ಪ್ರಧಾನಿ ಮೋದಿಯನ್ನು ತೆಗೆದು ಹಾಕಬೇಕೆಂದು ಎಂದಾದರೂ ನಾನು ಹೇಳಿದ್ದೀನಾ?

ಕೋಲ್ಕತ್ತಾ, ಜೂನ್ 5: ಕೋವಿಡ್ ಮತ್ತು ಅಂಪಾನ್ ಚಂಡಮಾರುತದ ವಿಚಾರವನ್ನು ಮುಂದಿಟ್ಟುಕೊಂಡು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಕೇಂದ್ರ ಸರಕಾರದ ವಿರುದ್ದ ಕಿಡಿಕಾರಿದ್ದಾರೆ.

Recommended Video

      ಬದಲಾಯಿಸಲು ಯಾರೆಲ್ಲಾ ಸ್ಟಾರ್ ಗಳು ಬಂದಿದ್ದಾರೆ ನೋಡಿ | Badalagu Neenu Badalayisu Neenu | Oneindia Kannada

      ಈ ಬಗ್ಗೆ ಟ್ವೀಟ್ ಮಾಡಿರುವ ಮಮತಾ, "ನಾನು ಪ್ರಧಾನಿ ಮೋದಿಯನ್ನು ಕೇಂದ್ರ ಸರಕಾರದಿಂದ ತೆಗೆದು ಹಾಕಬೇಕೆಂದು ಯಾವತ್ತಾದರೂ ಹೇಳಿದ್ದೀನಾ"ಎಂದು ಪ್ರಶ್ನಿಸಿದ್ದಾರೆ.

      "ಕೋವಿಡ್ ಮತ್ತು ಅಂಪಾನ್ ಚಂಡಮಾರುತದ ಹಾನಿಯನ್ನು ಸರಿಪಡಿಸಲು ನಾವು ಹೋರಾಡುತ್ತಿದ್ದಾಗ, ಕೆಲವು ಪಕ್ಷಗಳು ನನ್ನನ್ನು ವಜಾಗೊಳಿಸಲು ಆಗ್ರಹಿಸಿತ್ತು. ನಾನು ಯಾವತ್ತೂ ಪ್ರಧಾನಿ ಮೋದಿಯನ್ನು ದೆಹಲಿ ಗದ್ದುಗೆಯಿಂದ ತೆಗೆದು ಹಾಕಬೇಕೆಂದು ಆಗ್ರಹಿಸಲಿಲ್ಲ"ಎಂದು ಮಮತಾ ಟ್ವೀಟ್ ಮಾಡಿದ್ದಾರೆ.

      I Never Said PM Modi Should Be Removed From Cental Government: West Bengal CM Mamata Banerjee Tweet

      "ನಾವು ಎದುರಿಸುತ್ತಿರುವ ಇಂತಹ ಸಂದಿಗ್ದ ಸಮಯದಲ್ಲಿ ಇದು ರಾಜಕೀಯ ಮಾಡುವ ಸಮಯವೇ. ಮೂರು ತಿಂಗಳಿನಲ್ಲಿ ಅವರು ಎಲ್ಲಿದ್ದರು. ನಾವು ಇಲ್ಲಿ ಕೆಲಸ ಮಾಡುತ್ತಿರುವುದು"ಎಂದು ಮಮತಾ ಟ್ವೀಟ್ ಮೂಲಕ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

      "ಅದೇನೇ ಅಡೆತಡೆ ಇರಲಿ ನಾವು ಕೋವಿಡ್ ಮತ್ತು ನಮ್ಮ ಸರಕಾರದ ವಿರುದ್ದದ ಪಿತೂರಿಯ ಮೇಲೆ ವಿಜಯ ಸಾಧಿಸುತ್ತೇವೆ"ಎಂದು ಮಮತಾ ಬ್ಯಾನರ್ಜಿ, ಕೇಂದ್ರ ಸರಕಾರಕ್ಕೆ ಟಾಂಗ್ ನೀಡಿದ್ದಾರೆ.

      ಅಂಪನ್ ಚಂಡಮಾರುತದಿಂದ ಆದ ಹಾನಿಯನ್ನು ಮುಂದಿಟ್ಟುಕೊಂಡು ಮಮತಾ ಬ್ಯಾನರ್ಜಿ ಸರಕಾರ ದುಡ್ಡು ಹೊಡೆಯಲು ಪ್ರಯತ್ನಿಸುತ್ತಿದೆ ಎಂದು ಬಿಜೆಪಿ ಆರೋಪಿಸಿತ್ತು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+