Get Updates
Get notified of breaking news, exclusive insights, and must-see stories!

ಗಂಡು ಮಗುವಿಗೆ ಜನ್ಮ ನೀಡಿದ ಟಿಎಂಸಿ ಸಂಸದೆ, ನಟಿ ನುಸ್ರತ್‌ ಜಹಾನ್‌

ಕೋಲ್ಕತ್ತಾ, ಆಗಸ್ಟ್‌ 26: ಪಶ್ಚಿಮ ಬಂಗಾಳ ಸಂಸದೆ, ಬೆಂಗಾಳಿ ನಟಿ ನುಸ್ರತ್‌ ಜಹಾನ್‌ ತಾಯಿಯಾಗಿದ್ದಾರೆ. ನುಸ್ರತ್‌ ಜಹಾನ್‌ ಕೋಲ್ಕತ್ತಾ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನನ ನೀಡಿದ್ದಾರೆ. ತಾಯಿ ಹಾಗೂ ಮಗ ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

31 ವರ್ಷದ ನುಸ್ರತ್ ಜಹಾನ್ ತನ್ನ ಗೆಳೆಯ, ನಟ ಯಶ್ ಯಶ್​ದಾಸ್​ ಗುಪ್ತಾ ಜೊತೆ ತೆರಳಿ ನಿನ್ನೆ ತಡರಾತ್ರಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಇದಕ್ಕೂ ಮುನ್ನ ನುಸ್ರತ್‌ ಆಸ್ಪತ್ರೆಗೆ ತೆರಳಿ ತಪಾಸಣೆ ಮಾಡಿಸಿಕೊಂಡಿದ್ದರು ಎಂದು ಹೇಳಲಾಗಿದೆ. ಇನ್ನು ನುಸ್ರತ್‌ ಆಸ್ಪತ್ರೆಗೆ ದಾಖಲಾದ ಹಿನ್ನೆಲೆ ಆಸ್ಪತ್ರೆಯ ಆವರಣವನ್ನು ಈಗಾಗಲೇ ಬಿಗಿ ಭದ್ರತೆಯನ್ನು ನಿಯೋಜಿಸಲಾಗಿದೆ ಎಂದು ಪಶ್ಚಿಮ ಬಂಗಾಳದ ಮಾಧ್ಯಮಗಳು ವರದಿ ಮಾಡಿದೆ.

ನುಸ್ರತ್‌ ಜಹಾನ್‌ನ ಈ ಮಗುವಿನ ತಂದೆ ಯಾರು ಎಂಬ ನಿಟ್ಟಿನಲ್ಲಿ ನುಸ್ರತ್ ಜಹಾನ್ ಬಗ್ಗೆ ವದಂತಿಗಳು ಬೆಳೆಯುತ್ತಿವೆ. ತನ್ನ ಪತಿ ನಿಖಿಲ್ ಜೈನ್‌ನಿಂದ ವಿಚ್ಛೇಧನ ಪಡೆದ ಬಳಿಕ ನಟಿ, ಟಿಎಂಸಿ ಸಂಸದೆ ನಟ ಯಶ್ ಯಶ್​ದಾಸ್​ ಗುಪ್ತಾ ಜೊತೆ ಸಂಬಂಧವನ್ನು ಹೊಂದಿದ್ದರು ಎಂದು ಆರೋಪ ಮಾಡಲಾಗಿದೆ. ಇನ್ನು ಮಗುವಿನ ಜನನದ ಸಮಯದಲ್ಲಿ ಯಶ್ ನನ್ನು ಪಕ್ಕದಲ್ಲಿರಿಸಿಕೊಳ್ಳುವಂತೆ ನುಸ್ರತ್ ವೈದ್ಯರಿಗೆ ಮನವಿ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿದೆ.

West Bengal TMC MP Nusrat Jahan blessed with a baby boy

ಇಂದು ಬೆಳಿಗ್ಗೆ, ನುಸ್ರತ್ ಆಸ್ಪತ್ರೆಯ ಕ್ಯಾಬಿನ್‌ನಿಂದ ಒಂದು ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ, ಭವಿಷ್ಯದ ತಾಯಿ ಹೇಗೆ ಭಾವಿಸುತ್ತಾರೆ ಎಂದು ಆಕೆಯೇ ಪೋಸ್ಟ್‌ನಲ್ಲಿ ಹೇಳಿದ್ದಾರೆ. ಸದ್ಯಕ್ಕೆ ನುಸ್ರತ್‌ ಜಹಾನ್‌ ಅಭಿಮಾನಿಗಳು ನವಜಾತ ಶಿಶುವಿನ ಚಿತ್ರವನ್ನು ನೋಡಲು ಕಾತರದಿಂದ ಕಾಯುತ್ತಿದ್ದಾರೆ.

ನುಸ್ರತ್ ಜಹಾನ್ ಇಂದು ಬೆಳಿಗ್ಗೆ ಹೊಸ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಅವಳು ಬರೆದಿದ್ದಾಳೆ, "ಭಯದ ನಡುವೆಯೂ ನಂಬಿಕೆ" ಎಂದು ಬರೆದುಕೊಂಡಿದ್ದಾರೆ. ಹಾಗೆಯೇ ಪಾಸಿಟಿವಿಟಿ ಎಂದು ಉಲ್ಲೇಖ ಮಾಡಿದ್ದಾರೆ.

