ಕೋಲ್ಕತ್ತಾದಲ್ಲಿ ಮತ್ತೊಮ್ಮೆ ಬಿಜೆಪಿಯಿಂದ ಟಿಎಂಸಿಗೆ ಮುಖಭಂಗ
ಕೋಲ್ಕತ್ತಾ, ಜುಲೈ 24: ಕೊಲ್ಕತ್ತಾದಲ್ಲಿ ತೃಣಮೂಲ ಕಾಂಗ್ರೆಸ್ ಒಂದಿಲ್ಲೊಂದು ಆಘಾತ ನೀಡುತ್ತಲೇ ಇರುವ ಬಿಜೆಪಿ ಇದೀಗ ಮತ್ತೊಂದು ಆಘಾತ ನೀಡಿದೆ.
ಕೊಲ್ಕತ್ತಾ ಹೈ ಕೋರ್ಟ್ ಬಾರ್ ಅಸೋಸಿಯೇಶನ್ ಚುನಾವಣೆಯಲ್ಲಿ ಟಿಎಂಸಿಗಿಂತಲೂ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಬಿಜೆಪಿ ಪಶ್ಚಿಮ ಬಂಗಾಳದಲ್ಲಿ ತನ್ನ ಪಾರಮ್ಯ ಸಾಧಿಸುವ ಎಲ್ಲಾ ಸೂಚನೆಗಳನ್ನೂ ನೀಡಿದೆ.
ಒಟ್ಟು 15 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 8 ಸ್ಥಾನಗಳಲ್ಲಿ ಬಿಜೆಪಿಯೇ ಗೆಲುವು ಸಾಧಿಸಿದೆ. ಆಯಕಟ್ಟಿನ ಮೂರು ಹುದ್ದೆಗಳನ್ನೂ ಬಿಜೆಪಿ ಪಡೆದುಕೊಂಡಿ. ಉಪಾಧ್ಯಕ್ಷ, ಕಾರ್ಯದರ್ಶಿ, ಅಧೀನ ಕಾರ್ಯದರ್ಶಿ ಹುದ್ದೆಗಳು ಬಿಜೆಪಿಗೆ ಒಲಿದಿವೆ ಎಂದು ಬಿಜೆಪಿ ಕಾನೂನು ವಿಭಾಗದ ಸಂಚಾಲಕ ಬ್ರಜೇಶ್ ಝಾ ಹೇಳಿದ್ದಾರೆ.

ಕಳೆದ ಬಾರಿ ನಡೆದಿದ್ದ ಹೈಕೋರ್ಟ್ ಬಾರ್ ಅಸೋಸಿಯೇಶನ್ ಚುನಾವಣೆಯಲ್ಲಿ ಟಿಎಂಸಿಯೇ ಬಹುಪಾಲು ಎಲ್ಲ ಸ್ಥಾನಗಳನ್ನೂ ಗೆದ್ದಿತ್ತು. ಅದರೆ ಈ ಬಾರಿ ಕೇವಲ 5 ಸ್ಥಾನಗಳಲ್ಲಿ ಗೆದ್ದರೆ, ಸ್ವತಂತ್ರ ಅಭ್ಯರ್ಥಿ ಅಶೋಕ್ ಕುಮಾರ್ ಧಂಢಾನಿಯಾ ಅವರು ಅಧ್ಯಕ್ಷ ಸ್ಥಾನ ಗೆದ್ದರು.












Click it and Unblock the Notifications