ದುರ್ಗಾ ವೇಷದಲ್ಲಿ ಕಾಣಿಸಿಕೊಂಡ ಸಂಸದೆ ನುಸ್ರತ್‌ಗೆ ಜೀವ ಬೆದರಿಕೆ
ಲಂಡನ್, ಅ.1: ಪಶ್ಚಿಮ ಬಂಗಾಳ ನಟಿ ಹಾಗೂ ತೃಣಮೂಲ ಕಾಂಗ್ರೆಸ್ ಸಂಸದೆ ನುಸ್ರತ್ ಜಹಾನ್ ಮತ್ತೆ ಸುದ್ದಿಯಲ್ಲಿದ್ದಾರೆ. ದುರ್ಗಾ ದೇವಿ ವೇಷದಲ್ಲಿ ಕಾಣಿಸಿಕೊಂಡಿದ್ದಕ್ಕೆ ನನಗೆ ಜೀವ ಬೆದರಿಕೆ ಕರೆ ಬಂದಿದೆ ಎಂದು ನುಸ್ರತ್ ಹೇಳಿದ್ದಾರೆ. ಸದ್ಯ ಲಂಡನ್ನಿನಲ್ಲಿರುವ ನುಸ್ರತ್ ಅವರಿಗೆ ಭದ್ರತೆ ಒದಗಿಸುವಂತೆ ಅಲ್ಲಿನ ರಾಯಭಾರ ಕಚೇರಿಗೆ ಮನವಿ ಸಲ್ಲಿಸಲಾಗಿದೆ.
ದುರ್ಗಾದೇವಿಯ ವೇಷ ಧರಿಸಿ ಫೋಟೋಶೂಟ್ ಮಾಡಿಸಿರುವ ಸೆಪ್ಟೆಂಬರ್ 17ರಂದೇ ಫೋಟೋ, ವಿಡಿಯೋವನು ತಮ್ಮ ಇನ್ಸ್ಟಾಗ್ರಾಂನಲ್ಲಿ ಹಾಕಿದ್ದರು. ಲಂಡನ್ನಿನಲ್ಲಿ ಶೂಟಿಂಗ್ ನಲ್ಲಿ ತೊಡಗಿರುವ ನುಸ್ರತ್ ಅವರಿಗೆ ಕಾಮೆಂಟ್ ಮಾಡಿ ಬೆದರಿಕೆ ಹಾಕಲಾಗಿದೆ ಎಂದು ಅವರ ವಕ್ತಾರರು ಹೇಳಿದ್ದಾರೆ.
ಹೀಗಾಗಿ, ಲಂಡನ್ನಿನಲ್ಲಿರುವ ಭಾರತೀಯ ರಾಯಭಾರ ಕಚೇರಿ ಹಾಗೂ ಬಂಗಾಳ ಸರ್ಕಾರಕ್ಕೆ ಮನವಿ ಮಾಡಲಾಗಿದ್ದು, ನುಸ್ರತ್ ಅವರಿಗೆ ಭದ್ರತೆ ಒದಗಿಸುವಂತೆ ಕೋರಲಾಗಿದೆ ಎಂದು ವಕ್ತಾರರು ಹೇಳಿದರು.

ಎಚ್ಚರಿಕೆ ಬೆದರಿಕೆ ಕಾಮೆಂಟ್ಸ್
ನಿನಗೆ ಅಲ್ಲಾಹ್ ಭಯವಿಲ್ಲವಿಲ್ಲವೇ, ನಿನ್ನ ಸಾವಿನ ಸಮಯ ಹತ್ತಿರ ಬಂದಿದೆ. ನಿಮ್ಮ ದೇಹವನ್ನು ಮುಚ್ಚಿಡಲು ಆಗುವುದಿಲ್ಲವೇ ಎಂದು ಕಾಮೆಂಟ್ ಬಂದಿದೆ.
'ನುಸ್ರತ್ ಅವರು ಇಸ್ಲಾಂ ಧರ್ಮಕ್ಕೆ ಅಪಮಾನ ಎಸಗುತ್ತಿದ್ದಾರೆ. ಅವರು ತಮ್ಮ ಹೆಸರು, ಧರ್ಮ ಸಂಪೂರ್ಣ ಬದಲಾಯಿಸಿಕೊಳ್ಳಲಿ' ಎಂದು ಮುಸ್ಲಿಂ ಧಾರ್ಮಿಕ ಗುರುಗಳು ಈ ಹಿಂದೆ ಕೂಡಾ ಎಚ್ಚರಿಸಿದ್ದರು.

