ಬಿಜೆಪಿ ಹೊರಗಿನ ಪಕ್ಷ ಪಶ್ಚಿಮ ಬಂಗಾಳದಲ್ಲಿ ಜಾಗವಿಲ್ಲ: ಮಮತಾ ಬ್ಯಾನರ್ಜಿ
ಕೋಲ್ಕತ್ತ, ನವೆಂಬರ್ 26: ಬಿಜೆಪಿಯು ಹೊರಗಿನವರ ಪಕ್ಷ ಪಶ್ಚಿಮ ಬಂಗಾಳದಲ್ಲಿ ಅದಕ್ಕೆ ಜಾಗವಿಲ್ಲ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ದೇಶದ ಗಡಿಯಲ್ಲಿ ಪರಿಸ್ಥಿತಿ ಸರಿ ಇಲ್ಲದಿದ್ದರೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಾತ್ರ ಚುನಾವಣೆಯಲ್ಲಿ ನಿರತರಾಗಿರುವ ಬಗ್ಗೆ ಆಶ್ಚರ್ಯವ್ಯಕ್ತಪಡಿಸಿದ ಮಮತಾ ಬ್ಯಾನರ್ಜಿ , ತಮ್ಮ ವೃತ್ತಿ ಜೀವನದಲ್ಲೇ ಇಂತಹವರನ್ನು ಎಲ್ಲೂ ನೋಡಿಲ್ಲ ಎಂದರು.
ಪಶ್ಚಿಮ ಬಂಗಾಳವನ್ನು ಗಲಭೆ ಪೀಡಿತ ಗುಜರಾತ್ ಆಗಿ ಪರಿವರ್ತಿಸಲು ಎಂದಿಗೂ ಬಿಡುವುದಿಲ್ಲ ಎಂದರು.ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ಮೇಲೆ ಕಣ್ಣಿಟ್ಟಿರುವ ಬಿಜೆಪಿ ಇತ್ತೀಚೆಗೆ ರಾಜ್ಯವನ್ನು ಐದು ಸಾಂಸ್ಥಿಕ ವಲಯಗಳನ್ನಾಗಿ ವಿಂಗಡನೆ ಮಾಡಿದೆ. ಕೇಂದ್ರ ನಾಯಕರನ್ನು ಅವುಗಳ ಉಸ್ತುವಾರಿಯನ್ನಾಗಿ ನೇಮಿಸಿದೆ.

ಬಂಗಾಳದಲ್ಲಿ ಹೊರಗಿನವರಿಗೆ ಸ್ಥಾನವಿಲ್ಲ, ಚುನಾವಣೆಯ ಸಮಯದಲ್ಲಿ ಮಾತ್ರ ಇಲ್ಲಿಗೆ ಬಂದು ಇಲ್ಲಿನ ಶಾಂತಿಯನ್ನು ಕದಡುವ ಪ್ರಯತ್ನ ಮಾಡುವವರಿಗೆ ಎಂದಿಗೂ ಸ್ವಾಗತವಿಲ್ಲ ಎಂದರು.
ಪಶ್ಚಿಮ ಬಂಗಾಳವನ್ನೂ ಗುಜರಾತ್‌ನಂತೆ ಗಲಭೆಪೀಡಿತ ರಾಜ್ಯವನ್ನಾಗಿ ಮಾಡಲು ಯತ್ನಿಸುತ್ತಿದ್ದಾರೆ, ನಮಗೆ ಶಾಂತಿ ಬೇಕು ಗಲಭೆ ಬೇಡ ಎಂದು ಹೇಳಿದರು.












Click it and Unblock the Notifications