ಪಶ್ಚಿಮ ಬಂಗಾಳದಲ್ಲಿ ಕೊರೊನಾ ಸೋಂಕಿತ 2ನೇ ಪ್ರಕರಣ ದಾಖಲು
ಕೊಲ್ಕತ್ತ, ಮಾರ್ಚ್ 20: ಪಶ್ಚಿಮ ಬಂಗಾಳದಲ್ಲಿ 2ನೇ ಕೊರೊನಾ ಸೋಂಕಿತ ಪ್ರಕರಣ ದೃಢಪಟ್ಟಿದೆ.
ಮಾರ್ಚ್ 13ರಂದು 22 ವರ್ಷದ ವ್ಯಕ್ತಿಯೊಬ್ಬ ಲಂಡನ್‌ನಿಂದ ಕೊಲ್ಕತ್ತಗೆ ಮರಳಿದ್ದನು ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಇತ್ತೀಚೆಗಷ್ಟೇ ಯುಕೆಯಿಂದ ಕೊಲ್ಕತ್ತಕ್ಕೆ ಆಗಮಿಸಿದ್ದ ವ್ಯಕ್ತಿಯೊಬ್ಬನಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಮಾರ್ಚ್ 16ರಂದು ಆತನಿಗೆ ಜ್ವರ, ಕಫ ಕಾಣಿಸಿಕೊಂಡಿತ್ತು.ತೀವ್ರ ನಿಗಾದಲ್ಲಿಡಲಾಗಿತ್ತು. ಆತನನ್ನು 14 ಇನಗಳ ಕಾಲ ದಿಗ್ಬಂಧನದಲ್ಲಿಡಲಾಗಿದೆ.

ದೇಶದಲ್ಲಿ ಇದುವರೆಗೂ 5 ಮಂದಿ ಕೊರೊನಾ ವೈರಸ್‌ನಿಂದ ಮೃತಪಟ್ಟಿದ್ದಾರೆ.ವಿಶ್ವದಾದ್ಯಂತ 10048 ಮಂದಿ ಸಾವನ್ನಪ್ಪಿದ್ದಾರೆ. ಮಹಾರಾಷ್ಟ್ರದಲ್ಲಿ ಹೊಸದಾಗಿ ಮೂರು ಪ್ರಕರಣಗಳು ದಾಖಲಾಗಿವೆ. ಶುಕ್ರವಾರ ಬೆಳಗ್ಗೆ ಜೈಪುರದಲ್ಲಿ ಇಟಲಿ ಮೂಲದ ವ್ಯಕ್ತಿಯೊಬ್ಬ ಮೃತಪಟ್ಟಿರುವುದು ವರದಿಯಾಗಿದೆ.
ಮಹಾರಾಷ್ಟ್ರದಲ್ಲಿ ರಸ್ತೆಯಲ್ಲಿ ಸೀನುವಾಗ ಕರ್ಚಿಫ್ ಅಡ್ಡವಿಟ್ಟುಕೊಳ್ಳದ ಪರಿಣಾಮ ವ್ಯಕ್ತಿಗೆ ಸಾರ್ವಜನಿಕರು ಥಳಿಸಿದ್ದಾರೆ.












Click it and Unblock the Notifications