ಹಿಂದೂ ಧಾರ್ಮಿಕ ಆಚರಣೆಯಲ್ಲಿ ನುಸ್ರತ್
ಉದ್ಯಮಿ ನಿಖಿಲ್ ಜೈನ್ ವರಿಸಿದ ಬಳಿಕ ನುಸ್ರತ್ ಜಹಾನ್ ಅವರು ಹಿಂದೂ ಧಾರ್ಮಿಕ ಆಚರಣೆ, ಪೂಜೆ ಪುನಸ್ಕಾರಗಳಲ್ಲಿ ತೊಡಗಿಕೊಂಡಾಗಲೆಲ್ಲ ಅವರ ವಿರುದ್ಧ ಭಾರಿ ಟೀಕೆಗಳು ಕೇಳಿಬರುತ್ತಿವೆ. ಸಂಸದರಾದ ಬಳಿಕ ಸಂಸತ್ತಿನಲ್ಲಿ ಪ್ರಮಾಣ ವಚನ ಸ್ವೀಕರಿಸುವ ಸಂದರ್ಭದಲ್ಲಿಹಣೆಗೆ ಸಿಂಧೂರ ಇಟ್ಟುಕೊಂಡು ಬಂದಿದ್ದರು ಎಂದು ಟೀಕಿಸಲಾಗಿತ್ತು.

ತಿರುಗೇಟು ನೀಡಿದ್ದ ನುಸ್ರತ್ ಜಹಾನ್
ಪಶ್ಚಿಮ ಬಂಗಾಳದಲ್ಲಿ ನಾವೆಲ್ಲರೂ ಒಟ್ಟಾಗಿ ದುರ್ಗಾಪೂಜೆ ಕೈಗೊಳ್ಳುತ್ತೇವೆ. ಇದು ಒಗ್ಗಟ್ಟಿನ ಭಾರತದ ಸೂಚಕವಾಗಿದೆ ಎಂದಿದ್ದ ನುಸ್ರತ್, ಸಾಂಪ್ರದಾಯಿಕ ಸೀರೆಯನ್ನುಟ್ಟು, ಹಣೆಗೆ ಸಿಂಧೂರ ಹಾಗೂ ಮಂಗಳಸೂತ್ರವನ್ನು ಹಾಕಿಕೊಂಡು ಹಬ್ಬದ ಸಂಭ್ರಮದಲ್ಲಿದ್ದ ನುಸ್ರತ್ ಕಂಡು ಮುಸ್ಲಿಂ ಮೌಲ್ವಿಗಳ ಕೆಂಗಣ್ಣು ಬೀರಿದ್ದಾರೆ. ಕೋಲ್ಕತ್ತಾದಲ್ಲಿ ನಡೆದ ದುರ್ಗಾ ಪೂಜೆ ಪತಿ ಜೊತೆಗೂಡಿ ಪೂಜೆ ಸಲ್ಲಿಸಿದ್ದರು.
Recommended Video
|
ಧಾರ್ಮಿಕ ನಂಬಿಕೆ ಬಗ್ಗೆ ನುಸ್ರತ್ ಸ್ಪಷ್ಟನೆ
"ಎಲ್ಲ ಧರ್ಮದ ಸೌಹಾರ್ದತೆ ಸಾರಲು ನನ್ನದೇ ಆದ ದಾರಿಯಲ್ಲಿ ನಾನು ಹೋಗುತ್ತಿದ್ದೇನೆ. ನಾನು ಮಾಡುತ್ತಿರುವ ಸರಿಯೆಂದು ನನಗನಿಸುತ್ತಿದೆ. ನಾವು ಎಲ್ಲ ಧರ್ಮದ ಹಬ್ಬಗಳನ್ನು ಆಚರಿಸಬೇಕು" ಎಂದು ಬಷಿರಾತ್ ಸಂಸದೆ ನುಸ್ರತ್ ಸಮರ್ಥಿಸಿಕೊಂಡಿದ್ದಾರೆ.
ನನಗೆ ನನ್ನ ಧರ್ಮದ ಬಗ್ಗೆ ತಿಳಿದಿದೆ. ನಾನು ಹುಟ್ಟಿನಿಂದಲೂ ಮುಸ್ಲಿಮಳು. ಈಗಲೂ ಮುಸ್ಲಿಂ. ಇದು ನಂಬಿಕೆಯ ವಿಚಾರ. ಅದನ್ನು ನಿಮ್ಮ ಹೃದಯದಲ್ಲಿ ಅನುಭವಿಸಬೇಕು, ತಲೆಯಲ್ಲಿ ಅಲ್ಲ' ಎಂದು ಹೇಳಿದರು.












Click it and Unblock the Notifications