ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಾನು ಹಚ್ಚಿದ ಕಿಡಿ ತನ್ನನ್ನೇ ಸುಡುತ್ತಿರುವಾಗ: ಬಿಜೆಪಿಯ ಸದ್ಯದ ಪರಿಸ್ಥಿತಿ

|
Google Oneindia Kannada News

ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಮೈತ್ರಿಕೂಟದ ಸರಕಾರ ಅಧಿಕಾರಕ್ಕೆ ಬಂದ ನಂತರ, ಇತರ ಪಕ್ಷದವರು ಬಿಜೆಪಿಗೆ ಸೇರಿರುವ ಉದಾಹರಣೆಗಳನ್ನು ನೋಡಬಹುದು. ಆದರೆ, ಬಿಜೆಪಿಯವರು ಪಕ್ಷಾಂತರವಾದ ಉದಾಹರಣೆಗಳು ತೀರಾ ವಿರಳ.

ನಮ್ಮ ರಾಜಕೀಯ ವ್ಯವಸ್ಥೆಯಲ್ಲಿ ಪಕ್ಷಾಂತರ ಎನ್ನುವುದು ಪಿಡುಗಾಗಿ ಪರಿಣಮಿಸುತ್ತಿರುವುದಕ್ಕೆ ಎಷ್ಟೋ ನಿದರ್ಶನಗಳಿವೆ. ಕಳೆದ ಆರೇಳು ವರ್ಷಗಳಲ್ಲಿ ಇದು ಅತಿರೇಕಕ್ಕೆ ಹೋಗುತ್ತಿರುವುದು ಗೊತ್ತಿರುವ ವಿಚಾರ.

ಬಿಜೆಪಿ ತೊರೆದು ಟಿಎಂಸಿ ಸೇರಿದ ಸಾಲು ಸಾಲು ಬಿಜೆಪಿ ನಾಯಕರುಬಿಜೆಪಿ ತೊರೆದು ಟಿಎಂಸಿ ಸೇರಿದ ಸಾಲು ಸಾಲು ಬಿಜೆಪಿ ನಾಯಕರು

ಇದಕ್ಕೆ ನಮ್ಮ ಎರಡೂ ರಾಷ್ಟ್ರೀಯ ಪಕ್ಷಗಳು ಹೊರತಲ್ಲ. ಅವರು ಹಾಕಿಕೊಟ್ಟ ದಾರಿಯಲ್ಲಿ ಇವರು ನಡೆದುಕೊಂಡು ಹೋಗುತ್ತಿದ್ದಾರೆ ಎನ್ನುವುದಕ್ಕೆ ಯಾವುದೇ ಅಡ್ಡಿಯಿಲ್ಲ. ತಮ್ಮದೇ ಪಕ್ಷದ ಸರಕಾರ ಬುಡಮೇಲು ಆಗುತ್ತಿರುವ ಸಂದರ್ಭದಲ್ಲಿ, ದಿವಂಗತ ಪ್ರಧಾನಿ ರಾಜೀವ್ ಗಾಂಧಿಯವರು ಪಕ್ಷಾಂತರ ನಿಷೇಧ ಕಾಯ್ದೆಯನ್ನು, 1985ರ ಜನವರಿ 30ರಂದು ಜಾರಿಗೆ ತಂದಿದ್ದರು.

 ನಂದಿಗ್ರಾಮದಲ್ಲಿ ಸುವೇಂದು ಗೆಲುವು; ಮಮತಾ ಬ್ಯಾನರ್ಜಿ ತಕರಾರು ಅರ್ಜಿ ನಂದಿಗ್ರಾಮದಲ್ಲಿ ಸುವೇಂದು ಗೆಲುವು; ಮಮತಾ ಬ್ಯಾನರ್ಜಿ ತಕರಾರು ಅರ್ಜಿ

