ಪ್ರಿಯಾಂಕ ಹೋಲುವಂತೆ ಮಮತಾ ಬ್ಯಾನರ್ಜಿ ಚಿತ್ರ ಎಡಿಟ್: ಬಿಜೆಪಿ ನಾಯಕಿ ಅರೆಸ್ಟ್
ಕೊಲ್ಕತ್ತಾ, ಮೇ 11: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಚಿತ್ರವನ್ನು ಕ್ರಾಪ್ ಮಾಡಿ, ಸಾಮಾಜಿಕ ತಾಣದಲ್ಲಿ ಹರಿಯಬಿಟ್ಟ ಬಿಜೆಪಿಯ ಯುವ ನಾಯಕಿಯನ್ನು ಬಂಗಾಳ ಪೊಲೀಸರು ಬಂಧಿಸಿದ್ದಾರೆ. ಆಕೆಯನ್ನು ಹದಿನಾಲ್ಕು ದಿನಗಳ ನ್ಯಾಯಾಂಗ ಬಂಧನಕ್ಕೆ ಗುರಿಪಡಿಸಲಾಗಿದೆ.
ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ 'ಎಂಇಟಿ ಗಾಲಾ - 2019' ಫ್ಯಾಷನ್ ಶೋನಲ್ಲಿ ಕಾಣಿಸಿಕೊಂಡ ರೀತಿಯಲ್ಲಿ ಮಮತಾ ಬ್ಯಾನರ್ಜಿಯ ಚಿತ್ರವನ್ನು ಎಡಿಟ್ ಮಾಡಿ, ಪಶ್ಚಿಮ ಬಂಗಾಳದ ಯುವ ನಾಯಕಿ, ಹೌರಾ ಜಿಲ್ಲೆಯ ಬಿಜೆಪಿ ಸಂಚಾಲಕಿ ಪ್ರಿಯಾಂಕ ಶರ್ಮಾ ಎನ್ನುವವರು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದರು.
ಈ ಬಗ್ಗೆ ತೃಣಮೂಲ ಕಾಂಗ್ರೆಸ್ ಮುಖಂಡ ವಿಭಾಸ್ ಹಜ್ರಾ ಎನ್ನುವವರು ಪೊಲೀಸರಿಗೆ ದೂರು ನೀಡಿದ್ದರು. ಹೌರಾ ಪೊಲೀಸರು ಪ್ರಿಯಾಂಕ ಶರ್ಮಾ ಅವರನ್ನು ಬಂಧಿಸಿ ಹೌರಾ ಕೋರ್ಟಿಗೆ ಹಾಜರು ಪಡಿಸಿದರು.

ಇದೊಂದು ಸೈಬರ್ ಕ್ರೈಂ ಆಗಿದ್ದು, ಮಮತಾ ಬ್ಯಾನರ್ಜಿಯವರ ಸಂಸ್ಕೃತಿಯನ್ನು ಅವಮಾನಿಸುವ ಕೆಲಸವಾಗಿದೆ ಎಂದು ಟಿಎಂಸಿ ನಾಯಕ, ಪೊಲೀಸರಿಗೆ ನೀಡಿದ ದೂರಿನಲ್ಲಿ ಬರೆದಿದ್ದಾರೆ.
ಬಿಜೆಪಿಯವರಿಗೆ ಅಸಹಿಷ್ಣುತೆ ಎಂದು ಹೋದಲೆಲ್ಲಾ ದೂರುತ್ತಿರುವ ಮಮತಾ ಬ್ಯಾನರ್ಜಿ ಈಗ ಮಾಡುತ್ತಿರುವುದು ಏನು ಎಂದು ಬಿಜೆಪಿ ಮುಖಂಡರು ಹೇಳಿಕೆಯನ್ನು ನೀಡಿದ್ದಾರೆ.
ಪ್ರಿಯಾಂಕ ಚೋಪ್ರಾ 'ಎಂಇಟಿ ಗಾಲಾ - 2019' ಚಿತ್ರವನ್ನು ಎಡಿಟ್ ಮಾಡಿ ಮಮತಾ ಬ್ಯಾನರ್ಜಿ ಮುಖವನ್ನು ಹಾಕಲಾಗಿತ್ತು. ಪಶ್ಚಿಮ ಬಂಗಾಳದ ಪೊಲೀಸರ ಕ್ರಮಕ್ಕೆ ಟ್ವಿಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.












Click it and Unblock the Notifications