ಚುನಾವಣಾ ಹೊಸ್ತಿಲಲ್ಲಿ ಪಶ್ಚಿಮ ಬಂಗಾಳ ಬಿಜೆಪಿಗೆ ಎದುರಾದ ಆತಂಕ: ಮಹತ್ವದ ತೀರ್ಮಾನ

ಕೋಲ್ಕತ್ತಾ, ಫೆ 3: ಚುನಾವಣೆಯ ಹೊಸ್ತಿಲಲ್ಲಿ ಇರುವ ಪಶ್ಚಿಮ ಬಂಗಾಳದಲ್ಲಿ, ಟಿಎಂಸಿಯಿಂದ ಪಕ್ಷಕ್ಕೆ ವಲಸೆ ಬರುತ್ತಿರುವ ಮುಖಂಡರ ವಿಚಾರದಲ್ಲಿ ಬಿಜೆಪಿ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ.

ಮುಂಬರುವ ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಅಸೆಂಬ್ಲಿ ಚುನಾವಣೆ ನಡೆಯಬೇಕಿದ್ದು, ಈಗಾಗಲೇ ತೃಣಮೂಲ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಜಿದ್ದಾಜಿದ್ದಿನ ರಾಜಕೀಯ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ದಾ ಮತ್ತು ಕೇಂದ್ರ ಗೃಹಸಚಿವ ಅಮಿತ್ ಶಾ ಹಲವು ಸುತ್ತು ಪಶ್ಚಿಮ ಬಂಗಾಳ ಪ್ರವಾಸವನ್ನು ಮಾಡಿದ್ದು, ಸಿಎಂ ಮಮತಾ ಬ್ಯಾನರ್ಜಿ ವಿರುದ್ದ ಕಿಡಿಕಾರಿದ್ದಾರೆ.

ಟಿಎಂಸಿಯಿಂದ ಈಗಾಗಲೇ ಹಲವು ಸಚಿವರು ಮತ್ತು ಶಾಸಕರು ಬಿಜೆಪಿಗೆ ಸೇರ್ಪಡೆಗೊಂಡಿದ್ದು, ಇದರ ಸಂಖ್ಯೆ ಇನ್ನೂ ಹೆಚ್ಚಾಗುವುದನ್ನು ಅರಿತ ಬಿಜೆಪಿ ಮಹತ್ವದ ತೀರ್ಮಾನವನ್ನು ತೆಗೆದುಕೊಳ್ಳಲು ನಿರ್ಧರಿಸಿದೆ.

ರಾಜೀಬ್ ಬ್ಯಾನರ್ಜಿಯವರು ಅಮಿತ್ ಶಾ ಸಮ್ಮುಖದಲ್ಲಿ ಸೇರ್ಪಡೆ

ರಾಜೀಬ್ ಬ್ಯಾನರ್ಜಿಯವರು ಅಮಿತ್ ಶಾ ಸಮ್ಮುಖದಲ್ಲಿ ಸೇರ್ಪಡೆ

ಎರಡು ದಿನಗಳ ಹಿಂದೆ ಮಾಜಿ ಸಚಿವ ಮತ್ತು ಟಿಎಂಸಿ ಮುಖಂಡ ರಾಜೀಬ್ ಬ್ಯಾನರ್ಜಿಯವರು ಅಮಿತ್ ಶಾ ಸಮ್ಮುಖದಲ್ಲಿ ಸೇರ್ಪಡೆಗೊಂಡಿದ್ದರು. ಇದರ ಜೊತೆಗೆ, ಟಿಎಂಸಿಯಿಂದ ಉಚ್ಚಾಟನೆಗೊಂಡಿದ್ದ ಶಾಸಕರಾದ ಪ್ರಭೀರ್ ಘೋಶಾಲ್, ಬೈಶಾಲಿ ದಾಲ್ಮಿಯಾ, ಹೌರಾದ ಮಾಜಿ ಮೇಯರ್ ರತಿನ್ ಚಕ್ರಬರ್ತಿ, ಕಲಾವಿದ ರುದ್ರಾಣಿ ಘೋಷ್, ಈ ನಾಲ್ವರು ಕೂಡಾ ಬಿಜೆಪಿಗೆ ಸೇರ್ಪಡೆಗೊಂಡಿದ್ದರು. (ಚಿತ್ರ:ಪಿಟಿಐ)

