಎಲ್ಲೆಡೆ ಬೆಳೆದ ಧಾನ್ಯಗಳನ್ನು ಗವಿಮಠಕ್ಕೆ ಜಾತ್ರೆಗಾಗಿ ಭಕ್ತರು ತಂದು ಕೊಡುತ್ತಾರೆ. ದಿನಪೂರ್ತಿ ಅಡುಗೆ ಮಾಡುವ ಕೆಲಸ ನಡೆಯುತ್ತಲೇ ಇರುತ್ತದೆ. ಮಠದ ಕೊನೆಯ ಭಕ್ತನ ಊಟ ಆಗುವ ತನಕ ಒಲೆ ಆರುವುದಿಲ್ಲ ಎಂಬ ಮಾತಿದೆ.
-
ಮಾರ್ಚ್ 26ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
ಬೆಂಗಳೂರಿನಲ್ಲಿ ದೇಶದ ಮೊದಲ ಮನೋರೋಗ ಅಧ್ಯಯನದ ಡಿಜಿಟಲ್ 'ಕಾಮ್-ಬ್ರೈನ್' ಲೋಕಾರ್ಪಣೆ -
Jobs: ರಾಜ್ಯದ ಕಾರಾಗೃಹ ಆಸ್ಪತ್ರೆಗಳಲ್ಲಿ ಖಾಲಿ ಇರುವ ವೈದ್ಯಕೀಯ ಸಿಬ್ಬಂದಿ ಹುದ್ದೆಗಳ ಭರ್ತಿಗೆ ಸರ್ಕಾರದ ಮಹತ್ವದ ಆದೇಶ -
ಬೆಂಗಳೂರಿನ ಪಾನಿಪುರಿ ವ್ಯಾಪಾರಿಯ ತಿಂಗಳ ಸಂಪಾದನೆ ಫುಲ್ Viral: ದಿನಕ್ಕೆ 3 ಸಾವಿರ ರೂ. ಗಳಿಕೆ -
Viral Video: 11 ವರ್ಷದ ಬಾಲಕನಿಂದ ಯಶಸ್ವಿ ವಿಮಾನ ಲ್ಯಾಂಡಿಂಗ್; ನೆಟ್ಟಿಗರ ಮನಗೆದ್ದ ಈ ಪುಟ್ಟ ಪೋರ -
ಪೆಟ್ರೋಲ್ ಬದಲು ಎಥೆನಾಲ್ ಬ್ಲೆಂಡಿಂಗ್ ಮ್ಯಾಜಿಕ್; ಸಂಕಷ್ಟದಲ್ಲಿ ಭಾರತಕ್ಕೆ ನೆರವಾದ ಮೋದಿ ಮಾಸ್ಟರ್ ಪ್ಲ್ಯಾನ್: ಕೃಷ್ಣ ಭಟ್ ಬರಹ -
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ












Click it and Unblock the Notifications