ದ್ವಿತೀಯ ಪಿಯುಸಿ ಫಲಿತಾಂಶ ಕುಸಿತ: ರಜೆ ರದ್ದು ಮಾಡಿ ತರಗತಿ ಮುಂದುರೆಸುವಂತೆ ಸೂಚನೆ
ರಾಜ್ಯದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಗಳು ಮಾರ್ಚ್ 1ರಿಂದ ಆರಂಭವಾಗಿದ್ದು, ಮಾರ್ಚ್ 20ಕ್ಕೆ ಮುಕ್ತಾಯವಾಗಿದ್ದವು. ಏಪ್ರಿಲ್ 8ರಂದು ಫಲಿತಾಂಶ ಪ್ರಕಟಿಸಲಾಗಿತ್ತು. ಈ ಬಾರಿ ಹಲವು ಜಿಲ್ಲೆಗಳ ಫಲಿತಾಂಶ ಕುಸಿತವಾಗಿದ್ದು, ಈ ಸಾಲಿಗೆ ಕೊಪ್ಪಳ ಕೂಡ ಒಂದಾಗಿದೆ. ಆದ್ದರಿಂದ ಜಿಲ್ಲೆಯಲ್ಲಿನ ಅನುತ್ತೀರ್ಣರಾದ ವಿದ್ಯಾರ್ಥಿಗಳನ್ನು ಉತ್ತೀರ್ಣ ಮಾಡಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗಿದೆ.
ದ್ವಿತೀಯ ಪಿಯುಸಿ ಪರೀಕ್ಷೆಗಳು ಮಾರ್ಚ್ 1ರಿಂದ ಆರಂಭವಾಗಿದ್ದು, ಮಾರ್ಚ್ 20ಕ್ಕೆ ಮುಕ್ತಾಯವಾಗಿದ್ದವು. ಇನ್ನು ಮಾರ್ಚ್ 21 ರಂದು ಆನ್ಸರ್ ಕೀ ಬಿಡುಗಡೆ ಮಾಡಲಾಗಿತ್ತು. ಏಪ್ರಿಲ್ 8ರಂದು ಮೊದಲು ಜಿಲ್ಲಾವಾರು ಉತ್ತೀರ್ಣ ಫಲಿತಾಂಶ ಪ್ರಕಟಿಸಲಾಗಿದ್ದು, ಬಳಿಕ ಆನ್‌ಲೈನ್‌ಲ್ಲಿ ಫಲಿತಾಂಶ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿತ್ತು.

ಈ ವರ್ಷದ ಕೊಪ್ಪಳ ಜಿಲ್ಲೆಯ ದ್ವಿತೀಯ ಪಿಯುಸಿ ಫಲಿತಾಂಶ ಕಳೆದ ವರ್ಷಕ್ಕಿಂತಲೂ ಭಾರೀ ಕುಸಿತ ಕಂಡಿದೆ. ಆದ್ಧಾರಿಂದ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಮರುಪಾಠ ಆರಂಭ ಮಾಡಲು ಸರ್ಕಾರಿ ಹಾಗೂ ಎಲ್ಲಾ ಅನುದಾನಿತ ಕಾಲೇಜುಗಳ ಪ್ರಾಚಾರ್ಯರು ಹಾಗೂ ಉಪನ್ಯಾಸಕರಿಗೆ ಜಿಲ್ಲಾ ಶಿಕ್ಷಣ ಇಲಾಖೆ ಸೂಚನೆ ನೀಡಿದ್ದು, ಈ ಹಿನ್ನೆಲೆ ರಜೆಯನ್ನು ರದ್ದು ಮಾಡಲಾಗಿದೆ.
ಮೂರು ವರ್ಷಗಳಿಂದ ವಿದ್ಯಾರ್ಥಿಗಳ ಉತ್ತೀರ್ಣ ಫಲಿತಾಂಶ ಏರಿಕೆಯಾಗುತ್ತಲೇ ಇತ್ತು. ಆದರೆ, ಈ ಬಾರಿ ಕೊಪ್ಪಳ 23ನೇ ಸ್ಥಾನ ಪಡೆದಿದ್ದು, ಫಲಿತಾಂಶದಲ್ಲಿ ಶೇಕಡ 7.98ರಷ್ಟು ಕುಸಿತ ಕಂಡಿದೆ. ಆದ್ದರಿಂದ ಮರುಪಾಠ ಮಾಡಲು ಆದೇಶಿಸಲಾಗಿದೆ.
