ಕೊಲ್ಕತ್ತ: ಬಾಂಬ್ ಸ್ಫೋಟ ಒಂದು ಸಾವು, 12 ಜನಕ್ಕೆ ಗಾಯ

ಕೊಲ್ಕತ್ತ, ಅಕ್ಟೋಬರ್ 02: ಪಶ್ಚಿಮ ಬಂಗಾಳದ ಕೊಲ್ಕತ್ತದಲ್ಲಿ ಇಂದು ಮಧ್ಯಾಹ್ನದ ವೇಳೆಗೆ ಕಚ್ಚಾ ಬಾಂಬ್ ದಾಳಿ ನಡೆದಿದ್ದು, ಒಂದು ದಾಳಿಯಿಂದ ಒಂದು ಮಗು ಅಸುನೀಗಿದ್ದರೆ, ಹಲವು ಜನ ತೀವ್ರವಾಗಿ ಗಾಯಗೊಂಡಿದ್ದಾರೆ.

ಕೊಲ್ಕತ್ತದ ಪಶ್ಚಿಮ ಭಾಗದ ನಗೇರ್ ಬಾಜಾರ್ ಎಂಬಲ್ಲಿ ಕಚ್ಚಾ ಬಾಂಬ್ ಸ್ಪೋಟ ಸಂಭವಿಸಿದ್ದು, ಸ್ಪೋಟದಲ್ಲಿ ಇಬ್ಬರು ಮಕ್ಕಳು ಸೇರಿದಂತೆ 10 ಜನ ಗಾಯಾಳುಗಳಾಗಿದ್ದರು. ಅದರಲ್ಲಿ ಒಂದು ಮಗು ಮೃತಪಟ್ಟಿದೆ.

ಮಧ್ಯಮ ಪ್ರಮಾಣದ ಸ್ಪೋಟ ಇದಾಗಿದ್ದು, ಕಚ್ಚಾ ಬಾಂಬ್‌ನಿಂದ ಮಾಡಲಾಗಿರುವ ಸ್ಪೋಟ ಎಂದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. ಘಟನೆ ನಡೆದ ಸ್ಥಳದಲ್ಲಿ ಕೆಲವು ಕಬ್ಬಿಣದ ಮೊಳೆ, ಗಾಜಿನ ಚೂರುಗಳು ದೊರೆತಿವೆ ಆದರೆ ಗನ್‌ ಪೌಡರ್‌ ಬಳಸಿರುವ ಬಗ್ಗೆ ಖಚಿತವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

Bomb blast in kolkata one died several injured

ಬಾಂಬ್ ಸ್ಪೋಟವು ತೃಣಮೂಲ ಕಾಂಗ್ರೆಸ್ ಕಚೇರಿಯ ಎದುರುಗಡೆಯೇ ಆಗಿದೆ. ಕಚೇರಿಯನ್ನು ಗುರಿಯಾಗಿಸಿಕೊಂಡು ಬಾಂಬ್ ಸ್ಪೋಟ ಮಾಡಲಾಗಿದೆ ಎಂದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.

ಅಂಗಡಿಯ ಶಟರ್‌ ಹಿಂದೆ ಬಾಂಬ್ ಇಡಲಾಗಿತ್ತು. ಬಾಂಬ್ ಸ್ಪೋಟಕ್ಕೆ ಶಟರ್ ತುಂಡಾಗಿದೆ. ಮೂರು ಅಂತಸ್ತಿನ ಬಿಲ್ಡಿಂಗ್‌ನ ಕಿಟಕಿ ಗಾಜುಗಳು ಒಡೆದಿವೆ. ಮೇಲ್ನೋಟಕ್ಕೆ ಕಚ್ಚಾ ಬಾಂಬ್‌ ನಂತೆ ಕಂಡು ಬರುತ್ತಿದ್ದರೂ ತೀವ್ರವಾದ ಸ್ಪೋಟವೇ ಆಗಿದೆ ಎಂದು ಸ್ಥಳೀಯ ಪೊಲೀಸ್ ಕಮಿಷನರ್ ಹೇಳಿದ್ದಾರೆ.

Bomb blast in kolkata one died several injured

ಸ್ಪೋಟದಿಂದ ಕೆಲವು ತೀವ್ರವಾಗಿ ಗಾಯಗೊಂಡಿದ್ದು, ಗಾಯಗೊಂಡವರನ್ನು ಆರ್‌.ಜಿ.ಕರ್ ಮೆಡಿಕಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+