ಅಮಿತ್ ಶಾ ರ‍್ಯಾಲಿಯಲ್ಲಿ 'ಗೋಲಿ ಮಾರೋ..' ಘೋಷಣೆ
ಕೊಲ್ಕತ್ತಾ, ಮಾರ್ಚ್ 01: ಗೃಹ ಸಚಿವ ಅಮಿತ್ ಶಾ ಅವರಿಂದು ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಿದ್ದು, ಬೃಹತ್ ರ‍್ಯಾಲಿ ನಡೆಸಿದ್ದಾರೆ. ಆದರೆ ರ‍್ಯಾಲಿಯಲ್ಲಿ ಹಿಂಸೆಗೆ ಪ್ರಚೋದನೆ ನೀಡುವ ಘೊಷಣೆಗಳನ್ನು ಕೂಗಲಾಗಿದೆ.
Recommended Video
amith
ಕೊಲ್ಕತ್ತದಲ್ಲಿ ಅಮಿತ್ ಶಾ ನೇತೃತ್ವದಲ್ಲಿ 'ಆರ್ ನೋಯ್ ಅನಾಯ್' (ಅನ್ಯಾಯ ಇನ್ನು ಸಹಿಸಲ್ಲ) ಬೃಹತ್ ಬಿಜೆಪಿ ಸಮಾವೇಶ ಹಮ್ಮಿಕೊಳ್ಳಲಾಗಿದ್ದು, ರ‍್ಯಾಲಿಗೆ ಹೋಗುತ್ತಿದ್ದ ಬಿಜೆಪಿ ಬಾವುಟಗಳನ್ನು ಹಿಡಿದ ಗುಂಪೊಂದು 'ಗೋಲಿ ಮಾರೋ..' ಘೋಷಣೆಗಳನ್ನು ಕೂಗಿದೆ. ಅಮಿತ್ ಶಾ ರ‍್ಯಾಲಿಗೆ ಬಂದಿದ್ದ ಒಬ್ಬ ವ್ಯಕ್ತಿ ಚಾಕು ತಂದಿದ್ದ ಎನ್ನುವ ಮಾಹಿತಿ ಇದ್ದು, ಈ ಸುದ್ದಿ ಖಚಿತವಾಗಿಲ್ಲ.
ನಿನ್ನೆಯಷ್ಟೆ ದೆಹಲಿಯ ಮೆಟ್ರೋನಲ್ಲಿ ಕೆಲವು ಯುವಕರು 'ಗೋಲಿ ಮಾರೋ...' ಘೋಷಣೆ ಕೂಗಿದ್ದರು. ಅವರನ್ನು ಬಂಧಿಸಲಾಗಿತ್ತು. ಘಟನೆ ನಡೆದ ಮಾರನೇಯ ದಿನವೇ ಅಮಿತ್ ಶಾ ರ‍್ಯಾಲಿಯಲ್ಲಿಯೇ ಹಿಂಸಾತ್ಮಕ ಘೊಷಣೆ ಕೂಗಲಾಗಿದೆ.

'ಬಿಜೆಪಿಯು ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ' ಎಂದು ಅಮಿತ್ ಶಾ ಹೇಳಿದರು.












Click it and Unblock the Notifications