ಅಲ್ಲಿಂದ ಇಲ್ಲಿವರೆಗೆ ಈ ಕಾಯ್ದೆಯಿಂದ ತಪ್ಪಿಸಿಕೊಳ್ಳಲು ಪರ್ಯಾಯ ರಾಜಕೀಯ ತಂತ್ರಗಾರಿಕೆ ನಡೆಯುತ್ತಿರುವುದಕ್ಕೆ ಆಪರೇಷನ್ ಕಮಲ ಕೂಡಾ ಸಾಕ್ಷಿಯಾಗಬಲ್ಲದು. ಆದರೆ, ಬಿಜೆಪಿಯವರು ಇಟ್ಟ ರಾಜಕೀಯ ಹೆಜ್ಜೆ ಅಥವ ಹಚ್ಚಿದ ಕಿಡಿ, ಅವರಿಗೇ ಮುಳುವಾಗುತ್ತಿರುವುದು ಪಶ್ಚಿಮ ಬಂಗಾಳದ ಪ್ರಚಲಿತ ವಿದ್ಯಮಾನ ಎನ್ನಬಹದು.

 ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನಿರೀಕ್ಷೆಗೂ ಮೀರಿದ ಸ್ಥಾನ

ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನಿರೀಕ್ಷೆಗೂ ಮೀರಿದ ಸ್ಥಾನ

ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನಿರೀಕ್ಷೆಗೂ ಮೀರಿದ ಸ್ಥಾನವನ್ನು ಗಳಿಸಿದ ನಂತರ, ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಸನ್ನಿವೇಶವೇ ಬದಲಾಗಿ ಹೋಯಿತು. ದಶಕಗಳ ಕಾಲ ರಾಜ್ಯಭಾರ ಮಾಡಿದ ಎಡಪಕ್ಷಗಳು ಮತ್ತು ಕಾಂಗ್ರೆಸ್ ಹೇಳ ಹೆಸರಿಲ್ಲದಂತೇ ಅಲ್ಲಿ ಖಾಲಿಯಾಗುತ್ತಾ ಬಂದವು. ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರನೇರ ಹಣಾಹಣಿ ಆರಂಭವಾಯಿತು.

 ಬಂಗಾಳದ ಚುನಾವಣೆಯಲ್ಲಿ ತನ್ನ ಮ್ಯಾನ್ಡೇಟ್ ಏನು ಎನ್ನುವುದನ್ನು ತೋರಿಸಿದ

ಬಂಗಾಳದ ಚುನಾವಣೆಯಲ್ಲಿ ತನ್ನ ಮ್ಯಾನ್ಡೇಟ್ ಏನು ಎನ್ನುವುದನ್ನು ತೋರಿಸಿದ

ಟಿಎಂಸಿ ಜೊತೆಗೆ ಭ್ರಮನಿರಸನ ಗೊಂಡಿದ್ದ ಲೆಕ್ಕವಿಲ್ಲದಷ್ಟು ಮೊದಲನೇ ಮತ್ತು ಎರಡನೇ ಪಂಕ್ತಿಯ ನಾಯಕರು ಟಿಎಂಸಿ ತೊರೆದು ಬಿಜೆಪಿ ಸೇರಿದರು. ಇದರಲ್ಲಿ, ಮಮತಾ ಅವರ ಪರಮಾಪ್ತ ಬಣದವರೂ ಇದ್ದರು. ಆದರೆ, ಅಸೆಂಬ್ಲಿ ಚುನಾವಣೆಯಲ್ಲಿ ತಮ್ಮದೇ ಸರಕಾರ ಎಂದು ಓವರ್ ಕಾನ್ಫಿಡೆನ್ಸ್ ತೋರಿದ್ದ ಬಿಜೆಪಿಯವರಿಗೆ ಪಶ್ಚಿಮ ಬಂಗಾಳದ ಮತದಾರ ಚುನಾವಣೆಯಲ್ಲಿ ತನ್ನ ಮ್ಯಾನ್ಡೇಟ್ ಏನು ಎನ್ನುವುದನ್ನು ತೋರಿಸಿದ.

