ಇಂಡಿಗೋ ವಿಮಾನದಲ್ಲಿ ಹೊಗೆ: ಕೊಲ್ಕತ್ತದಲ್ಲಿ ತುರ್ತು ಲ್ಯಾಂಡಿಂಗ್

ಕೊಲ್ಕತ್ತ, ಡಿಸೆಂಬರ್ 11: ಜೈಪುರದಿಂದ ಕೊಲ್ಕತ್ತದತ್ತ ಹೊರಟಿದ್ದ ಇಂಡಿಗೋ ಸಂಸ್ಥೆಗೆ ಸೇರಿದ ವಿಮಾನದಲ್ಲಿ ಹೊಗೆ ಕಾಣಿಸಿಕೊಂಡ ಪರಿಣಾಮ ವಿಮಾನ ತುರ್ತಾಗಿ ಕೆಳಗಿಳಿದ ಘಟನೆ ಕೊಲ್ಕತ್ತದಲ್ಲಿ ಮಂಗಳವಾರ ನಡೆದಿದೆ.

ಇಂಡಿಗೋ ವಿಮಾನದ ಕ್ಯಾಬಿನ್‌ನಲ್ಲಿ ಹೊಗೆ ಕಾಣಿಸಿಕೊಂಡ ಕಾರಣ ತುರ್ತು ಲ್ಯಾಂಡಿಗ್ ಮಾಡಿಸಲಾಯಿತು. ವಿಮಾನ ಯಾವುದೇ ತೊಂದರೆ ಇಲ್ಲದೆ ಸುರಕ್ಷಿತವಾಗಿ ಕೆಳಗಿಳಿಯಿತು. ವಿಮಾನದಲ್ಲಿ 136 ಜನ ಪ್ರಯಾಣಿಕರಿದ್ದರು. ಕೊಲ್ಕತ್ತದಿಂದ 70 ಕಿ.ಮೀ ದೂರದಲ್ಲಿದ್ದಾಗ ಸಮಸ್ಯೆ ಕಾಣಿಸಿಕೊಂಡಿತು.

ತಕ್ಷಣ ಎಮೆರ್ಜೆನ್ಸಿ ಘೋಷಿಸಲಾಯಿತು. ಪ್ರಯಾಣಿಕರಿಗೆ ಪ್ಯಾರಾಚ್ಯೂಟ್ ನೀಡಲಾಗಿತ್ತು. ಹಾಗೆಯೇ ಯಾವುದೇ ಆತಂಕ ಬೇಡ ನಿಧಾನವಾಗಿ ಉಸಿರು ತೆಗೆದುಕೊಳ್ಳಲು ಸೂಚಿಸಲಾಗಿತ್ತು.

Smoke engulfs aircraft, IndiGo flight makes safe emergency landing in kolkata

ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗಿಲ್ಲ, ಏರ್‌ ಕ್ರಾಫ್ಟ್ ಇನ್‌ವೆಸ್ಟಿಗೇಷನ್ ಬ್ಯೂರೋ ಈ ವಿಚಾರ ಕುರಿತು ತನಿಖೆ ಮಾಡುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+