ಕೋಲಾರಕ್ಕೂ ತಟ್ಟಿದ ಉಗ್ರಗಾಮಿಗಳ ಕರಿ ನೆರಳು; ಇಬ್ಬರ ಬಂಧನ
ಕೋಲಾರ, ಜನವರಿ 13: ಶಂಕಿತ ಉಗ್ರನ ಜೊತೆ ಸಂಪರ್ಕ ಹೊಂದಿದ್ದ ಆರೋಪದಡಿ ಕೋಲಾರದಲ್ಲಿ ಇಬ್ಬರನ್ನು ಬಂಧಿಸಲಾಗಿದೆ.
ತಮಿಳುನಾಡು ಮೂಲದ ಕ್ಯೂ ಬ್ರಾಂಚ್ ಪೊಲೀಸರು ಕೋಲಾರದ ಪ್ರಶಾಂತ್ ನಗರದ ಮೊಹಮದ್ ಜಹೀದ್ (28), ಬೀಡಿ ಕಾಲೋನಿ ನಿವಾಸಿ ಇಮ್ರಾನ್ ಖಾನ್ (42) ಅವರನ್ನು ಬಂಧಿಸಿದ್ದಾರೆ.
ಉಗ್ರಗಾಮಿ ಮೆಹಬೂಬ್ ನೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ತಾಂತ್ರಿಕ ನೆರವು ನೀಡುತ್ತಿದ್ದ ಆರೋಪದಡಿ ಈ ಇಬ್ಬರನ್ನು ಬಂಧಿಸಲಾಗಿದೆ. ಜನವರಿ 3ರಂದು ಬೆಂಗಳೂರು ಸಿಸಿಬಿ ಪೊಲೀಸರ ನೆರವಿನೊಂದಿಗೆ ಕ್ಯೂ ಬ್ರಾಂಚ್ ಪೊಲೀಸರು ಇವರನ್ನು ಬಂಧಿಸಿದ್ದಾರೆ.

ಬೆಂಗಳೂರಿನಲ್ಲಿ ನಕಲಿ ದಾಖಲಾತಿ ಸಿದ್ಧ ಮಾಡಿಕೊಂಡು ವಿದೇಶಕ್ಕೆ ಹಾರಲು 12 ಜನ ಸಿದ್ಧವಾಗಿದ್ದ ಮಾಹಿತಿಯೂ ದೊರೆತಿದ್ದು, ಆ ಮಾಹಿತಿ ಆಧರಿಸಿ ಪೊಲೀಸರು ಬಂಧಿಸಿದ್ದಾರೆ. ಬಂಧನದ ಬಗ್ಗೆ ಕೋಲಾರದ ಸ್ಥಳೀಯ ಪೊಲೀಸರಿಗೂ ಮಾಹಿತಿ ಇರಲಿಲ್ಲ. ಸದ್ಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ನಂತರ ಮಾಹಿತಿ ಬಹಿರಂಗವಾಗಿದೆ.












Click it and Unblock the Notifications