ಕುತೂಹಲದ ನಡೆ: ಮೋದಿ ಭೇಟಿಗೂ ಮುನ್ನ ಅವರ ಪತ್ನಿಯ ಭೇಟಿಯಾದ ದೀದಿ!

Recommended Video

      ಕುತೂಹಲ ಕೆರಳಿಸಿದ ಮೋದಿ ಪತ್ನಿ ಮತ್ತು ಮಮತಾ ಬ್ಯಾನರ್ಜಿ ಭೇಟಿ | Oneindia Kannada

      ಕೊಲ್ಕತ್ತಾ, ಸೆಪ್ಟೆಂಬರ್ 18: ಬುಧವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಲಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಮಂಗಳವಾರ ಮೋದಿ ಪತ್ನಿ ಜಶೋದಾಬೆನ್ ಅವರನ್ನು ಭೇಟಿಯಾದರು.

      ಕೊಲ್ಕತ್ತಾ ವಿಮಾನ ನಿಲ್ದಾಣದಲ್ಲಿ ಅವರನ್ನು ಭೇಟಿಯಾದ ದೀದಿ ನಡೆ ಸಾಕಷ್ಟು ಕುತೂಹಲ ಕೆರಳಿಸಿದೆ.

      ಜಾರ್ಖಂಡ್ ನ ಧಾನ್ಬಾದ್ ಎಂಬಲ್ಲಿಗೆ ತೆರಳಿದ್ದ ಜಶೋದಾಬೆನ್ ಕೊಲ್ಕತ್ತಾ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದರು. ಇದೇ ಸಂದರ್ಭದಲ್ಲಿ ದೆಹಲಿಗೆ ಹೊರಟಿದ್ದ ಮಮತಾ ಬ್ಯಾನರ್ಜಿ ಅವರೂ ಕೊಲ್ಕತ್ತಾ ವಿಮಾನ ನಿಲ್ದಾಣಕ್ಕೆ ಬಂದಿದ್ದರು.

      Mamata Banerjee met PM Narendra Modi;s wife Jashodaben in Kolkata Airport

      "ಇದೊಂದು ಆಕಸ್ಮಿಕ ಭೇಟಿಯಷ್ಟೇ" ಎಂದು ಟಿಎಂಸಿ ವಕ್ತಾರರು ಹೇಳಿದ್ದು, ಮೂಲಗಳ ಪ್ರಕಾರ ಮಮತಾ ಬ್ಯಾನರ್ಜಿ ಮತ್ತು ಜಶೋದಾಬೆನ್ ಕೆಲವು ಸಮಯ ಮಾತುಕತೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಮಮತಾ ಬ್ಯಾನರ್ಜಿ ಜಶೋದಾಬೆನ್ ಅವರಿಗೆ ಸೀರೆಯನ್ನು ಉಡುಗೊರೆ ನೀಡಿದರು ಎಂಬ ವಿಷಯವೂ ತಿಳಿದುಬಂದಿದೆ.

      ಕೆಲಕಾಲ ಇಬ್ಬರೂ ಉಭಯಕುಶಲೋಪರಿಯನ್ನಷ್ಟೇ ಮಾತನಾಡಿದ್ದು, ಇದು ಆಕಸ್ಮಿಕ ಭೇಟಿಯಷ್ಟೇ, ಮಮತಾ ಬ್ಯಾನರ್ಜಿ ಅವರು ಮೋದಿಯವರನ್ನು ಭೇಟಿಯಾಗಲು ಹೊರಟ ಮುನ್ನಾದಿನವೇ ಜಶೋದಾಬೆನ್ ಅವರು ಸಿಕ್ಕಿದ್ದು ಕಾಕತಾಳೀಯ ಎಂದು ಟಿಎಂಸಿ ವಕ್ತಾರರು ಹೇಳಿದ್ದಾರೆ.

      ಇಂದು ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೊದಿ ಅವರನ್ನು ಮಮತಾ ಬ್ಯಾನರ್ಜಿ ಭೇಟಿಯಾಗಲಿದ್ದು, ಉಭಯ ನಾಯಕರ ಭೇಟಿ ಕುತೂಹಲ ಕೆರಳಿಸಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+