ಕೈಲಾಶ್ ವಿಜಯ್ ವರ್ಗೀಯ ಮತ್ತು ಶಾ ಮಾತುಕತೆ

ಕೈಲಾಶ್ ವಿಜಯ್ ವರ್ಗೀಯ ಮತ್ತು ಶಾ ಮಾತುಕತೆ

ದೊಡ್ಡ ಮಟ್ಟದಲ್ಲಿ ಟಿಎಂಸಿ ಮುಖಂಡರು ಬಿಜೆಪಿಗೆ ಸೇರ್ಪಡೆಗೊಳ್ಳುತ್ತಿರುವುದು ಮೂಲ ಬಿಜೆಪಿಯಲ್ಲಿ ಅಪಸ್ವರಕ್ಕೆ ಕಾರಣವಾಗುತ್ತಿರುವುದನ್ನು ಅರಿತ ಅಮಿತ್ ಶಾ ಅವರು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಪಶ್ಚಿಮ ಬಂಗಾಳದ ಬಿಜೆಪಿ ಉಸ್ತುವಾರಿಯೂ ಆಗಿರುವ ಕೈಲಾಶ್ ವಿಜಯ್ ವರ್ಗೀಯ ಜೊತೆ ಮಾತುಕತೆ ನಡೆಸಿ, ಪ್ರಮುಖ ನಿರ್ಧಾರಕ್ಕೆ ಬಂದಿದ್ದಾರೆ. (ಚಿತ್ರ:ಪಿಟಿಐ)

ವಲಸೆ ಪರ್ವ ಬಂದ್

ವಲಸೆ ಪರ್ವ ಬಂದ್

ಟಿಎಂಸಿ ಮುಖಂಡರು ಬಿಜೆಪಿ ಸೇರ್ಪಡೆಗೊಳ್ಳುತ್ತಿರುವುದಕ್ಕೆ ಮೂಲ ಬಿಜೆಪಿಗರಲ್ಲಿ ಅಸಮಾಧಾನ ಎದುರಾಗಿದೆ. ಈ ರೀತಿ ಪಕ್ಷಕ್ಕೆ ಮುಖಂಡರು ಬರುತ್ತಿದ್ದರೆ ತಮ್ಮ ಅಸ್ತಿತ್ವಕ್ಕೆ ತೊಂದರೆಯಾಗಬಹುದು ಎನ್ನುವುದನ್ನು ಅರಿತ ಮೂಲ ನಿವಾಸಿಗಳು ವಲಸೆಪರ್ವ ಬಂದ್ ಮಾಡಬೇಕು ಎನ್ನುವ ಡಿಮಾಂಡ್ ಅನ್ನು ಇಟ್ಟಿದ್ದಾರೆ ಎಂದು ವರದಿಯಾಗಿದೆ. (ಚಿತ್ರ:ಪಿಟಿಐ)

ಬಿಜೆಪಿ ಘಟಕ ಟಿಎಂಸಿಯ ಬಿ ಟೀಂ ಆಗುವುದು ನಮಗೆ ಬೇಕಾಗಿಲ್ಲ

ಬಿಜೆಪಿ ಘಟಕ ಟಿಎಂಸಿಯ ಬಿ ಟೀಂ ಆಗುವುದು ನಮಗೆ ಬೇಕಾಗಿಲ್ಲ

"ರಾಜ್ಯ ಬಿಜೆಪಿ ಘಟಕ ಟಿಎಂಸಿಯ ಬಿ ಟೀಂ ಆಗುವುದು ನಮಗೆ ಬೇಕಾಗಿಲ್ಲ. ಹಾಗಾಗಿ, ಸದ್ಯದ ಮಟ್ಟಿಗೆ ವಲಸಿಗರಿಗೆ ಪಕ್ಷದ ಬಾಗಿಲು ಬಂದ್ ಮಾಡಲು ನಿರ್ಧರಿಸಲಾಗಿದೆ. ಮುಂದೆ ಯಾರಾದರೂ ಬರುವವರಿದ್ದರೂ ಬಹಳ ಎಚ್ಚರದಿಂದ, ಸೂಕ್ತ ಪರಿಶೀಲನೆಯೊಂದಿಗೆ ನಿರ್ಧಾರ ತೆಗೆದುಕೊಳ್ಳಲಾಗುವುದು"ಎಂದು ಕೈಲಾಶ್ ವಿಜಯ್ ವರ್ಗೀಯಾ ಹೇಳಿದ್ದಾರೆ. (ಚಿತ್ರ:ಪಿಟಿಐ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+