2019 ರಲ್ಲಿ ಟರ್ಕಿಯ ಬೋಡ್ರಮ್‌ನಲ್ಲಿ ನುಸ್ರತ್ ಜಹಾನ್ ಮತ್ತು ಉದ್ಯಮಿ ನಿಖಿಲ್ ಜೈನ್ ವಿವಾಹವಾಗಿದ್ದಾರೆ. ಕೆಲವು ತಿಂಗಳ ಹಿಂದೆ ಪತಿ ನಿಖಿಲ್‌ ಜೈನ್‌ ಜೊತೆಗಿನ ತನ್ನ ವಿವಾಹವು ಭಾರತೀಯ ಕಾನೂನುಗಳ ಪ್ರಕಾರ ಮಾನ್ಯವಾಗಿಲ್ಲ. ಆದ್ದರಿಂದ ಇಬ್ಬರು ವಿಚ್ಛೇಧನ ಪಡೆಯುತ್ತೇವೆ ಎಂದು ಹೇಳಿಕೊಂಡಿದ್ದರು. ಹಾಗೆಯೇ ತನ್ನ ಕುಟುಂಬದ ಆಭರಣಗಳು ಹಾಗೂ ಇತರ ಆಸ್ತಿಗಳನ್ನು ನಿಖಿಲ್ ಕುಟುಂಬವು ಕಾನೂನುಬಾಹಿರವಾಗಿ ಇಟ್ಟುಕೊಂಡಿದೆ. ನನಗೆ ನೀಡುತ್ತಿಲ್ಲ ಎಂದು ಆರೋಪ ಮಾಡಿದ್ದರು. ಹಾಗೆಯೇ ನನ್ನ ಖಾತೆಗಳಿಂದ ಹಣವನ್ನು ದುರುಪಯೋಗ ಮಾಡಲಾಗುತ್ತಿದೆ ಎಂದು ಕೂಡಾ ದೂರಿದ್ದರು.

ಆ ಬಳಿಕ ನಟಿ ಗರ್ಭಿಣಿಯಾಗಿದ್ದು ಭಾರೀ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ. ಆದರೆ ಈವರೆಗೂ ಈ ವಿವಾದದ ಬಗ್ಗೆ ನಟಿ ಯಾವುದೇ ಹೇಳಿಕೆಯನ್ನು ನೀಡಿಲ್ಲ. ಹಾಗೆಯೇ ತನ್ನ ಸಾಮಾಜಿಕ ಜಾಲತಾಣದ ಪೋಸ್ಟ್‌ಗಳು, ಸ್ಟೋರಿಸ್‌ಗಳಲ್ಲಿ ಟಿಎಂಸಿ ಸಂಸದೆ, ನಟಿ ಸಾಮಾನ್ಯವಾಗಿ ಎಂದಿನಂತೆ ಪೋಸ್ಟ್‌ ಮಾಡುತ್ತಿದ್ದರು. ಇನ್ನು ನುಸ್ರತ್‌ ಜಹಾನ್‌ ಈ ನಡುವೆ ಭಾರೀ ಟ್ರೋಲ್‌ಗೂ ಕೂಡಾ ಬಲಿಯಾಗಿದ್ದರು. ಟ್ರೋಲ್‌ಗಳ ಮೂಲಕ ನುಸ್ರತ್‌ ಜಹಾನ್‌ ಬಳಿ ಈ ಮಗುವಿನ ತಂದೆ ಯಾರು ಎಂದು ಬಹಿರಂಗಪಡಿಸುವಂತೆ ಒತ್ತಾಯ ಮಾಡಲಾಗುತ್ತಿದೆ. ಇನ್ನು ಕೆಲವರು ಗರ್ಭಿಣಿಯಾದರೂ ನುಸ್ರತ್‌ ಸೌದರ್ಯದ ಬಗ್ಗೆ ಹೊಗಳಿದ್ದಾರೆ.

ಇನ್ನು ನುಸ್ರತ್‌ ಜಹಾನ್‌ ಮಗುವಿಗೆ ಜನ್ಮ ನೀಡಿದ ಹಿನ್ನೆಲೆ ಹಲವಾರು ಮಂದಿ ನುಸ್ರತ್‌ಗೆ ಶುಭ ಹಾರೈಸಿದ್ದಾರೆ. ನಟಿ ಮತ್ತು ರಾಜಕಾರಣಿ ಮಿಮಿ ಚಕ್ರವರ್ತಿ ತಾಯಿಯಾದ ನುಸ್ರತ್‌ ಜಹಾನ್‌ಗೆ ಶುಭಾಶಯ ತಿಳಿಸಿದ್ದಾರೆ. "ಶುಭಾಶಯಗಳು ನುಸ್ರತ್‌ ಜಹಾನ್‌, ತಬ್ಬಿಕೊಂಡು ಶುಭಾಶಯ ತಿಳಿಸಬೇಕು ಎಂದನಿಸುತ್ತಿದೆ," ಎಂದು ಟ್ವೀಟ್‌ ಮಾಡಿದ್ದಾರೆ.

(ಒನ್‌ ಇಂಡಿಯಾ ಸುದ್ದಿ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+