ಮುಂಬರುವ ಪರೀಕ್ಷೆಗೆ ವಿದ್ಯಾರ್ಥಿಗಳನ್ನು ತಯಾರಿ ಮಾಡಲಿ ತರಗತಿಗಳನ್ನು ಆರಂಭಿಸಬೇಕು. ವಿದ್ಯಾರ್ಥಿಗಳಲ್ಲಿ ಮನೋಸ್ಥೈರ್ಯ ತುಂಬಿ ಓದಲು ಪ್ರೇರೇಪಿಸಬೇಕೆಂದು ಪದವಿ ಪೂರ್ವ ಶಿಕ್ಷಣ ಇಲಾಖೆಯು ಎಲ್ಲಾ ಡಿಡಿಪಿಐಗಳಿಗೆ ಸೂಚಿಸಿರುವುದರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಗ್ರಾಮೀಣ ವ್ಯಾಪ್ತಿಯ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಒಟ್ಟು 4,296ರಲ್ಲಿ 2,629 ವಿದ್ಯಾರ್ಥಿಗಳು ಮಾತ್ರ ಉತ್ತೀರ್ಣರಾಗಿದ್ದಾರೆ. ಫಲಿತಾಂಶದ ಪ್ರಮಾಣ ಶೇಕಡ 61.2ರಷ್ಟಿದೆ. ನಗರ ಪ್ರದೇಶಗಳ ವ್ಯಾಪ್ತಿಯ ಕಾಲೇಜುಗಳಲ್ಲಿ ಪರೀಕ್ಷೆ ಬರೆದ ಒಟ್ಟು 10,025 ವಿದ್ಯಾರ್ಥಿಗಳಲ್ಲಿ 7,002 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇಕಡ 69.78ರಷ್ಟಿದೆ. ಉಳಿದ ಮಕ್ಕಳನ್ನು ಕಾಲೇಜಿಗೆ ಕರೆಸಿ ಪಾಠ ಮಾಡುವ ಜವಾಬ್ದಾರಿಯನ್ನು ಉಪನ್ಯಾಸಕರಿಗೆ ನೀಡಲಾಗಿದೆ.
ಈ ವರ್ಷದ ವಾರ್ಷಿಕ ಪರೀಕ್ಷೆಯ ಫಲಿತಾಂಶ ಕುಸಿತ ಆಗಿದ್ದರಿಂದ ಪುನಃ ತರಗತಿಗಳನ್ನು ಆರಂಭ ಮಾಡುವಂತೆ ಸೂಚನೆ ನೀಡಲಾಗಿದೆ. ಈ ಮೂಲಕ ಮುಂದಿನ ವರ್ಷದಿಂದ ಕೊಪ್ಪಳ ಜಿಲ್ಲೆಗೆ ಹೆಚ್ಚು ಫಲಿತಾಂಶ ಬರುವಂತೆ ಕ್ರಮ ವಹಿಸಲಾಗುವುದು ಎಂದು ಕೊಪ್ಪಳ ಜಿಲ್ಲಾ ಶಿಕ್ಷಣ ಇಲಾಖೆಯು ಡಿಡಿಪಿಐ ಜದೀಶ್ ಅವರು ತಿಳಿಸಿದ್ದಾರೆ.
ಜಿಲ್ಲಾವಾರು ಉತ್ತೀರ್ಣ ಫಲಿತಾಂಶ
* ಉಡುಪಿ - ಶೇಕಡ 93.90
* ದಕ್ಷಿಣ ಕನ್ನಡ - ಶೇಕಡ 93.57
* ಬೆಂಗಳೂರು ದಕ್ಷಿಣ - ಶೇಕಡ 85.36
* ಕೊಡಗು - ಶೇಕಡ 83.84
* ಬೆಂಗಳೂರು ಉತ್ತರ - ಶೇಕಡ 83.31
* ಉತ್ತರ ಕನ್ನಡ - ಶೇಕಡ 82.93
* ಶಿವಮೊಗ್ಗ - ಶೇಕಡ 79.91
* ಬೆಂಗಳೂರು ಗ್ರಾಮಾಂತರ - ಶೇಕಡ 79.70
* ಚಿಕ್ಕಮಗಳೂರು - ಶೇಕಡ 79.56
* ಹಾಸನ - ಶೇಕಡ 77.56
* ಚಿಕ್ಕಬಳ್ಳಾಪುರ - ಶೇಕಡ 75.80
* ಮೈಸೂರು - ಶೇಕಡ 74.30
* ಚಾಮರಾಜನಗರ - ಶೇಕಡ 73.97
* ಮಂಡ್ಯ - ಶೇಕಡ 73.27
* ಬಾಗಲಕೋಟೆ - ಶೇಕಡ 72.83
* ಕೋಲಾರ - ಶೇಕಡ 72.45
* ಧಾರವಾಡ - ಶೇಕಡ 72.32
* ತುಮಕೂರು - ಶೇಕಡ 72.02
* ರಾಮನಗರ - ಶೇಕಡ 69.71
* ದಾವಣಗೆರೆ - ಶೇಕಡ 69.45
* ಹಾವೇರಿ - ಶೇಕಡ 67.56
* ಬೀದರ್ - ಶೇಕಡ 67.31
* ಕೊಪ್ಪಳ - ಶೇಕಡ 67.20
* ಚಿಕ್ಕೋಡಿ - ಶೇಕಡ 66.76
* ಗದಗ - ಶೇಕಡ 66.64
* ಬೆಳಗಾವಿ - ಶೇಕಡ 65.37
* ಬಳ್ಳಾರಿ - ಶೇಕಡ 64.41
* ಚಿತ್ರದುರ್ಗ - ಶೇಕಡ 59.87
* ವಿಜಯಪುರ - ಶೇಕಡ 58.81
* ರಾಯಚೂರು - ಶೇಕಡ 58.75
* ಕಲಬುರಗಿ - ಶೇಕಡ 55.70
* ಯಾದಗಿರಿ - ಶೇಕಡ 48.45












Click it and Unblock the Notifications