ಅಪಾಯಕಾರಿ ಮೊಮೊ ಚಾಲೆಂಜ್‌ಗೆ ಕುಮ್ಮಕ್ಕು: ವಿದ್ಯಾರ್ಥಿ ಅರೆಸ್ಟ್

ಕೊಲ್ಕತ್ತ, ಸೆಪ್ಟೆಂಬರ್ 1: ಮೊಮೊ ಚಾಲೆಂಜ್ ಇದೀಗ ಬ್ಲೂವೇಲ್ ಗೇಮ್‌ನಂತೆಯೇ ದೇಶದೆಲ್ಲೆಡೆ ಬಹುಬೇಗ ಹಬ್ಬುತ್ತಿದೆ. ಇದೀಗ ಕೋಲ್ಕತ್ತದಲ್ಲಿ ಈ ಆಟಕ್ಕೆ ಆಹ್ವಾನ ನೀಡುತ್ತಿದ್ದ ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

ಮೊಮೊ ಚಾಲೆಂಜ್‌ ಎಲ್ಲೆಡೆ ಹಬ್ಬದಂತೆ ತಡೆಯುವುದು ಎಲ್ಲರ ಕರ್ತವ್ಯವಾಗಿದೆ, ತನ್ನ ಹೆಸರನ್ನು ಎಲ್ಲಿಯೂ ಬಳಕೆ ಮಾಡದೆ ಸಹಪಾಠಿಗಳು, ಸಂಬಂಧಿಕರಿಗೆ ಮೋಮೊ ಆಟಕ್ಕೆ ಆಹ್ವಾನ ನೀಡುತ್ತಿದ್ದ ಎಂದು ತಿಳಿದುಬಂದಿದೆ.

ಹಣ ಸುಲಿಗೆ ಅಥವಾ ಏನಾದುರು ದುರುದ್ದೇಶವಿತ್ತೇ ಎನ್ನುವುದು ತನಿಖೆ ಬಳಿಕ ತಿಳಿದುಬರಲಿದೆ. ದುರ್ಗಾಪುರದಲ್ಲಿರುವ ಖಾಸಗಿ ಎಂಜಿನಿಯರ್ ಕಾಲೇಜಿನ ವಿದ್ಯಾರ್ಥಿ ಅರಿಂದಮ್ ಪಾತ್ರ (20) ಬಂಧಿತ ಆರೋಪಿ.

Deadly MoMo challenge Game: Kolkata police arrest engg. student

ಆದರೆ ಬೆದರಿಕೆ ಹಾಕುವುದಷ್ಟೇ ಆರೋಪಿಯ ಉದ್ದೇಶವಾಗಿತ್ತು ಎಂದು ಮೇಲ್ನೋಟಕ್ಕೆ ಗೋಚರಿಸುವ ಅಂಶವಾಗಿದೆ. ಆರೋಪಿ ಜತೆ ಇನ್ಯಾರದ್ದೋ ಕೈವಾಡವಿದೆಯಾ ಅಥವಾ ಈತ ಒಬ್ಬನೇ ಈ ಕೃತ್ಯದಲ್ಲಿ ತೊಡಗಿದ್ದಾನೋ ಎನ್ನುವುದರ ಕುರಿತು ವಿಚಾರಣೆ ನಡೆಯುತ್ತಿದೆ.

ಆತ ಆ ಮೋಮೊ ಗೇಮ್ ಬಂದಾಗಿನಿಂದಲೂ ಸವಾಲಿಗೆ ಆಹ್ವಾನ ನೀಡುತ್ತಿದ್ದ, ಆರೋಪಿ ವಿರುದ್ಧ ವಂಚನೆ, ಸಾರ್ವಜನಿಕರಲ್ಲಿ ಭಯ ಹುಟ್ಟಿಸುವುದು ಸೇರಿದಂತೆ ವಿವಿಧ ಕಾಯ್ದೆಯಲ್ಲಿ ಪ್ರಕರಣ ದಾಖಲಾಗಿದೆ. ಆತನ ಸ್ನೇಹಿತ ನೀಡಿದ್ದ ದೂರಿನನ್ವಯ ಪೊಲೀಸರು ಆತನನ್ನು ಬಂಧಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+