 ಮುಕುಲ್ ರಾಯ್ ತಮ್ಮ ಪುತ್ರನ ಜೊತೆಗೆ ವಾಪಸ್ ಟಿಎಂಸಿಗೆ ವಾಪಸ್

ಮುಕುಲ್ ರಾಯ್ ತಮ್ಮ ಪುತ್ರನ ಜೊತೆಗೆ ವಾಪಸ್ ಟಿಎಂಸಿಗೆ ವಾಪಸ್

ಈಗ, ಮತ್ತೆ ಅಲ್ಲಿನ ಪರಿಸ್ಥಿತಿ ಹಿಂದಿನಂತೆಯೇ ಸಾಗುತ್ತಿದೆ. ಇದು ಎಷ್ಟರ ಮಟ್ಟಿಗೆ ಎಂದರೆ ಬಿಜೆಪಿಯ ರಾಷ್ಟ್ರೀಯ ಉಪಾಧ್ಯಕ್ಷರಾದ ಮುಕುಲ್ ರಾಯ್ ತಮ್ಮ ಪುತ್ರನ ಜೊತೆಗೆ ವಾಪಸ್ ಟಿಎಂಸಿ ಪಕ್ಷವನ್ನು ಸೇರಿಕೊಂಡರು. ಬಿಜೆಪಿಗಾದ ಬಹುದೊಡ್ಡ ಹಿನ್ನಡೆ ಇದಾಗಿತ್ತು, ಇಷ್ಟಕ್ಕೆ ಮುಗಿಯದ ಪಕ್ಷಾಂತರ ಪರ್ವ ದಿನಾ ಬೆಳಗಾದರೆ ಬಿಜೆಪಿಯಿಂದ ಟಿಎಂಸಿಗಾಗುತ್ತಿದೆ.

 ಇತರ ಪಕ್ಷದವರನ್ನು ಪಕ್ಷಕ್ಕೆ ಸೆಳೆದು ದರ್ಬಾರ್ ನಡೆಸುತ್ತಿದ್ದರೋ, ಅದರ ಬಿಸಿ ಬಿಜೆಪಿಗೆ

ಇತರ ಪಕ್ಷದವರನ್ನು ಪಕ್ಷಕ್ಕೆ ಸೆಳೆದು ದರ್ಬಾರ್ ನಡೆಸುತ್ತಿದ್ದರೋ, ಅದರ ಬಿಸಿ ಬಿಜೆಪಿಗೆ

ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಬಿಜೆಪಿ ಗೆಲುವಿಗಾಗಿ ದುಡಿದಿದ್ದ ಕಾರ್ಯಕರ್ತರು ಮತ್ತೆ ತಮ್ಮನ್ನು ಟಿಎಂಸಿಗೆ ಸೇರಿಸಿಕೊಳ್ಳಿ ಎಂದು ಧರಣಿ ಕೂರುವ ಮಟ್ಟಿಗೆ ಪಶ್ಚಿಮ ಬಂಗಾಳದಲ್ಲಿ ಬಿಜೆಪಿಗೆ ಹಿನ್ನಡೆಯಾಗುತ್ತಿದೆ. ಬಿಜೆಪಿಯಿಂದ ಗೆದ್ದ ಶಾಸಕರು ಮತ್ತೆ ಟಿಎಂಸಿ ಬಾಗಿಲು ತಟ್ಟುತ್ತಿದ್ದಾರೆ. ಒಂದಂತೂ ನಿಜ.. ಹೇಗೆ ಇತರ ಪಕ್ಷದವರನ್ನು ತಮ್ಮ ಪಕ್ಷಕ್ಕೆ ಸೆಳೆದು ದರ್ಬಾರ್ ನಡೆಸುತ್ತಿದ್ದರೋ, ಅದರ ಬಿಸಿ ಈಗ ಬಿಜೆಪಿಗೆ ಪಶ್ಚಿಮ ಬಂಗಾಳದಲ್ಲಿ ತಟ್ಟುತ್ತಿದೆ.

English summary
West Bengal: The crisis within the state BJP unit of the party has been compounded by the inaction on part of the BJP’s top central leadership to apportion responsibility for the party’s defeat. Know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X