ಮದುವೆ, ಮತಾಂತರ: ಕೋಲ್ಕತ್ತ ಹೈಕೋರ್ಟ್ ಮಹತ್ವದ ತೀರ್ಪು

ಕೋಲ್ಕತ್ತ, ಡಿಸೆಂಬರ್ 23: ಮದುವೆ, ಮತಾಂತರದ ಬಗ್ಗೆ ಕೋಲ್ಕತ್ತ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.

ವಯಸ್ಕ ಹೆಣ್ಣು ಮಗಳು ತನ್ನ ಇಚ್ಛೆಯಂತೆ ಮದುವೆಯಾಗಿ ಧರ್ಮ ಮತಾಂತರಗೊಂಡರೆ ಯಾರೂ ಹಸ್ತಕ್ಷೇಪ ಮಾಡಿ ತಡೆಯಲು ಸಾಧ್ಯವಿಲ್ಲ ಎಂದು ಕೋಲ್ಕತ್ತ ಹೈಕೋರ್ಟ್ ಆದೇಶ ನೀಡಿದೆ.

ವಯಸ್ಕ ಹೆಣ್ಣುಮಗಳು ಆಕೆಯ ಆಯ್ಕೆ ಪ್ರಕಾರ ಮದುವೆಯಾಗಿ ಪತಿಯ ಧರ್ಮಕ್ಕೆ ಮತಾಂತರವಾಗಲು ಬಯಸಿದರೆ ಮತ್ತು ತನ್ನ ತಾಯಿಯ ಮನೆಗೆ ಹಿಂತಿರುಗಲು ಮನಸ್ಸು ತೋರದಿದ್ದರೆ ಆಕೆಯ ನಿರ್ಧಾರವನ್ನು ತಡೆಯಲು ಅಥವಾ ಬದಲಾಯಿಸಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿಗಳಾದ ಸಂಜಿಬ್ ಬ್ಯಾನರ್ಜಿ ಮತ್ತು ಅರಿಜಿತ್ ಬ್ಯಾನರ್ಜಿ ನೇತೃತ್ವದ ವಿಭಾಗೀಯ ಪೀಠ ಹೇಳಿದೆ.

None Can Interfere If An Adult Marries As Per Her Choice, Converts: Calcutta HC

19 ವರ್ಷದ ಯುವತಿ ಅನ್ಯಧರ್ಮೀಯ ಯುವಕನನ್ನು ಪ್ರೀತಿಸಿ ವಿವಾಹವಾಗಿದ್ದಳು. ನಂತರ ಕೋಲ್ಕತ್ತ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ ಆಕೆಯ ತಂದೆ, ತಮ್ಮ ಮಗಳ ಮೇಲೆ ಪ್ರಭಾವ ಬೀರಿ ಅನ್ಯ ಧರ್ಮದ ವ್ಯಕ್ತಿ ಮದುವೆಯಾಗಿದ್ದು, ತನ್ನ ಮಗಳ ಹೇಳಿಕೆಯನ್ನು ಮ್ಯಾಜಿಸ್ಟ್ರೇಟರ ಮುಂದೆ ದಾಖಲು ಸಹ ಮಾಡಿಕೊಳ್ಳಲು ಬಿಡಲಿಲ್ಲ ಎಂದು ಆರೋಪಿಸಿದ್ದರು.

ಯುವತಿಯ ತಂದೆ ಸಲ್ಲಿಸಿದ ಎಫ್ಐಆರ್ ಪ್ರಕಾರ, ಪೊಲೀಸರು ಯುವತಿಯನ್ನು ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿದಾಗ ಆಕೆ ತನ್ನ ಇಷ್ಟದ ಪ್ರಕಾರವೇ ಮದುವೆಯಾಗಿರುವುದಾಗಿ ತಿಳಿಸಿದಳು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+